ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಸಮಿತಿ ಮತ್ತು ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಆಶ್ರಯದಲ್ಲಿ ತುಳುನಾಡ ಕೃಷಿ ಕ್ರಾಂತಿಯ ರೂವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ಮಾರ್ಗದರ್ಶನದಂತೆ ಪೊಸಳ್ಳಿಯ ಹಡಿಲು ಗದ್ದೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ವಿದ್ಯಾಕೇಂದ್ರದ ಎನ್‌ಎಸ್‌ಎಸ್ ವಿದ್ಯಾರ್ಥಿಗಳ, ವಿದ್ಯಾರ್ಥಿಗಳ ನಡೆ ಹಡಿಲುಗದ್ದೆಯ ಕಡೆ ಕಾರ್ಯಕ್ರಮ ನಡೆಯಿತು.
ಸೆ.10ರಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ನೇತೃತ್ವದಲ್ಲಿ ಹಡಿಲು ಗದ್ದಯನ್ನು ಉಳುಮೆ ಮಾಡಲಾಗಿತ್ತು. ಈ ಸಂದರ್ಭ ಸ್ವತಃ ಸ್ವಾಮೀಜಿಯವರೇ ಬೀಜ ಬಿತ್ತನೆ ಮಾಡಿದ್ದರು. ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಹಕಾರದೊದಿಗೆ ಭಾನುವಾರ ನೇಜಿ ಕಿತ್ತು, ಮತ್ತೆ ಉಳುಮೆ ಮಾಡಿ ನೇಜಿ ನಾಟಿ ಮಾಡಲಾಯಿತು. ಹಿರಿಯರ ಮಾರ್ಗದರ್ಶನದಂತೆ ಕೆಲ ವಿದ್ಯಾರ್ಥಿಗಳು ನೇಜಿ ನೆಟ್ಟರೆ ಇನ್ನೂ ಕೆಲವರು ನೇಜಿ ನಾಟಿ ಮಾಡಿದರು. ಪವರ್ ಟಿಲ್ಲರ್‌ನಲ್ಲಿ ಉಳುಮೆ ಮಾಡಿ ಖುಷಿ ಪಟ್ಟರು. ಬೆಳಿಗ್ಗೆ ೧೦ ಗಂಟೆಗೆ ಕೃಷಿ ಚವಟುವಟಿಕೆ ಆರಂಭಿಸಿ ಮಧ್ಯಾಹ್ನದೊಳಗೆ ಒಂದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ನಾಟಿ ಮುಗಿಸಿದರು. ಬಳಿಕ ಕೆಸರುಗದ್ದೆಯಲ್ಲಿ ಹಾಡಿ ಕುಣಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ಎನ್. ಇದಿನಬ್ಬ, ಸುದೇಶ್‌ಮಯ್ಯ ಮಾಣಿಲ ಮಹಾಲಕ್ಷಿ ಸೇವಾ ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್,ಗೌರವ ಸಲಹೆಗಾರ ದಾಮೋದರ ಬಿ.ಎಂ. ಪ್ರಧಾನ ಕಾಯದರ್ಶಿ ಕೇಶವ ಅಂತರ, ಕೋಶಾಧಿಕಾರಿ ದಾಮೋದರ ಮಾಸ್ತರ್, ಜಮೀನಿನ ಮಾಲಕರಾದ ಜನಾರ್ದನ ಪೊಸಳ್ಳಿ, ಪ್ರೇಮ ಪೊಸಳ್ಳಿ, ಪುರಸಭೆಯ ಮಾಜಿ ಅಧ್ಯಕ್ಷೆ ಯಶೋಧ ಬಿ.,ಮಾಲತಿ ಮಚ್ಚೇಂದ್ರ, ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ್ ಅಗ್ರಬೈಲು, ಕಾರ್ಯದರ್ಶಿ ಉಮೇಶ್ ಆಚಾರ್, ಪತ್ರಕರ್ತ ಮೋಹನದಾಸ್ ಮರಕಡ, ಕುಲಾಲ ಸಮುದಾಯ ಭವನದ ಮ್ಯಾನೇಜರ್ ಡೊಂಬಯ್ಯ, ಅಕ್ಷರ ಡಿಜಿಟಲ್ಸ್‌ನ ದೀಪಕ್ ಸಾಲ್ಯಾನ್ ವಿದ್ಯಾರ್ಥಿಗಳೊಂದಿಗೆ ಗದ್ದೆಗಳಿದು ನೇಜಿ ನಾಟಿ ಮಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಎನ್‌ಎಸ್‌ಎಸ್ ವಿಭಾಗದ ಕಾರ್ಯಕ್ರಮಧಿಕಾರಿಗಳಾದ ಪ್ರೊ. ಚಂದ್ರಶೇಖರ ಗೌಡ, ಪ್ರೊ.ಗುರುದೇವ ಭಾಗವಹಿಸಿದ್ದರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಮಾರ್ಗದರ್ಶನ ನೀಡಿದ್ದರು. ಮೂಡಬಿದಿರೆ ವಲಯ ಹಸಿರು ಸೇನೆಯ ಅಧ್ಯಕ್ಷ ಧನಕೀರ್ತಿ ಬಲಿಪ ಹಾಗೂ ಇರುವೈಲು ದೊಡ್ಡಗುತ್ತು ದೇವರಾಜ ರೈ ಸಂಪೂರ್ಣ ಸಹಕಾರ ನೀಡಿದರು. ರಾಜೇಶ್ ನಾಕ್ ಉಳಿಪಾಡಿಗುತ್ತು, ರೈತ ಸಂಘದ ತಾಲೂಕು ಸಂಚಾಲಕ ಸುಬ್ರಹ್ಮಣ್ಯ ಭಟ್, ಮಾಣಿಲ ಸೇವಾ ಸಮಿತಿಯ ಮಂಜು ವಿಟ್ಲ, ಪುಷ್ಪರಾಜ ಶೆಟ್ಟಿ ಈ ಸಂದರ್ಭ ಗದ್ದೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಈ ಸಂದರ್ಭ 90ರ ಹರೆಯದ ಲಿಲ್ಲಿ ಬಾ ವಿದ್ಯಾರ್ಥಿಗಳಿಗೆ ಓ ಬೇಲೆ ಪಾಡ್ದನವನ್ನು ಹಾಡಿಸಿದರು. ಕೃಷಿಕ ಮಹಿಳೆಯರಾದ ಲೀಲಾ ಹಾಗೂ ಪದ್ಮಕ್ಕ ಕೃಷಿ ಕಾರ್ಯದಲ್ಲಿ ಸಾಥ್ ನೀಡಿದರು.
VIDEO REPORT:
Be the first to comment on "ಹಡೀಲು ಗದ್ದೆಗೆ ಹಸಿರು ಹೊದಿಕೆ"