ಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷರು, ಮೊಗರ್ನಾಡು ಸಾವಿರ ಸೀಮೆ ಶ್ರೀ ಕಾಂಪ್ರಬೈಲು ಉಳ್ಳಾಲ್ತಿ ಅಜ್ವರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷರು, ಬಿಜೆಪಿ ಹಿರಿಯ ನೇತಾರ ಬಾಬು ಶೆಟ್ಟಿ ಏಳ್ತಿಮಾರು (71) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅ. 10ರಂದು ನಿಧನ ಹೊಂದಿದರು.ಮೃತರು ಪತ್ನಿಯನ್ನು ಅಗಲಿದ್ದಾರೆ.
ಅವರು ಕುದ್ರೆಬೆಟ್ಟು ಶ್ರೀ ಮಣಿಕಂಠ ಯುವಶಕ್ತಿಯ ಗೌರವ ಅಧ್ಯಕ್ಷರಾಗಿ, ಜನಶಕ್ತಿ ಸೇವಾ ಟ್ರಸ್ಟ್‌ನ ಪ್ರಮುಖರಾಗಿ, ಬಾಳ್ತಿಲ ಬಿಜೆಪಿ ಅಧ್ಯಕ್ಷರಾಗಿ, ಸಂಘಟಕರಾಗಿ, ಪ್ರಗತಿಪರ ಕೃಷಿಕರಾಗಿ, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್, ಡಾ| ಕಮಲಾ ಪ್ರ.ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಮಾಜಿ ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್, ಜಿಲ್ಲಾ ಮುಖಂಡರಾದ ದಿನೇಶ್ ಅಮ್ಟೂರು, ಹಿಂ.ಜಾ.ವೇ. ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಹಿಂದುಳಿದ ವರ್ಗ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ, ಮಂಡಲ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ ನಾಕ್, ತಾ.ಪಂ.ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಆನಂದ ಎ.ಶಂಭೂರು, ರಾಮ್‌ದಾಸ ಬಂಟ್ವಾಳ, ಬಿ. ಕೆ.ಅಣ್ಣು ಪೂಜಾರಿ, ಲೋಕಾನಂದ ಏಳ್ತಿಮಾರು, ಸುರೇಶ್ ಶೆಟ್ಟಿ , ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾದವ, ಪ್ರಮುಖರಾದ ರಮೇಶ್ ಎನ್, ರವಿರಾಜ್, ಜಿನ್ನಪ್ಪ ಏಳ್ತಿಮಾರ್, ಕುಶಾಲಪ್ಪ ಅಮ್ಟೂರು ಮೊದಲಾದ ಪ್ರಮುಖರು ಸಂತಾಪ ಸೂಚಿಸಿದರು.
Be the first to comment on "ಬಾಬು ಶೆಟ್ಟಿ ಏಳ್ತಿಮಾರು ನಿಧನ"