ಜುಲೈ 30ರಂದು ಮಂಗಳೂರಿನಲ್ಲಿ ಕೊಟ್ಟಾರಿ ಯುವ ಸಮಾವೇಶ

ಮಂಗಳೂರು ಪುರಭವನದಲ್ಲಿ ಕೊಟ್ಟಾರಿ ಯುವ ವೇದಿಕೆ ಆಶ್ರಯದಲ್ಲಿ ಜುಲೈ 30ರಂದು ಕೊಟ್ಟಾರಿ ಯುವ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಪೂಜೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲಲ್ಲಿ ಬಾಲಕೃಷ್ಣ ಕೊಟ್ಟಾರಿ ನೇತೃತ್ವದಲ್ಲಿ ನಡೆಯಿತು. ಪಡೀಲ್ ನಲ್ಲಿರುವ ಸಂಘದ ಹಾಲ್ ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು. ಈ ಸಂದರ್ಭ ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ತಾರಾನಾಥ ಕೊಟ್ಟಾರಿ, ಜಿತೇಂದ್ರ ಕೊಟ್ಟಾರಿ ಸಹಿತ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಸಮಾವೇಶ ಎಂ.ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕರಾವಳಿ ಕಾಲೇಜು ಸಮೂಹ ಸಂಸ್ಥೆ ಅಧ್ಯಕ್ಷ ಗಣೇಶ್ ರಾವ್ ಉದ್ಘಾಟಿಸುವರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಕನ್ನಡ ಚಿತ್ರನಟ ಶ್ರೀಮುರಳಿ, ಶಾಸಕ ಜೆ.ಆರ್.ಲೋಬೊ, ಮೇಯರ್ ಕವಿತಾ ಸನಿಲ್ ಸಹಿತ ಗಣ್ಯರು ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.