ಅಂಗನವಾಡಿ ನೌಕರರ ಪರ ನಿಂತ ಬಂಟ್ವಾಳ ತಾಲೂಕು ಪಂಚಾಯತ್

ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೇ ಹೋಗಿ ಪೌಷ್ಠಿಕಾಂಶಭರಿತ ಆಹಾರ ಸೇವಿಸಬೇಕು ಎಂಬ ನಿಯಮದೊಂದಿಗೆ ಅಕ್ಟೋಬರ್ 2ರಿಂದ ಜಾರಿಗೊಳಿಸಲು ಉದ್ದೇಶಿಸಿರುವ ಮಾತೃಪೂರ್ಣ ಯೋಜನೆ ನಿಯಮವನ್ನು ಸಡಿಲಿಸಿ, ಹಿಂದಿನ ವ್ಯವಸ್ಥೆಯಲ್ಲೇ ಮುಂದುವರಿಸುವಂತೆ ಸರಕಾರವನ್ನು ಒತ್ತಾಯಿಸಲು ಬಂಟ್ವಾಳ ತಾಲೂಕು ಪಂಚಾಯತ್ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.

ಈ ಯೋ ಜನೆ ಜಾರಿಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಕಾರವು ಅಗತ್ಯವಿದ್ದು,,ಇದನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳು ಮನವಿ ಸಲ್ಲಿಸಿವೆಯಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸುತ್ತಿದೆ ಎಂದು ವಿಟ್ಲ ಸಿಡಿಪಿಒ ಸುಧಾಜೋಶಿ ಅವರು ಸಭೆಯ ಗಮನ ಸೆಳೆದರು.

ಇದಕ್ಕೆ ದ್ವನಿ ಗೂಡಿಸಿದ ಸದಸ್ಯ ಪ್ರಭಾಕರ ಪ್ರಭು ಸರಕಾರದ ಚಿಂತನೆ ಸರಿ ಇದೆ. ಆದರೆ ದ.ಕ.ಜಿಲ್ಲೆಯ ಮಟ್ಟಿಗೆ ಈ ವ್ಯವಸ್ಥೆ ಅನುಕೂಲಕರವಲ್ಲ ಹಾಗಾಗಿ ಇಲ್ಲಿ ಹಿಂದಿನ ಪದ್ದತಿಯನ್ನೇ ಮುಂದುವರಿಸುವುದು ಸೂಕ್ತ ಎಂದು ಸಲಹೆ ನೀಡಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವಾನ್ ಡಿ’ಸೋಜ ಪ್ರತಿಕ್ರಿಯಿಸಿ ಹೊಸ ವ್ಯವಸ್ಥೆ ಮಲೆನಾಡು ಮತ್ತು ಹೊರಜಿಲ್ಲೆ ಗಳಿಗೆ ಅನುಕೂಲವಾಗಿದೆ. ದ.ಕ.ಜಿಲ್ಲೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿರುವ ವಿಚಾರ ಮನಗಾಣುತ್ತಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಸರಕಾರದ ಗಮನಸೆಳೆದು ಮಾರ್ಪಾಟಿಗೆ ಪ್ರಯತ್ನಿಸುವ ಭರವಸೆ ನೀಡಿದರು.

ಚರ್ಚೆಯ ಬಳಿಕ ದ.ಕ.ಜಿಲ್ಲೆಯಲ್ಲಿ ಬಾಣಂತಿಯರು,ಗರ್ಭಿಣಿಯರಿಗೆ ಈ ಹಿಂದಿನ ವ್ಯವಸ್ಥೆಯಲ್ಲೇ ಪೌಷ್ಠಿಕಾಂಸ ವಿತರಿಸುವುದೆಂದು  ತೀರ್ಮಾನಿಸಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತು.

ಇತ್ತೀಚಿಗಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಾಗಿ ಸೇವೆ ಮಾಡಲು ಯಾರೊಬ್ಬರು ಮುಂದೆ ಬರುತ್ತಿಲ್ಲ ಎಂದು ಸದಸ್ಯೆ ಮಂಜುಳ ಕುಶಲ ಎಂ.ಅವರು ಇದೇ ವೇಳೆ  ಸಭೆಯ ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಸಿದ ಸಿಡಿಪಿಒ ಸುಧಾಜೋಶಿಯವರು ಆಶಾ ಕಾರ್ಯಕರ್ತೆಯರಿಗೆ  ನಿಗದಿತವಾದ ವೇತನವಿಲ್ಲ ಕೇವಲ ಎರಡು ಸಾವಿರ ಗೌರವಧನ ನೀಡಲಾಗುತ್ತಿದೆ.ಇದು ಅವರಿಗೆ ಸಾಕಾಗುತ್ತಿಲ್ಲ ಹಾಗಾಗಿ ಆಶಾ ಕಾರ್ಯಕರ್ತೆಯರಾಗಿ ಸೇವೆ ಮಾಡಲು ಮುಂದೆ ಬರುತ್ತಿಲ್ಲೆಂದು ಸಮಜಾಯಿಷಿ ನೀಡಿದರು.

ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ರಸ್ತೆ ಬದಿಯಲ್ಲಿ ಕಸವನ್ನು ಗುಡ್ಡೆ ಹಾಕಲಾಗಿದೆ ,ಇದರ ದುರ್ವಾಸನೆಯಿಂದ ಸಂಚರಿಸುವುದೆ ಅಸಾಧ್ಯವಾಗಿದೆ.ಸ್ವಚ್ಚತೆಯ ಬಗ್ಗೆ  ಭಾಷಣ ಬಿಗಿದರೆ ಸಾಲದು ಇಲ್ಲಿ ಸ್ವಚ್ಚತೆಗೆ ಕ್ರಮಕೈಗೊಳ್ಳಬೇಕೆಮನದು ಸದಸ್ಯ ಆದಂಕುಂಇ ಆಗ್ರಹಿಸಿದರು.

ಸ್ವಚ್ಚತೆ ಆಯಾಯ ಗ್ರಾಮಪಂಚಾಯತ್ನ ಜವಬ್ದಾರಿ,ಈನಿಟ್ಟಿನಲ್ಲಿ ಸಾಕಷ್ಠು ಮಾಹಿತಿಶಿಬಿರ ಸಹಿತ ವಿವಿಧ ಕಾರ್ಯಕ್ರಮವನ್ನು  ನಡೆಸಲಾಗಿದೆ.ಈ ವಿಚಾರದಲ್ಲಿ ಸಾರ್ವಜನಿಕರು ಕೂಡ ಕೈ ಜೋಡಿಸಬೇಕಾಗಿದೆ ಎಂದು ತಾಪಂ.ಇಒ ಸಿಪ್ರಿಯಾನ್ ಮಿರಾಂದ ಉತ್ತರಿಸುವ ಮೂಲಕ ಚರ್ಚೆಗೆ ತೆರೆ ಎಳೆದರು.

ವೈದ್ಯರಿಲ್ಲದೆ ತೊಂದರೆ:

ಅತೀ ದೊಡ್ಡ ಗ್ರಾಮವಾಗಿರುವ ಸಂಗಬೆಟ್ಟು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕಳೆದ ೪ ವರ್ಷಗಳಿದ  ವೈದ್ಯರಿಲ್ಲದೆ ತೊಂದರೆಯಾಗುತ್ತಿದೆ.ನೇಮಕಾತಿ ಆರಂಭವಾಗಿರುವುದರಿಂದ ಅದ್ಯತೆಯ ನೆಲೆಯಲ್ಲಿ ಸಂಗಬೆಟ್ಟು ಪ್ರಾ.ಆ.ಕೇಂದ್ರಕ್ಕೆ ವೈದ್ಯರ ನೇಮಕಗೊಳಿಸುವಂತೆ ಒತ್ತಾಯಿಸಿದರು.

ಶಾಲೆಗೆ ಸೇರುವ ವಿಚಾರ:

ದಲಿತ ವರ್ಗಕ್ಕೆ ಸೇರಿದ ಬಾಲಕಿಯೊಬ್ಬಳನ್ನು ಮಿತ್ತನಡ್ಕ ಶಾಲೆಗೆ ಒಂದನೇ ತರಗತಿಗೆ ಸೇರಿಸಲು ವಯಸ್ಸು ಪೂರ್ತಿ ೫ ವರ್ಷ ೫ ತಿಂಗಳು ಆಗಲಿಲ್ಲ ಎಂದು ಹೇಳಿ ನಿರಾಕರಿಸಲಾಗಿದೆ. ಇದಕ್ಕೇನಾದರೂ ಪರಿಹಾರ ಸೂಚಿಸಿ ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ,ಆದಂಕುಂಇ,ರಮೇಶ್ ಕುಡ್ಮೇರ್ ವಿ.ಪ.ಮುಖ್ಯಸಚೇತಕ ಐವಾನ್ ಡಿಸೋಜರವರನ್ನು ಒತ್ತಾಯಿಸಿದರು.

ಈ ಸಂದರ್ಭ ಉತ್ತರಿಸಿದ ಐವನ್, ವಿಧಾನಮಂಡಲದಲ್ಲಿ ಸಾಕಷ್ಟು ಚರ್ಚೆಗಳು ಶಾಲೆಗೆ ಸೇರುವ ವಿಚಾರದಲ್ಲಿ ನಡೆದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೆತ್ತವರಿಗೆ ಈ ವಿಚಾರವನ್ನು ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ಬಯೋಮೆಟ್ರಿಕ್ ಸೌಲಭ್ಯ

ಹಳ್ಳಿ ಹಳ್ಳಿಗಳಲ್ಲಿ ಇಂಟರ್‌ನೆಟ್ ಸೌಲಭ್ಯ ದೊರಕಿದ ಬಳಿಕವಷ್ಟೇ ಆಹಾರ ಇಲಾಖೆಗೆ ಸಂಬಂಧಿಸಿದಂತೆ ಬಯೋಮೆಟ್ರಿಕ್ ಸೌಲಭ್ಯ ಕಡ್ಡಾಯಗೊಳಿಸಿ. ಇಲ್ಲದಿದ್ದರೆ ಇಲ್ಲಿರುವ ಬಡಜನರು ಬಂದು ಹೋಗುವುದಷ್ಟೇ ನಡೆಯುತ್ತದೆಯೇ ವಿನ: ರೇಶನ್ ದೊರಕುವುದೇ ಇಲ್ಲ ಎಂದು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮತ್ತು ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಹೇಳಿದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಧಿಕಾರಿಗಳು ಹಾಗೂ ಇಲಾಖೆ ಈ ವಿಚಾರದಲ್ಲಿ ನಿಯಮಗಳನ್ನು ಸಡಿಲಿಸಿದರೆ ಉತ್ತಮ ಎಂದರು.

ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ, ಬಂಟ್ವಾಳ ತಾಲೂಕಿನ 110 ನ್ಯಾಯಬೆಲೆ ಅಂಗಡಿಗಳ ಪೈಕಿ 53 ಅಂಗಡಿಗಳಲ್ಲಿ ಯಂತ್ರ ಅಳವಡಿಸಲಾಗಿದ್ದು, 57 ಅಂಗಡಿಯವರು ಕಾಲಾವಕಾಶ ಕೇಳಿದ್ದಾರೆ. ನೆಟ್‌ವರ್ಕ್ ಸಮಸ್ಯೆ ನಮ್ಮ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಇಲ್ಲ ಎಂದು ಹೇಳಿರುವ ಇಲಾಖೆ ಮೇಲಧಿಕಾರಿಗಳು ಯಾವುದೇ ಸಬೂಬು ಹೇಳಬಾರದು ಎಂದು ಸೂಚನೆ ನಈಡಿದ್ದಾರೆ. ಅದರಂತೆ ಬೆರಳಚ್ಚು ಕಡ್ಡಾಯಗೊಳಿಸಲಾಗಿದ್ದು, ನಿಯಮಾನುಸಾರವೇ ಪಡಿತರ ವಿತರಣೆ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭ ಮಾತನಾಡಿದ ವಿಧಾನಪರಿಷತ್ತು ಸದಸ್ಯ ಐವನ್ ಡಿಸೋಜ, ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಸಿಟಿಯ ಮೇಲೆ ಎಲ್ಲವೂ ನಿಂತಿದೆ. ಯಾವಾಗ ಹಾಳಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಆಹಾರ ಸಚಿವರೂ ನಮ್ಮ ಜಿಲ್ಲೆಯವರೇ ಆಗಿರುವ ಕಾರಣ ಇಲ್ಲಿನ ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರುತ್ತೇನೆ ಎಂದರು.

ಸೋಲಾರ್ ಅಳವಡಿಸಿ

ವಿದ್ಯುತ್ ಸಮಸ್ಯೆ ನೀಗಿಸಲು ಸೋಲಾರ್ ಅಳವಡಿಸುವುದೊಂದೇ ಪರಿಹಾರ ಎಂಬ ಅಭಿಮತ ವ್ಯಕ್ತಪಡಿಸಿದವರು ಐವನ್. ರೂಫ್‌ಟಾಪ್ ಗಳಲ್ಲಿ ಸೋಲಾರ್ ಅಳವಡಿಸಿ. ಎಲ್ಲ ಪಂಚಾಯತ್ ಗಳಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ. ಇದಕ್ಕೆ ಹಣಕಾಸಿನ ನೆರವು ನೀಡಲು ವಿಧಾನಪರಿಷತ್ ನಿಧಿಯಿಂದ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಐವನ್ ಡಿಸೋಜ ಆಶ್ವಾಸನೆ ನೀಡಿದರು.

ಸಬ್ ಸ್ಟೇಶನ್ ಚಾಲೂ ಆದರೆ ಸಮಸ್ಯೆ ಪರಿಹಾರ:

ಕಲ್ಲಡ್ಕ ಟೈಲ್ ಫ್ಯಾಕ್ಟರಿ ಬಳಿ ಮೆಸ್ಕಾಂ ಸಬ್ ಸ್ಟೇಶನ್ ನಿರ್ಮಾಣ ಹಂತದಲ್ಲಿದ್ದು ಅದು ಕಾರ್ಯಾರಂಭಗೊಂಡ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳು ಪರಿಹಾರವಾಗಬಹುದು ಎಂದು ಮೆಸ್ಕಾಂ ಎಇಇ ನಾರಾಯಣ ಭಟ್ ತಿಳಿಸಿದರು. ಸಾಲೆತ್ತೂರು ಒಂದೇ ಗ್ರಾಮಕ್ಕೆ ಮೂವರು ಜೆಇಗಳು ಯಾಕೆ ಎಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ಹಾಗೂ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜಿಒಎಸ್(ಗ್ರೂಪ್ ಆಪರೇಟಿಂಗ್ ಸ್ವಿಚ್) ಆಧರಿಸಿ ನಾವು ಅಧಿಕಾರಿಗಳನ್ನು ನಿಯುಕ್ತಿಗೊಳಿಸುತ್ತೇವೆ. ಹೀಗಾಗಿ ಅಂಥ ಗೊಂದಲ ನಿರ್ಮಾಣವಾಗಿದೆ. ಆದರೆ ಕಲ್ಲಡ್ಕದ ಸಬ್ ಸ್ಟೇಶನ್ ನಿರ್ಮಾಣಗೊಂಡ ಬಳಿಕ ಸಮಸ್ಯೆ ಪರಿಹಾರಗೊಳ್ಳುವುದು ಎಂದು ಹೇಳಿದರು. ಇದೇ ವೇಳೆ ಎಇಇ ಪ್ರವೀಣ್ ಜೋಷಿ ಅವರನ್ನು ತರಾಟೆಗೆ ತೆಗೆದುಕೊಂಡ ಅಳಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ಗ್ರಾಪಂನಿಂದ ಮೆಸ್ಕಾಂಗೆ ಹಣಕಾಸುಪಾವತಿ ಆದರೂ ಇಲಾಖೆ ವತಿಯಿಂದ ಸ್ಪಂದನೆ ಇಲ್ಲ ಎಂದು ದೂರಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಐವನ್ ಡಿಸೋಜ, ಎಲ್ಲವನ್ನೂ ಕಾನೂನು ಪ್ರಕಾರ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಕಾನೂನನ್ನಷ್ಟೇ ಯೋಚಿಸಿ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಶೂಭಾಗ್ಯದ ತನಿಖೆಯಾಗಲಿ:

ಶೂಭಾಗ್ಯ ಯೋಜನೆಯಂತೆ ಶೂ ಖರೀದಿಸುವ ಕುರಿತು ತಾನು ಅಧ್ಯಕ್ಷನಾಗಿರುವ ಎಸ್‌ಡಿಎಂಸಿಯಲ್ಲಿ ತೀರ್ಮಾನಿಸಿದ್ದೆವು. ಆದರೆ ಮುಖ್ಯೋಪಾಧ್ಯಾಯರು ಸಹಶಿಕ್ಷಕರಿಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ ಇದು ಸರಿಯೇ ಎಂದು ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಪ್ರಶ್ನಿಸಿದರು.

ಈ ಸಂದರ್ಭ ಉತ್ತರಿಸಿದ ಬಿಇಒ ಲೋಕೇಶ್, ಈ ಕುರಿತು ಇಲಾಖೆಗೆ ಗೊತ್ತಿಲ್ಲ, ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಹೇಳಿದರು. ಈ ವಿಚಾರದ ತನಿಖೆಯಾಗಬೇಕು ಎಂದು ಸುಭಾಸ್ ಈ ಸಂದರ್ಭ ಒತ್ತಾಯಿಸಿದರು.

ಮೇಲ್ಛಾವಣಿ ಸೋರಿಕೆ:

ಪುದು ಗ್ರಾಮದ ಸುಜೀರು ಶಾಲೆಯಲ್ಲಿ ಮೇಲ್ಛಾವಣಿ ಸೋರುತ್ತಿದೆ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪದ್ಮಶ್ರೀ ದುರ್ಗೇಶ್ ಶೆಟ್ಟಿ ದೂರಿದರು. ಅನಂತಾಡಿ ಬಂಟ್ರಿಂಜ ಶಾಲೆ ಮೇಲ್ಛಾವಣಿ ಕುಸಿದಿದ್ದು ಕ್ರಮ ಕೈಗೊಳ್ಳುವಂತೆ ಸದಸ್ಯೆ ಗೀತಾ ಚಂದ್ರಶೇಖರ್ ದೂರಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಪ್ರಭಾಕರ ಪ್ರಭು, ರಮೇಶ್ ಕುಡುಮೇರು, ಯಶವಂತ ಪೂಜಾರಿ, ಗಣೇಶ ಸುವರ್ಣ, ಕೆ.ಸಂಜೀವ ಪೂಜಾರಿ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.

ಅಧ್ಯಕ್ಷತೆಯನ್ನು ಕೆ.ಚಂದ್ರಹಾಸ ಕರ್ಕೇರ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಕಾರ್ಯನಿರ್ವಾಹಕ ಅಧಿಕಾರಿ ಸಿಪ್ರಿಯಾನ್ ಮಿರಾಂದ, ತಹಶೀಲ್ದಾರ್ ಪುರಂದರ ಹೆಗ್ಡೆ, ಅಧಿಕಾರಿಗಳಾದ ಪಿಡಬ್ಲುಡಿ ಎಇಇ ಉಮೇಶ್ ಭಟ್, ಬಿಇಒ ಲೋಕೇಶ್ ಸಿ ಸಹಿತ ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಅಂಗನವಾಡಿ ನೌಕರರ ಪರ ನಿಂತ ಬಂಟ್ವಾಳ ತಾಲೂಕು ಪಂಚಾಯತ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*