ಶ್ರೀಧಾಮ ಮಾಣಿಲದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಹಿನ್ನೆಲೆಯಲ್ಲಿ 48 ದಿನಗಳ ಕಾಲ ಸಾಮೂಹಿಕ ಶ್ರೀಲಕ್ಷ್ಮೀಪೂಜೆ






ಮಾಣಿಲ: ಯಾವುದೇ ಜೀವಿಗಳಿಗೂ ನೋವುಂಟುಮಾಡದ ಬದುಕು ನಿಜ ಅರ್ಥದ ಸಂಸ್ಕಾರದ ಬದುಕು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪ್ರಯುಕ್ತ 48 ದಿನಗಳವರೆಗೆ ನಡೆಯಲಿರುವ ಸಾಮೂಹಿಕ ಶ್ರೀಲಕ್ಷ್ಮೀಪೂಜೆಯ 36ನೇ ದಿನದ ಬಾಲಭೋಜನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕ್ಷೇತ್ರದ ಟ್ರಸ್ಟಿ ಮಂಜು ವಿಟ್ಲ ಮಾತನಾಡಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಶ್ರೀಧಾಮದಿಂದ ಸದಾ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ನಮ್ಮ ಕುಡ್ಲ ಹಾಗೂ ದೈಜಿ ವರ್ಲ್ಡ್ ವರದಿಗಾರ ಕಿಶೋರ್ ಪೆರಾಜೆ, ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ವೈದ್ಯ ಡಾ. ಚರಣ್ ಶೆಟ್ಟಿ, ಅವರ ಪತ್ನಿ ಸ್ವಾತಿ ಚರಣ್ ಶೆಟ್ಟಿ, ಕ್ಷೇತ್ರದ ಮಹಿಳಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.ಶ್ರೀ ಧಾಮ ಮಿತ್ರವೃಂದದ ಪದಾಧಿಕಾರಿ ಪೃಥ್ವೀರಾಜ್ ಸ್ವಾಗತಿಸಿದರು. ದೀಕ್ಷಾ ಕಾಪಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು. ವಸಂತಿ ಯಶೋಧರ ವಂದಿಸಿದರು.
Be the first to comment on "ಯಾರಿಗೂ ನೋವುಂಟುಮಾಡದ ಬದುಕೇ ನಿಜ ಅರ್ಥದ ಸಂಸ್ಕಾರದ ಬದುಕು – ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ"