ಸಮಾಜದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಯಿಂದ ಕಂಡಾಗ ಅವರನ್ನು ದೇವರು ಕೂಡಾ ಪ್ರೀತಿಸುತ್ತಾರೆ ಎಂಬ ಮಾತಿನಂತೆ ನಮ್ಮಲ್ಲಿ ಪರಸ್ಪರ ಮಾನವೀಯ ಮೌಲ್ಯ ಮತ್ತು ಸಹೋದರತೆ ಬೆಳೆದು ವಿಶಾಲ ತಳಹದಿ ಮೇಲೆ ಸೌಹಾರ್ದಯುತ ಮಾನವ ಸಮಾಜ ನಿಮರ್ಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಹಿದಾಯ ಫೌಂಡೇಶನ್ ಮತ್ತು ಜುಬೈಲ್ ಘಟಕ ವತಿಯಿಂದ ಕಾವಳಕಟ್ಟೆಯಲ್ಲಿ ಹಿದಾಯ ಶೇರ್ ಮತ್ತು ಕೇರ್ ಕಾಲೋನಿ ಕುಟುಂಬಸ್ಥರು ಹಾಗೂ ಭಿನ್ನಸಾಮಥ್ರ್ಯದ ಮಕ್ಕಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಇಫ್ತಾರ್ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಂಝಾನ್ ವೃತಾಚರಣೆ ಬಗ್ಗೆ ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಉಪನ್ಯಾಸಕ ಅನೀಸ್ ಕೌಸರಿ ಧಾಮರ್ಿಕ ಉಪನ್ಯಾಸ ನೀಡಿದರು.ಝಕಾರಿಯ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜುಬೈಲ್ ಘಟಕ ಅಧ್ಯಕ್ಷ ಶರೀಫ್ ಜೋಕಟ್ಟೆ, ಕಥಾರ್ ಘಟಕ ಅಧ್ಯಕ್ಷ ಅಬ್ದುಲ್ಲಾ ಮೋನು, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕಾವಳಕಟ್ಟೆ ಜುಮ್ಮಾ ಮಸೀದಿ ಅಧ್ಯಕ್ಷ ಶೇಕ್ ರೆಹ್ಮತುಲ್ಲಾ, ಸಂಸ್ಥೆ ಆಡಳಿತಾಧಿಕಾರಿ ಆಬಿದ್ ಅಸ್ಗರ್ ಶುಭ ಹಾರೈಸಿದರು.ಹಿದಾಯ ಪೌಂಡೇಶನ್ ಕೇಂದ್ರಿಯ ಘಟಕ ಅಧ್ಯಕ್ಷ ಜಿ.ಮಹಮ್ಮದ್ ಹನೀಫ್ ಗೋಳ್ತಮಜಲು ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಖಾಸಿಂ ಅಹಮ್ಮದ್ ಎಚ್.ಕೆ. ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಕೆ.ಎಸ್. ಅಬೂಬಕ್ಕರ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಾನವೀಯತೆ ಸಮಾಜಕ್ಕೆ ಅಗತ್ಯ: ಸಚಿವ ರೈ"