- ಡಾ. ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಜೋಳ ಎಂದಾಕ್ಷಣ ಕಣ್ಣೆದುರು ಬರುವುದು ಜೋಳಪೂರಿ ಅಥವಾ ಜೋಳದ ರೊಟ್ಟಿ. ಜೋಳವು ಒಂದು ಬಹು ಸತ್ವವುಳ್ಳ ಸಂಪೂರ್ಣ ಆಹಾರ.ಇದು ಶರೀರಕ್ಕೆ ಶಕ್ತಿಯ ಪೂರಕವಾಗಿದ್ದು ಇದರಲ್ಲಿ ವಿಟಮಿನ್ಗಳು,ಖನಿಜಾಂಶಗಳು ಹಾಗು ಲವಣಾಂಶಗಳು ಯಥೇಷ್ಟವಾಗಿ ಅಡಗಿವೆ.
- ಇದು ಶರೀರದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವ್ಯಾಧಿ ಕ್ಷಮತ್ವವನ್ನು ಮತ್ತು ಪ್ರತಿರೋಧ ಶಕ್ತಿಯನ್ನು ಅಧಿಕಗೊಳಿಸುತ್ತದೆ
- ಜೋಳದಲ್ಲಿ ನಾರಿನ ಅಂಶ ಇರುವುದರಿಂದ ಇದು ಮಲಬದ್ದತೆಯನ್ನು ನಿವಾರಿಸುತ್ತದೆ
- ಜೋಳವು ಮೂಲವ್ಯಾಧಿ ಬರದಂತೆ ತಡೆಯಲು ಸಹಕರಿಸುತ್ತದೆ.
- ಮೂತ್ರ ಸರಿಯಾಗಿ ಹೋಗದಿದ್ದಾಗ ಮತ್ತು ಮೂತ್ರದ ನಂಜು ಆದಾಗ ಜೋಳವನ್ನು ಬೇಯಿಸಿದ ನೀರನ್ನು ಕುಡಿಯಬೇಕು.
- ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಇದ್ದರೆ ಜೋಳದ ನೀರನ್ನು ಕುಡಿಯಬೇಕು.
- ರಾತ್ರಿ ಹಾಸಿಗೆಯಲ್ಲಿ ಮೂತ್ರ ಪ್ರವೃತ್ತಿ (bed vetting) ಆಗುವುದಿದ್ದರೆ ಜೋಳದ ಗಂಜಿ ಮಾಡಿ ತಿನ್ನಬೇಕು.
- ಪೌರುಷ ಗ್ರಂಥಿ (prostate ) ದೊಡ್ಡದಾದಾಗ ಜೋಳದ ಗಂಜಿಯನ್ನು ದಿನಾ ಸೇವಿಸಬೇಕು.
- ಇದು ಕರುಳಿನ ಸ್ನೇಹಿಯಾಗಿದ್ದು ಕ್ಯಾನ್ಸರ್ ಬರದಂತೆ ಸಹ ಮಾಡಲು ಸಹಕರಿಸುತ್ತದೆ.
- ಜೋಳವು IBS (ಅನಿಯಮಿತ ಮಲಪ್ರವೃತ್ತಿ) ತೊಂದರೆ ಇದ್ದವರಿಗೆ ಉತ್ತಮ ಪಥ್ಯ ಆಹಾರವಾಗಿದೆ.
- ಜೋಳದಲ್ಲಿ ಜಿಂಕ್ .ಕಬ್ಬಿಣ ಹಾಗು ತಾಮ್ರದ ಅಂಶಗಳು ಯಥೇಷ್ಟವಾಗಿ ಇರುವುದರಿಂದ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
- ಜೋಳವು ಮೂಳೆಯ ದೃಢತೆಯನ್ನು ಕಾಪಾಡುತ್ತದೆ.
- ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ಹೃದಯದ ಆರೋಗ್ಯ ಕಾಪಾಡುವಲ್ಲಿ ಜೋಳವು ಮಹತ್ತರ ಪಾತ್ರವಹಿಸುತ್ತದೆ.
- ಶರೀರದಿಂದ ಅಧಿಕ ಹಾಗು ಕೆಟ್ಟ ಕೊಬ್ಬಿನ ಅಂಶವನ್ನು ನಿವಾರಿಸುತ್ತದೆ.
- ನಿಯಮಿತವಾಗಿ ಜೋಳವನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯವು ಅಧಿಕವಾಗುತ್ತದೆ.
- ಜೋಳವನ್ನು ಅರೆದು ಚರ್ಮಕ್ಕೆ ಲೇಪಿಸುವುದರಿಂದ ಅದರಲ್ಲಿರುವ ವಿಟಮಿನ್ ಎ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಕಾಂತಿಯನ್ನು ನೀಡುತ್ತದೆ.
Be the first to comment on "ಜೋಳದಿಂದ ಪ್ರತಿರೋಧಕ ಶಕ್ತಿ ವೃದ್ಧಿ"