- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಓಮ ಅಥವಾ ಅಜಮೋದ ತೀಕ್ಹ್ನ ಸುಗಂಧ ದ್ರವ್ಯವಾಗಿದ್ದು ಇದನ್ನು ಕಿಂಚಿತ್ ಪ್ರಮಾಣದಲ್ಲಿ ಬಳಸುವುದರಿಂದ ಪದಾರ್ಥದ ರುಚಿ ,ಪರಿಮಳ ಹಾಗು ಅದರ ಪ್ರಭಾವ ತಿಳಿಯುತ್ತದೆ. ಹಾಗೆಯೇ ಓಮವು ತ್ರಿದೋಷ ಶಾಮಕವಾಗಿದ್ದು ವದ್ಯಕೀಯ ಕ್ಷೆತ್ರಲ್ಲೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.
- ಓಮವನ್ನು ಗೋಮೂತ್ರದಲ್ಲಿ ಅರೆದು ಬಾವು ಇರುವ ಜಾಗಕ್ಕೆ ಲೇಪಿಸಿದರೆ ನೋವು ಹಾಗು ಊತ ಕಡಿಮೆಯಾಗುತ್ತದೆ.
- ಒಮವನ್ನು ಎಳ್ಳೆಣ್ಣೆಯೊಂದಿಗೆ ಹಾಕಿ ಕುದಿಸಿ ಶರೀರಕ್ಕೆ ಹಾಕಿ ಉಜ್ಜುವುದರಿಂದ ಶರೀರದ ಕಪ ಕಡಿಮೆಯಾಗುತ್ತದೆ ಮತ್ತು ನೋವುಗಳು ನಿವಾರಣೆಯಾಗುತ್ತದೆ.
- ಒಮವನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆಮವಾತ ,ಸಂಧುವಾತ, ವಾತರಕ್ತ ಇತ್ಯಾದಿ ವಾತ ಸಂಬಂಧಿ ವ್ಯಾಧಿಗಳು ಕಡಿಮೆಯಾಗುತ್ತದೆ.
- ಬಾಯಿ ದುರ್ಗಂಧಪೂರಿತವಾಗಿದ್ದರೆ ಸ್ವಲ್ಪ ಓಮವನ್ನು ಬಾಯಿಗೆ ಹಾಕಿ ಜಗಿಯಬೇಕು. ಇದರಿಂದ ಬಾಯಿ ರುಚಿಯೂ ಸಹ ಅಧಿಕವಾಗುತ್ತದೆ
- ಓಮ ಮತ್ತು ಅರಳಿನ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ತಿನ್ನುವುದರಿಂದ ಭೇದಿಯ ಸಮಸ್ಯೆ ನಿವಾರಣೆಯಾಗುತ್ತದೆ.
- ಒಮವನ್ನು ನೀರಿನಲ್ಲಿ ಕಲಸಿ ತೆಳ್ಳಗಿನ ಬಟ್ಟೆಯಮೇಲೆ ಲೇಪಿಸಿ ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ನೋವು, ರೆಪ್ಪೆಯ ಕುರ ಇತ್ಯಾದಿಗಳು ವಾಸಿಯಾಗುತ್ತದೆ.
- ಗಂಟಲು ನೋವು ಇದ್ದಾಗ ಒಮದ ಕಷಾಯದಲ್ಲಿ ಬಾಯಿ ಮುಕ್ಕಳಿಸಬೇಕು.
- ಸ್ವರ ಬಿದ್ದುಹೋದಾಗ ಒಮವನ್ನು ತುಪ್ಪದಲ್ಲಿ ಕಲಸಿ ನೆಕ್ಕಬೇಕು.
- ಹೊಟ್ಟೆ ಉಬ್ಬರಿಸುವುದು ಮತ್ತು ನೋವು, ಅಜೀರ್ಣ ಇದ್ದಾಗ ಒಮವನ್ನು ತುಪ್ಪದಲ್ಲಿ ಹುರಿದು ತಿನ್ನಬೇಕು.
- ಹೊಟ್ಟೆಯ ಹುಳದ ಬಾಧೆ ಇದ್ದಾಗ ಒಮದ ಕಷಾಯ ಕುಡಿಯಬೇಕು.
- ಒಮದ ಜೊತೆ ಸ್ವಲ್ಪ ತುಳಸಿ ಮತ್ತು ಅರಸಿನ ಹಾಕಿ ಕಷಾಯ ಮಾಡಿ ಕುಡಿದರೆ ಜ್ವರ, ಶೀತ ನೆಗಡಿ ಇತ್ಯಾದಿಗಳು ಕಡಿಮೆಯಾಗುತ್ತದೆ.
- ಬಿಕ್ಕಳಿಕೆಯ ತೊಂದರೆ ಇದ್ದಾಗ ಸ್ವಲ್ಪ ಓಮ ಮತ್ತು ಜೀರಿಗೆಯನ್ನು ಪುಡಿಮಾಡಿ ತುಪ್ಪದಲ್ಲಿ ಕಲಸಿ ನೆಕ್ಕಬೇಕು. ಇದನ್ನು ವಾಕರಿಕೆಯ ಸಂದರ್ಭದಲ್ಲೂ ಸಹ ಉಪಯೋಗಿಸ ಬಹುದು.
- ಓಮವು ಗರ್ಭಾಶಯವನ್ನು ಸಂಕುಚಿತಗೊಳ್ಳಲು ಸಹಕರಿಸುತ್ತದೆ.ಆದುದರಿಂದ ಮುಟ್ಟಿನ ಸಮಯದ ಹೊಟ್ಟೆನೋವಿಗೆ ಇದು ದಿವ್ಯ ಔಷಧಿ.(ಗರ್ಭಿಣಿಯರು ಸೇವಿಸಬಾರದು)
- ಮೈ ಮೇಲೆ ಹುಳ ಕಜ್ಜಿ ಇದ್ದಾಗ ಒಮವನ್ನು ಪುಡಿಮಾಡಿ ಗೋಮೂತ್ರದಲ್ಲಿ ಕಲಸಿ ಹಚ್ಕಾಬೇಕು. ಇದರಿಂದ ತುರಿಕೆ ಹಾಗು ಕಜ್ಜಿ ಕಡಿಮೆಯಾಗುತ್ತದೆ.
- ಓಮವು ಶರೀರದ ನಂಜು ನಿವಾರಕವಾಗಿದ್ದು ಪಿತ್ತ ಜನಕಾಂಗವನ್ನು ರಕ್ಷಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
- ಇದು ಶರೀರದ ಕೊಬ್ಬನ್ನು ಕರಗಿಸಲು, ರಕ್ತದ ಒತ್ತಡವನ್ನು ಹತೋಟಿಯಲ್ಲಿ ಇಡಲು ಮತ್ತು ಹ್ರುದ್ರೋಗವನ್ನು ತಡೆಯಲು ಸಹಕರಿಸುತ್ತದೆ
- ಒಮದ ಕಷಾಯವನ್ನು ಕುಡಿಯುವುದರಿಂದ ಮೂತ್ರ ಪ್ರವೃತ್ತಿ ಸರಿಯಾಗಿ ಆಗುತ್ತದೆ.
Be the first to comment on "ತ್ರಿದೋಷ ಶಾಮಕ ಓಮ"