ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತಾ ಅವರು ಬಂಟ್ವಾಳ ತಾಲೂಕಿನಲ್ಲಿ ನಡೆದ ಎರಡು ಕೊಲೆ ಕೃತ್ಯಗಳು ಸಂಭವಿಸಿದ ಜಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮೊದಲು ಬೆಂಜನಪದವಿನಲ್ಲಿ ನಡೆದ ರಿಕ್ಷಾ ಚಾಲಕ ಅಶ್ರಫ್ ಹಾಗೂ ಬಿ.ಸಿ.ರೋಡಿನಲ್ಲಾದ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಕೊಲೆ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿ ಬಳಿಕ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷರಾಗಿದ್ದ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಎಡಿಜಿಪಿ ಅಲೋಕ ಮೋಹನ್ , ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ.ಕೆ.ಅರುಣ್, ಎಡಿಶನಲ್ ಎಸ್ಪಿ ವಿಷ್ಣುವರ್ಧನ, ಇನ್ಸ್‌ಪೆಕ್ಟರ್ ಬಿ.ಕೆ.ಮಂಜಯ್ಯ ,ಎಸ್ ಐ ರಕ್ಷೀತ್ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.
ಬಿ.ಸಿ.ರೋಡ್ ಉದಯ ಲಾಂಡ್ರಿಗೆ ಬಂದ ಸಂದರ್ಭ ಪಕ್ಕದಲ್ಲೇ ಇರುವ ಪ್ರವೀಣ್ ಅವರನ್ನು ಕರೆದ ಪೊಲೀಸರು ಬಳಿಕ ಹಣ್ಣಿನಂಗಡಿಯ ರವೂಫ್ ಅವರನ್ನೂ ಬರಹೇಳಿದರು. ಈ ಸಂದರ್ಭ ದತ್ತಾ ಅವರಿಗೆ ಮಾಹಿತಿ ನೀಡಿದ ಪ್ರವೀಣ್, ತಾನು ಶರತ್ ಅವರನ್ನು ರಕ್ತದ ಮಡುವಿನಲ್ಲಿ ಬಿದ್ದ ಸಂದರ್ಭ ನೋಡಿದ ವಿಚಾರವನ್ನು ತಿಳಿಸಿದರಲ್ಲದೆ, ಬಳಿಕ ಉಳಿದವರನ್ನೆಲ್ಲ ಕರೆದೆ. ಈ ಸಂದರ್ಭ ಶರತ್ ಅವರನ್ನು ಅವರ ವಾಹನದಲ್ಲೇ ಕೊಂಡೊಯ್ಯಲು ಹೊರಟಾಗ ಅವರ ವಾಹನದ ಕೀಲಿಕೈ ಸಿಗಲಿಲ್ಲ. ಬಳಿಕ ರವೂಫ್ ಅವರ ಆಟೋದಲ್ಲಿ ನಾವೆಲ್ಲರೂ ಶರತ್ ಅವರನ್ನು ತುಂಬೆ ಆಸ್ಪತ್ರೆಗೆ ಕೊಂಡೊಯ್ದುದಾಗಿ ಮಾಹಿತಿ ನೀಡಿದರು.
Video:
Be the first to comment on "ಹತ್ಯೆಗಳು ನಡೆದ ಸ್ಥಳ ಪರಿಶೀಲಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ದತ್ತ"