- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ನಿಮಗೆ ಆಸಿಡಿಟಿಯೇ, ಎಸಿಡಿಟಿಯಿಂದಾಗಿ ಎದೆ ಉರಿಯೇ, ಹಾಗಾದರೆ ನೀರಿಗೆ ಸ್ವಲ್ಪ ಅಡುಗೆ ಸೋಡಾ ಹುಡಿ ಹಾಕಿ ಕುಡಿಯಿರಿ. ಇಂಥದ್ದಕ್ಕೆಲ್ಲ ಪಕ್ಕದಲ್ಲೇ ಮದ್ದು ಇದೆ. ಸಾಧಾರಣವಾಗಿ ಸೋಡಾ ಹುಡಿಯನ್ನು ಬನ್ಸ್ ಜಿಲೇಬಿ ಇತ್ಯಾದಿಗಳ ತಯಾರಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ. ಇದು ಹಲವಾರು ಸಂದರ್ಭಗಳಲ್ಲಿ ಅರೋಗ್ಯ ಸರಿಪಡಿಸುವಿಕೆಯಲ್ಲಿ ಮತ್ತು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
- ಬಿಸಿಲಿನಲ್ಲಿ ಕೆಲಸ ಮಾಡಿ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ಮಾಂಸ ಖಂಡಗಳು ನೋವುಭರಿತವಾದ ಸಂದರ್ಭದಲ್ಲಿ 1 ಗ್ಲಾಸು ನೀರಿಗೆ 3 ರಿಂದ 5 ಗ್ರಾಂ ನಷ್ಟು ಸೋಡಾ ಹುಡಿ ಹಾಕಿ ಕುಡಿಯಬೇಕು.
- ಶರೀರದಲ್ಲಿ ಯೂರಿಕ್ ಆಮ್ಲದ ಅಂಶ ಅಧಿಕವಾಗಿ ಗಂಟುಗಳ ನೋವು ಇದ್ದಾಗ ಸೋಡಾ ಹುಡಿಯನ್ನು ನೀರಿಗೆ ಹಾಕಿ ಕುಡಿಯಬೇಕು.
- ಹೊಟ್ಟೆಯಲ್ಲಿ ಹುಣ್ಣಿನ ಸಮಸ್ಯೆ ಇದ್ದವರು ನೋವು ಕಾಣಿಸಿಕೊಂಡಾಗ ಸೋಡಾ ಹುಡಿಯನ್ನು ನೀರಿಗೆ ಹಾಕಿ ಕುಡಿದರೆ ಅದು ಹೊಟ್ಟೆಯಲ್ಲಿನ ಆಮ್ಲವನ್ನು ನಿರ್ವೀರ್ಯ ಗೊಳಿಸುವುದರ ಮೂಲಕ ನೋವನ್ನು ಕಡಿಮೆ ಮಾಡುತ್ತದೆ.
- ಎಸಿಡಿಟಿಯಿಂದಾಗಿ ಎದೆ ಉರಿ ಕಾಣಿಸಿದಾಗ ನೀರಿಗೆ ಸ್ವಲ್ಪ ಸೋಡಾ ಹುಡಿ ಹಾಕಿ ಕುಡಿಯಬೇಕು.
- ಹೊಟ್ಟೆ ಹಾಗು ಕರುಳಿನಲ್ಲಿ ವಾಯು ತುಂಬಿ ಉಬ್ಬರಿಸಿದಾಗ ಸೋಡಾ ಹುಡಿ ಹಾಕಿದ ನೀರನ್ನು ಸೇವಿಸಬೇಕು.
- ಮೂತ್ರದಲ್ಲಿ ಉರಿ ಹಾಗು ನಂಜು ಕಾಣಿಸಿಕೊಂಡಾಗ ಎಳೆನೀರಿಗೆ ಸ್ವಲ್ಪ ಸೋಡಾ ಹುಡಿ ಹಾಕಿ ಕುಡಿಯಬೇಕು.
- ಮೂತ್ರ ಕೋಶದಲ್ಲಿ ಕಲ್ಲಿನ ಸಮಸ್ಯೆ ಇದ್ದಾಗ ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೋಡಾ ಹುಡಿಯನ್ನು ಸೇವಿಸಬೇಕು.
- ಗಂಟಲಲ್ಲಿ ತುರಿಕೆ ಹಾಗು ಕಪದ ಸಮಸ್ಯೆ ಇದ್ದರೆ ಬಿಸಿನೀರಿಗೆ ಸ್ವಲ್ಪ ಸೋಡಾ ಹುಡಿ ಹಾಕಿ ಬಾಯಿ ಮುಕ್ಕಳಿಸಬೇಕು.
- ಶೀತ ಹಾಗು ನೆಗಡಿ ಇದ್ದಾಗ ಸೋಡ ಹುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬೇಕು.
- ಉಗುರಿನ ಬುಡದಲ್ಲಿ ಕ್ರಿಮಿಗಳ ನಂಜು ಇದ್ದಾಗ ಸೋಡಾ ಹುಡಿಯನ್ನು ನೀರಿನಲ್ಲಿ ಕಲಸಿ ಹಚ್ಚಬೇಕು.
- ಸೋಡಾ ಹುಡಿಯು ಉತ್ತಮ ಕೊಳೆ ನಿವಾರಕವಾಗಿದ್ದು ಮುಖಕ್ಕೆ ಲೇಪಿಸಿದರೆ ಮುಖವು ಕಾಂತಿಯುತವಾಗುತ್ತದೆ.
- ಸೋಡಾ ಹುಡಿಯನ್ನು ನೀರಿನಲ್ಲಿ ಕಲಸಿ ಪೇಸ್ಟ್ ತರ ಮಾಡಿ ಹಲ್ಲಿನ ಮೇಲೆ ಉಜ್ಜಿ ಸ್ವಲ್ಪ ಸಮಯದ ನಂತರ ತೊಳೆದರೆ ಹಲ್ಲುಗಳು ಶುಚಿಯಾಗಿ ಪಳಪಳನೆ ಹೊಳೆಯುತ್ತವೆ.
- ತಲೆಯಲ್ಲಿ ಅಂಟಿರುವ ಜಿಡ್ಡನ್ನು ನಿವಾರಿಸಲು ಸೋಡಾ ಹುಡಿ ಹಾಕಿದ ನೀರಿನಲ್ಲಿ ತಲೆ ಹಾಗು ಕೂದಲನ್ನು ತೊಳೆಯಬೇಕು
- ಸೋಡಾ ಹುಡಿಯನ್ನು ಶರೀರಕ್ಕೆ ಹಚ್ಚುವುದರಿಂದ ದೇಹದ ತುರಿಕೆ ಹಾಗು ದುರ್ಗಂಧ ನಿವಾರಣೆಯಾಗುತ್ತದೆ.
- ಸೋಡಾ ಹುಡಿಯು ಕ್ಯಾನ್ಸರ್ ರೋಗದ ವಿರುದ್ದ ಪ್ರತಿರೋಧ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ.
ಜಾಗ್ರತೆ :
ಅತಿಯಾದ ಸೋಡಾ ಹುಡಿಯನ್ನು ಬಳಸುವುದರಿಂದ ವಾಕರಿಕೆ,ಭೇದಿ,ಅಧಿಕ ರಕ್ತದ ಒತ್ತಡ, ಶರೀರದಲ್ಲಿ ಲವಣಾಂಶ ಗಳ ಏರುಪೇರು ,ಹೊಟ್ಟೆ ನೋವು, ಬಾಯಾರಿಕೆ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.
Be the first to comment on "ಆಸಿಡಿಟಿಯೇ…? ಮನೆಯಲ್ಲೇ ಇದೆ ಮದ್ದು"