ಇದು ಹವಾಮಾನ ಇಲಾಖೆ ಮಾಹಿತಿ. ಮಳೆ ಮುಂದುವರಿಯಲಿದೆ.
ಇದು ಹವಾಮಾನ ಇಲಾಖೆ ಮಾಹಿತಿ. ಮಳೆ ಮುಂದುವರಿಯಲಿದೆ.
ಶುಕ್ರವಾರ ರಾತ್ರಿಯಿಂದೀಚೆಗೆ ಕರಾವಳಿಯಾದ್ಯಂತ ಮಳೆ, ಮಳೆ ಮತ್ತು ಮಳೆಯದ್ದೇ ಸುದ್ದಿ. ಶಾಲೆ, ಕಚೇರಿಗಳಿಗೆ ತೆರಳುವವರಿಗೆ ಮತ್ತಷ್ಟು ಮುಂಜಾಗರೂಕತೆ ಅವಶ್ಯವೂ ಹೌದು. ಕೊನೆಗೂ ಎಚ್ಚೆತ್ತ ಆಡಳಿತ, ಮಳೆ ಬಂದರೆ ಮುಂದೇನು ಮಾಡೋದು ಎಂಬ ಕುರಿತು ಮೀಟಿಂಗ್ ಮಾಡಿದೆ. ಇದೇ ವೇಳೆ ಹವಾಮಾನ ಇಲಾಖೆ ಜೂನ್ 16ವರೆಗೆ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಜೂನ್ 13 ರಿಂದ 16 ರವರೆಗೆ ಭಾರೀ ಮಳೆ ಬೀಳುವ ಸಂಭವವಿರುವುದರಿಂದ ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Be the first to comment on "ಕರಾವಳಿಯಲ್ಲಿ ಭಾರೀ ಮಳೆ ಸಂಭವ"