ಉಜಿರೆಯ ಕುರಿಯ ವಿಟ್ಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡು ಶೇಣಿ ಜಂಗಮದ ಸಹಭಾಗಿತ್ವದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಕುರಿಯ ಪ್ರತಿಷ್ಠಾನ ವಿಂಶತಿ – ಶೇಣಿ ಶತಕ ಸರಣಿ ಅಂಗವಾಗಿ ಆಯೋಜಿಸಿದ ತಾಳಮದ್ದಳೆ ಸಪ್ತಾಹ, ಬಯಲಾಟದ ಸಂದರ್ಭ ವಿಟ್ಲ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ರಸಋಷಿ ದೇರಾಜೆ ಸಭಾಂಗಣ-ರಸಿಕರತ್ನ ವಿಟ್ಲ ಜೋಷಿ ವೇದಿಕೆಯಲ್ಲಿ ಸಪ್ತಾಹದ ಸಮಾರೋಪ ಸಮಾರಂಭ ಮತ್ತು ಇಬ್ಬರಿಗೆ ಸಮ್ಮಾನ ಹಾಗೂ ಬಯಲಾಟ ನಡೆಯಿತು.
ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಸಮಾರೋಪ ಭಾಷಣ ಮಾಡಿದರು. ಪ್ರತಿಷ್ಠಾನದ ಪರವಾಗಿ ಕಲಾಪೋಷಕರು, ಸಂಘಟಕರಾದ ಶಾಂತಾರಾಮ ಕುಡ್ವ ಮತ್ತು ಸದಾಶಿವ ರಾವ್ ನೆಲ್ಲಿಮಾರು ಅವರನ್ನು ಸಮ್ಮಾನಿಸಲಾಯಿತು.
ಮೇಲುಕೋಟೆ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ, ಅರ್ಥಧಾರಿ ಉಮಾಕಾಂತ್ ಭಟ್ ಕೆರೆಕೈ, ಹರೀಶ್ ಜೋಷಿ ವಿಟ್ಲ, ವಿಟ್ಲ ಭಗವತೀ ದೇವಸ್ಥಾನದ ಮೊಕ್ತೇಸರ ಕೇಶವ ಆರ್.ವಿ., ಮೋನಪ್ಪ ಗುರುಸ್ವಾಮಿ, ಕನ್ಯಾನ ಬೆನಕ ಸ್ಟುಡಿಯೋ ಮಾಲಕ ವಿ.ಕುಮಾರಸ್ವಾಮಿ ಕನ್ಯಾನ, ಎಂ.ನಾ.ಚಂಬಲ್ತಿಮಾರು, ವಿಟ್ಲ ಭಾರತ್ ಶಾಮಿಯಾನ ಮಾಲಕ ಡಿ.ಸಂಜೀವ ಪೂಜಾರಿ, ಮೋಹನ ಮೊದಲಾದವರು ಉಪಸ್ಥಿತರಿದ್ದರು.
ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಎನ್.ಅಶೋಕ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೂಡ್ಲು ಶೇಣಿ ರಂಗಜಂಗಮದ ಸಂಚಾಲಕ ಶೇಣಿ ವೇಣುಗೋಪಾಲ ಭಟ್ ಸಹಕರಿಸಿದರು.
ನಿಮಿಯಜ್ಞ – ಯಕ್ಷಗಾನ ತಾಳಮದ್ದಳೆಯಲ್ಲಿ ಕಲಾವಿದರಾಗಿ ಸುಬ್ರಾಯ ಸಂಪಾಜೆ, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ, ಉಮಾಕಾಂತ್ ಭಟ್ ಕೆರೆಕೈ, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ಶ್ರೀರಮಣ ಆಚಾರ್ ಅವರು ಭಾಗವಹಿಸಿದ್ದರು. ಬಳಿಕ ಇಂದ್ರಜಿತು ಎಂಬ ಯಕ್ಷಗಾನ ಬಯಲಾಟದಲ್ಲಿ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಅಡೂರು ಗಣೇಶ ರಾವ್, ರಾಮಚಂದ್ರ ಭಟ್ ಎಲ್ಲೂರು, ರಂಜಿತಾ ಎಲ್ಲೂರು, ಪೂರ್ಣಿಮಾ ಶಾಸ್ತ್ರಿ, ವನಿತಾ ಭಟ್ ಎಲ್ಲೂರು, ರಕ್ಷಿತಾ ಎಲ್ಲೂರು, ಪ್ರಕೃತಿ, ನಿಶಾ ಭಾಗವಹಿಸಿದ್ದರು.
Be the first to comment on "ವಿಟ್ಲ ತಾಳಮದ್ದಳೆ ಸಪ್ತಾಹ ಸಮಾರೋಪ"