ರಸ್ತೆ ರಿಪೇರಿಗೆ ಹೊಣೆಗಾರರು ಯಾರು ಎಂಬ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡಿ ಕಾಲಹರಣ ಮಾಡುತ್ತಿದ್ದ ರಾಜಕೀಯ ಪಕ್ಷಗಳು ತಮ್ಮ ಗಮನವನ್ನು ಬೇರೆ ವಿಚಾರದತ್ತ ಕೇಂದ್ರೀಕರಿಸಿವೆ. ಆದರೂ ಬಿ.ಸಿ.ರೋಡ್ ಸರ್ವೀಸ್ ರಸ್ತೆ ಹೊಂಡ ಮುಚ್ಚಲಾಗುತ್ತಿದೆ. ಇದಕ್ಕೇನು ಕಾರಣ ಅಂದಿರಾ?
ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಬಿ.ಸಿ.ರೋಡಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪುರಸಭೆಯೇ ಖುದ್ದು ಮುಂದಾಗಿ ಸರ್ವೀಸ್ ರಸ್ತೆ ಗುಂಡಿ ಮುಚ್ಚಿಸಿತು.

ಚಿತ್ರಗಳು: ಕಿಶೋರ್ ಬಿ.ಸಿ.ರೋಡ್
ಎನ್.ಎಚ್.ಎ.ಐ. ಗೆ ಸಂಬಂಧಿಸಿದ ಈ ರಸ್ತೆ ರಿಪೇರಿಗೆ ಅದಕ್ಕೆ ನೇರ ಸಂಬಂಧಿಸಿದ ಜನಪ್ರತಿನಿಧಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದು ನಮಗೆ ಸಂಬಂಧಿಸಿದ್ದಲ್ಲ ಎಂದು ಪುರಸಭೆಯೂ ಹೇಳಿತ್ತು. ಈ ಕುರಿತು ಆರೋಪ, ಪ್ರತ್ಯಾರೋಪಗಳು, ರಾಜಕೀಯ ಕೆಸರೆರಚಾಟ ನಡೆದವೇ ವಿನ: ಸ್ಥಳೀಯ ಆಟೋ ಚಾಲಕರು, ಸಾರ್ವಜನಿಕರು ಚಂದಾ ಎತ್ತುವ ಮೂಲಕ ಹೊಂಡ ಮುಚ್ಚಲು ಪ್ರಯತ್ನ ನಡೆಸಿದರು. ಇದೀಗ ಮತ್ತೆ ಹೊಂಡ ಮುಚ್ಚುವ ಕೆಲಸ ನಡೆಯಿತು. ಹೆಚ್ಚು ಸಮಯ ಇದು ಬಾಳಿಕೆ ಬರುವುದಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯದ ನಡುವೆಯೂ ಇಷ್ಟಾದರೂ ಆಯಿತಲ್ಲ ಎಂಬ ಮಾತು ಕೇಳಿಬಂತು.
ಚಿತ್ರಗಳು ಮತ್ತು ವಿಡಿಯೋ: ಕಿಶೋರ್ ಪೆರಾಜೆ
Be the first to comment on "ಕೊನೆಗೂ ಸರ್ವೀಸ್ ರಸ್ತೆ ಕಡೆ ದೃಷ್ಟಿ ಬಿತ್ತು!"