ಬಂಟ್ವಾಳ ತಾಲೂಕಿನಲ್ಲಿ ನೂತನವಾಗಿ ಕೋಮುಸೌಹಾರ್ದತಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇದರ ಅಧ್ಯಕ್ಷರಾಗಿ ಪುರಸಭಾ ಸದಸ್ಯ ಬಿ.ಮೋಹನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, 23 ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಸಂಚಾಲಕರಾಗಿ ತಾಲಾಉಕು ಸಾಮಾಜಿಕ ನ್ಯಾಯಪರ ಸಮಿತಿಯ ಬಿ.ಎಂ.ಪ್ರಭಾಕರ ದೈವಗುಡ್ಡೆ, ಉಪಾಧ್ಯಕ್ಷರಾಗಿ ಸಿಪಿಎಂ ನ ರಾಮಣ್ಣ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಶೇಖರ್, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್, ಹಾಗೂ ಕೋಶಾಧಿಕಾರಿಯಾಗಿ ರಾಜಾ ಚೆಂಡ್ತಿಮಾರ್ ಆಯ್ಕೆಯಾದರು. ಬಂಟ್ವಾಳ ತಾಲೂಕಿನಲ್ಲಿ ಸೆಕ್ಷನ್ ೧೪೪ ಕೊನೆಗೊಂಡ ಬಳಿಕ ಬಿ.ಸಿ.ರೋಡು ಪೊಳಲಿ ದ್ವಾರದ ಬಳಿಯಿಂದ ಕಲ್ಲಡ್ಕದವರೆಗೆ ಶಾಂತಿಗಾಗಿ ಪಾದಯಾತ್ರೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಕೋಮು ಸೌಹಾರ್ದ ಸಮಿತಿ ಅಸ್ತಿತ್ವಕ್ಕೆ"