www.bantwalnews.com report
ತಂದೆ ಉಮೇಶ್ ಭಟ್ ವೃತ್ತಿಯಲ್ಲಿ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್. ದಕ್ಷ ಅಧಿಕಾರಿ ಎಂದೇ ಹೆಸರುಗಳಿಸಿದವರು. ಅಷ್ಟೇ ಸೌಮ್ಯ ಸ್ವಭಾವದ ಜನಾನುರಾಗಿ ಅಧಿಕಾರಿ. ತಾಯಿ ವಿಜಯಲಕ್ಷ್ಮಿ. ಮಗ ನವೀನ್ ಭಟ್ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಟಾಪರ್ ಆಗಿ ಹೊರಹೊಮ್ಮಿದ್ದು, ಹೆತ್ತವರಿಗೆ ಸಹಜವಾಗಿಯೇ ಖುಷಿ ಕೊಟ್ಟಿದೆ.
ಉಮೇಶ್ ಭಟ್ ದಂಪತಿಯ ಇಬ್ಬರು ಮಕ್ಕಳೂ ಎಳವೆಯಲ್ಲಿಯೇ ಪ್ರತಿಭಾನ್ವಿತರು. ನವೀನ್ ಎಂಬಿಬಿಎಸ್ ಮುಗಿಸಿದ್ದರೆ, ನವ್ಯಾ ಎಂಬಿಬಿಎಸ್ ಕಲಿಯುತ್ತಿದ್ದಾರೆ.
ಸ್ಟೆತೋಸ್ಕೋಪ್ ಹಿಡಿಯಲಿಲ್ಲ: ನವೀನ್ ಸಿಇಟಿಯಲ್ಲೂ ಟಾಪರ್ ಆಗಿದ್ದರು. ಆಗಲೇ ಐಎಎಸ್ ಆಗುವ ಹಂಬಲ ಅವರಿಗಿತ್ತು. ಹೀಗಾಗಿ ಎಂಬಿಬಿಎಸ್ ಓದಿದ ಮೇಲೆ ಸ್ಟೆತೋಸ್ಕೋಪ್ ಹಿಡಿಯಲಿಲ್ಲ. ಚೆನ್ನೈನ ಶಂಕರ್ ಕೋಚಿಂಗ್ ನಲ್ಲಿ ಆರು ತಿಂಗಳು ಐಎಎಸ್ ಕೋಚಿಂಗ್ ಗೆ ಸೇರಿದರು. ಅವರ ಫ್ಯಾಮಿಲಿಯಲ್ಲಿ ಯಾರೂ ಐಎಎಸ್ ಮಾಡಿದವರಿಲ್ಲ. ಅಜ್ಜನಿಗೆ ಯಾರಾದರೂ ಡಿಸಿ ಆಗಬೇಕು ಎಂಬ ಆಸೆ ಇತ್ತಂತೆ. ಹೀಗಾಗಿ ಅಜ್ಜನ ಆಸೆಯನ್ನು ಮೊಮ್ಮಗ ಪೂರೈಸಿದಂತಾಗಿದೆ.
ಆಂತ್ರೋಪಾಲಜಿ ಸಬ್ಜೆಕ್ಟ್ ಅನ್ನೇ ನವೀನ್ ಐಎಎಸ್ ಪರೀಕ್ಷೆಗೆ ಬರೆದಿದ್ದಾರೆ. ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡದ್ದು ನವೀನ್ ಗೂ ಖುಷಿ ಕೊಟ್ಟಿದೆ. ಐಎಎಸ್ ಆಗಿ ಕರ್ನಾಟಕ ಕೇಡರ ನಲ್ಲೇ ಕೆಲಸ ಮಾಡುವ ಆಸೆ ಅವರದ್ದು. ಓದು, ವಿಷಯ ಸಂಪಾದನೆ, ಸ್ನೇಹಿತರೊಂದಿಗೆ ಮರು ಓದು, ಕೋಚಿಂಗ್ ಹಾಗೂ ಪ್ರಯತ್ನ ಜೊತೆಗೆ ದೇವರ ದಯ ಇದೇ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲು ಕಾರಣ ಎನ್ನುತ್ತಾರೆ ಭಟ್.
ಟ್ರೆಕ್ಕಿಂಗ್ ಹೋಗೋದು ಇಷ್ಟ. ಸಹಜವಾಗಿಯೇ ಓದು. ಸೈಲೆಂಟ್ ಹುಡುಗ ನವೀನ್ ಗೆ ಇದು ಇಷ್ಟ. ಐಎಎಸ್ ಎಷ್ಟೇ ಒತ್ತಡದ ಕೆಲಸವಾದರೂ ಜನರ ಬಳಿಗೆ ತೆರಳುವ ಉದ್ಯೋಗವಾದ ಕಾರಣ ಇಷ್ಟಪಟ್ಟಿದ್ದಾನೆ ಎನ್ನುತ್ತಾರೆ ತಂದೆ ಉಮೇಶ್ ಭಟ್.
Also Read:
Be the first to comment on "ನವೀನ್ ಭಟ್ 37ನೇ ರಾಂಕ್"