ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿ ಪ್ರಯುಕ್ತ ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಘಟಕ ಘಟಕ, ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ರು ಮದ್ಯವರ್ಜಿತರ ಅಭಿನಂದನಾ ಸಮಾವೇಶ ಮತ್ತು ಮದ್ಯವರ್ಜಿತರ ಅಭಿನಂದನಾ ಸಮಾರಂಭ ಅಕ್ಟೋಬರ್ 8 ರಂದು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ನಡೆಯಲಿದೆ.
ಈ ಬಗ್ಗೆ ಮಂಗಳವಾರ ಬಂಟ್ವಾಳ ಪ್ರೆಸ ಕ್ಲಬ್ ನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಅವರು, ಈ ಸಮಾವೇಶದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಮದ್ಯವರ್ಜಿತರು ಭಾಗವಹಿಸಲಿದ್ದು, ಅವರಿಗೆ ರೋಟರಿ ಕ್ಲಬ್ ನ ವತಿಯಿಂದ ಹಣ್ಣಿನ ಸಸಿಗಳನ್ನು ವಿತರಿಸಲಾಗುವುದು ಎಂದರು.
ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ 74 ಕೇಂದ್ರಗಳಲ್ಲಿ ಜನಜಾಗ್ರತಿ ಜಾಥ, ವ್ಯಸನಮುಕ್ತರಿಗೆ ಸನ್ಮಾನ, ಹಕ್ಕೊತ್ತಾಯ ಕಾರ್ಯಕ್ರಮ, ಸಮಾವೇಶಗಳನ್ನು ಆಯೋಜಿಸಿ ಸುಮಾರು 10 ಲಕ್ಷ ಜನರಿಗೆ ದುಶ್ಚಟಗಳ ವಿರುದ್ದ ಜಾಗ್ರತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಮದ್ಯದ ತೆರಿಗೆಯಿಂದ ಬರುವಂತ ಲಾಭಕ್ಕಿಂತಲೂ ಸಮಾಜದಲ್ಲಿ ಅಗುವ ನಷ್ಟ ವನ್ನು ಗಮನದಲ್ಲಿಟ್ಟುಕೊಂಡು ಸರಕಾರ ರಾಜ್ಯದಲ್ಲಿ ಪಾನ ನಿಷೇಧವನ್ನು ಜಾರಿಗೊಳಿಸಬೇಕೆಂದು ಈಸಂದರ್ಭದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದ ಅವರು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪಾನನಿಷೇಧದ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಈವರೆಗೆ 45 ಮಧ್ಯವರ್ಜನ ಶಿಬಿರವನ್ನು ನಡೆಸಲಾಗಿದ್ದು, ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಮದ್ಯಮುಕ್ತರಾಗಿದ್ದಾರೆ.ಎಲ್ಲರನ್ನೂ ಮನವೊಲಿಸುವ ಮೂಲಕವೇ ಪರಿವರ್ತನೆಗೊಳಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ ಕೃಷಿ ಅಧಿಕಾರಿ ನಾರಾಯಣ,ಮೇಲ್ವಿಚಾರಕ ಚಂದ್ರಶೇಖರ್, ರೋಟರಿ ಕ್ಲಬ್ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ, ಬಸ್ತಿ ಮಾಧವ ಶೆಣೈ ಉಪಸ್ಥಿತರಿದ್ದರು.
Be the first to comment on "ನಂದಾವರದಲ್ಲಿ 8ರಂದು ನವಜೀವನ ಸದಸ್ಯರ ಸಮಾವೇಶ"