ವಿದ್ಯಾಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ ಕಾಲೇಜು ವಿಭಾಗದ ಶೈಕ್ಷಣಿಕ ಸಹಮಿಲನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ವಿಭಾಗದ ಅಜಿತಕುಮಾರ ಸಭಾಂಗಣದಲ್ಲಿ ನಡೆಯಿತು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ಸಚೇತಕ ಕ್ಯಾ. ಗಣೇಶ್‌ಕಾರ್ಣಿಕ್ ಉದ್ಘಾಟಿಸಿದರು.
ರಾಷ್ಟ್ರದ ಮಾನ ಸನ್ಮಾನದ, ಗೌರದ ಜವಾಬ್ದಾರಿ ಶಿಕ್ಷಕರದ್ದು ಎಂದು ಹೇಳಿದ ಅವರು, ಭಾರತ ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಶಿಕ್ಷಣದಲ್ಲಿ ಭಾರತೀಯತೆ ಅಳವಡಿಸುವುದರಿಂದ ಪರಿಹಾರ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್‍ಯದರ್ಶಿ ಲೋಕಯ್ಯ ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಭಾರತಿಯ ಮೂಲ ನಂಬಿಕೆ, ಧ್ಯೇಯ ಉದ್ದೇಶಗಳ ಈಡೇರಿಕೆಗೆ ಮೂಲಭೂತ ವಿಷಯಗಳ ಬಗ್ಗೆ ವಿವರಣೆ ನೀಡಿದರು.
ಭಾರತದ ರಾಷ್ಟ್ರೀಯ ಸುರಕ್ಷತೆಗೆ ಚೀನಾದ ಸವಾಲುಗಳು ವಿಷಯದ ಬಗ್ಗೆ ಮೈಸೂರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಪ್ರಚಚಾರ ಪ್ರಮುಖ್ ಪ್ರದೀಪ್ ವಿಶೇಷಷ ಉಪನ್ಯಾಸ ನೀಡಿದರು.
ಚೀನಾದಿಂದ ಆಗುವ ಅಪಾಯ ಮತ್ತುಪರಮ ಶತ್ರುವಾಗಿ ಬೆಳೆಯುತ್ತಿರುವುದಕ್ಕೆ ನಮ್ಮದೇ ಆರ್ಥಿಕ ಪ್ರೋತ್ಸಾಹ ಕಾರಣ ಎಂಬುದನ್ನು ಮನಗಾಣಬೇಕಾಗಿದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ. ಪ್ರಭಾಕರ ಭಟ್, ವಿದ್ಯಾಭಾರತಿ ಪ್ರಾಂತ ಕಾರ್‍ಯದರ್ಶಿ ವಸಂತ ಮಾಧವ ಉಪಸ್ಥಿತರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಯತಿರಾಜ್ ಕಾರ್‍ಯಕ್ರಮವನ್ನು ನಿರ್ವಹಿಸಿ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ವಸಂತ ಬಲ್ಲಾಳ ವಂದಿಸಿದರು.
Be the first to comment on "ಕಲ್ಲಡ್ಕದಲ್ಲಿ ವಿಭಾಗ ಮಟ್ಟದ ಶೈಕ್ಷಣಿಕ ಸಹಮಿಲನ"