ಶಾಲೆ ಕಾಲೇಜುಗಳ ಕ್ಯಾಂಪಸ್‌ನಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡುತ್ತಿದ್ದು ಪೋಷಕರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ ೪೮ ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನ, ಮಠ ಮಂದಿರಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳೊಮದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಬೇಕು
ಎಂದ ಶ್ರೀಗಳು ವಲರಮಹಾಲಕ್ಷ್ಮೀ ಪೂಜೆ ಕೇವಲ 48 ದಿನ ಮಾತ್ರ ಆಚರಿಸುವ ಪೂಜೆಯಲ್ಲ, ಅದು ಜೀವನಪೂರ್ತಿ ಅನುಷ್ಠಾನ ಮಾಡಬಹುದಾದ ವೃತಾಚರಣೆಯಾಗಿದೆ ಎಂದರು.
ಶಾಸಕಿ ಶಕುಂತಳ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಪಾಶ್ಚ್ಯಾತ್ಯರು ಕೂಡ ಅನುಕರಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ನಾವೇ ಮರೆಯುವುದು ಸರಿಯಲ್ಲ ಎಂದರು. ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯನ್ನು ಈ ಸಂದರ್ಭ ಅಧಿಕೃತವಾಗಿ ಘೋಷಿಸಲಾಯಿತು. ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು, ಕೃಷ್ಣ ಶ್ಯಾಮ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ರಾಜ್‌ಕುಮಾರ್, ಕಾರ್ಯದರ್ಶಿ ಕೇಶವ ಅಂತರ ಸಂಘಟನಾ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್, ಕೋಶಾಧಿಕಾರಿ ದಾಮೋದರ ಮಾಸ್ತರ್, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ರಾಜೇಶ್ ಬಾಳೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಾದ ಜಯರಾಜ್ ಪ್ರಕಾಶ್, ಚಂದ್ರಶೇಖರ್ ತೇಜ, ಹಾಜರಿದ್ದರು. ದಾಮೋದರ ಬಿ.ಎಂ.ಸ್ವಾಗತಿಸಿ, ಉಮೇಶ್ ಪಿ.ಕೆ. ನೂತನ ಸಮಿತಿಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು, ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀ ಪೂಜೆ, ಶ್ರೀನಾಗಾದೇವರ ಪೂಜೆ, ಗೋಮಾತಾ ಪೂಜೆ, ಬಾಲಭೋಜನ, ಕನಕಧಾರಾ ಯಾಗ, ನವಗ್ರಹ ಶಾಂತಿ, ಸಾಮೂಹಿಕ ಕುಂಕುಮಾರ್ಚನೆ, ವಿಷ್ಣುಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಮಹಾಪೂಜೆ, ವಾಯನದಾನ, ಅನ್ನಪ್ರಸಾದ ಸೇವೆ ನಡೆಯಿತು.
Be the first to comment on "ಡ್ರಗ್ಸ್ ಜಾಲ ಕುರಿತು ನಿಗಾ ವಹಿಸಿ : ಮಾಣಿಲ ಶ್ರೀಗಳು"