20ರಂದು ಒಡಿಯೂರು ಕ್ಷೇತ್ರದಲ್ಲಿ ಗ್ರಾಮೋತ್ಸವ
ಜುಲೈ 20ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಗ್ರಾಮೋತ್ಸವ. ಈ ಹಿನ್ನೆಲೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.
ಬೆಳಗ್ಗೆ ಶ್ರೀ ಗಣಪತಿ ಹವನ, ಗ್ರಾಮೋತ್ಸವಕ್ಕೆ ಚಾಲನೆ, ಸಾಧ್ವಿ ಮಾತಾನಂದಮಯೀ ಅವರಿಂದ ಶ್ರೀ ಗುರುಪಾದುಕಾರಾಧನೆ- ಪಾದ ಪೂಜೆ, ಭಕ್ತರಿಂದ ನವಧಾನ್ಯಗಳಿಂದ ತುಲಾಭಾರ ಸೇವೆ, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರಿಂದ ಉಯ್ಯಾಲೆ ಸೇವೆ, ವಿವಿಧ ಸಂಘ ಸಂಸ್ಥೆಗಳಿಂದ ಗುರುವಂದನೆ ನಾಡಿನ – ಹೊರನಾಡಿನ ಗಣ್ಯರ ಭಾಗವಹಿಸುವಿಕೆಯ ಮೂಲಕ ನಡೆಯಲಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ .
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ, ಪ್ರಧಾನ ಕೋಶಾಧಿಕಾರಿ ಜಯಂತ್ ಜೆ. ಕೋಟ್ಯಾನ್, ಜತೆ ಕೋಶಾಧಿಕಾರಿ ಬಿ. ಕೆ. ಚಂದ್ರಶೇಖರ್ ಮಂಗಳೂರು, ಸಭೆ ಮತ್ತು ವೇದಿಕೆ ಸಮಿತಿ ಸಂಚಾಲಕ ಸಂತೋಷ್ ಭಂಡಾರಿ, ಸೇವಾ ಕೌಂಟರ್ ವಿಭಾಗದ ಸುಬ್ರಹ್ಮಣ್ಯ ಒಡಿಯೂರು, ಪ್ರಚಾರ ಸಮಿತಿ ಸಂಚಾಲಕ ಅಜಿತ್ ನಾಥ ಶೆಟ್ಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಸಂಚಾಲಕ ತಾರಾನಾಥ ಟಿ. ಕೊಟ್ಟಾರಿ ಮಾತನಾಡಿ ಶೋಷಿತ – ದುರ್ಬಲ ವರ್ಗದವರಲ್ಲಿ ಸಂತೋಷವನ್ನು ಕಾಣುವ ನೆಲೆಯಲ್ಲಿ ಜನ್ಮದಿನ ಆಚರಣೆ ಯಾಗಬೇಕೆಂಬುದು ಶ್ರೀಗಳವರ ಆಶಯವಾಗಿದೆ. ಪ್ರತಿಯೊಬ್ಬರು ಸಂಸ್ಕಾರವಂತರಾಗಿ ಸಹಕಾರ ಮನೋಭಾವನವನ್ನು ಬೆಳೆಸಿ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂಬುದ ಸ್ವಾಮೀಜಿಗಳ ಕಲ್ಪನೆಯಾಗಿದೆ. ಈ ನೆಲೆಯಲ್ಲಿ 2001ರಿಂದ ಜನ್ಮದಿನವನ್ನು ಸಂಸ್ಥಾನದ ಎಲ್ಲಾ ಅಂಗಸಂಸ್ಥೆಗಳು ಸೇರಿಕೊಂಡು ಗ್ರಾಮೋತ್ಸವವಾಗಿ ಆಚರಿಸುತ್ತಾ ಬಂದಿದೆ ಎಂದರು.
ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ನೀಡಿದ ಸಂದೇಶವಿದು.
- ವ್ಯಕ್ತಿ ವ್ಯಕ್ತಿಯ ಮಧ್ಯೆ ಪ್ರೀತಿಯ ಭಾವ ಕ್ಷೀಣಿಸುತ್ತಿದ್ದು, ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಮತ್ತೆ ಕಟ್ಟುವ ಕಾರ್ಯವಾಗಬೇಕು. ಜೀವನವನ್ನು ಉತ್ತಮವಾಗಿ ನಡೆಸಲು ಮಾಡುವ ವ್ಯವಸ್ಥೆ ನಿಜವಾದ ಧರ್ಮ. ಸರ್ವರ ಸಕಲರ ಅಭ್ಯೋದಯಕ್ಕಿರುವುದು ಧರ್ಮ ಜಾಗೃತಿಯಾದಾಗ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ
ಬಂಟ್ವಾಳನ್ಯೂಸ್ ನಲ್ಲಿ ಸುದ್ದಿಗೋಷ್ಠಿಯ ವಿಡಿಯೋವನ್ನು ನೋಡಬಹುದು.
ಈ ಲಿಂಕ್ ಗೆ ಕ್ಲಿಕ್ ಮಾಡಿರಿ:
Be the first to comment on "ಕುಸಿಯುತ್ತಿರುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಿರಿ: ಒಡಿಯೂರು ಶ್ರೀಗಳು"