- ಡಾ.ಎ.ಜಿ.ರವಿಶಂಕರ್
ಜಾಯಿ ಕಾಯಿಯು ತೀಕ್ಷ್ನ ಸುಗಂಧ ದ್ರವ್ಯವಾಗಿದ್ದು, ಭಕ್ಷ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಹಾಕಿದರೂ ಉತ್ತಮ ರುಚಿ ಹಾಗು ಪರಿಮಳವನ್ನು ನೀಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಅನಾರೋಗ್ಯದ ಸಂದರ್ಭಗಳಲ್ಲಿ ಜಾಯಿ ಕಾಯಿಯ ಉಪಯೋಗವು ಉತ್ತಮ ಫಲಿತಾಂಶವನ್ನು ನೀಡುತ್ತದೆ.
- ತಲೆ ನೋವು ಇದ್ದಾಗ ಜಾಯಿ ಕಾಯಿಯನ್ನು ಹುಡಿಮಾಡಿ ನೀರಿನಲ್ಲಿ ಕಲಸಿ ಹಣೆಗೆ ಲೇಪ ಹಾಕಬೇಕು.
- ಶರೀರದ ಸಂಧುಗಳಲ್ಲಿ ಊಟ ಹಾಗು ನೋವು ಇದ್ದರೆ ಜಾಯಿಕಾಯಿಯ ಹುಡಿಯನ್ನು ಗೋಮೂತ್ರದಲ್ಲಿ ಕಲಸಿ ಸಂಧುಗಳಿಗೆ ಹಚ್ಚಬೇಕು.
- ಶರೀರ ಶೀತಮಯವಾಗಿದ್ದರೆ ಜಾಯಿಕಾಯಿಯ ಎಣ್ಣೆ ಕಾಯಿಸಿ ಪೂರ್ತಿ ದೇಹದ ಮೇಲೆ ಲೇಪಿಸಬೇಕು.
- ತುರಿಕೆಯುಕ್ತ ಚರ್ಮವ್ಯಾಧಿಗಳಲ್ಲಿ ಜಾಯಿಕಾಯಿಯನ್ನು ಪುಡಿಮಾಡಿ ಹಚ್ಚಬೇಕು ಅಥವಾ ಎಣ್ಣೆ ಕಾಯಿಸಿ ಹಚ್ಚಿದರೂ ಆದೀತು.
- ದುರ್ಗಂಧಯುಕ್ತ ಹಳೆಯ ಹುಣ್ಣುಗಳ ಮೇಲೆ ಜಾಯಿಕಾಯಿಯ ಹುಡಿಯನ್ನು ಹಾಕುವುದರಿಂದ ಹುಣ್ಣು ಶುದ್ಧಿಯಾಗಿ ಬೇಗನೆ ವಾಸಿಯಾಗುತ್ತದೆ.
- ಚಿಕ್ಕ ಮಕ್ಕಳಿಗೆ ಶೀತ ಆದಾಗ ಜಾಯಿಕಾಯಿ ಎಣ್ಣೆಯನ್ನು ಬಿಸಿಮಾಡಿ ನೆತ್ತಿಯಮೇಲೆ ಹಾಕಬೇಕು.
- ಜಾಯಿಕಾಯಿ ಎಣ್ಣೆಯನ್ನು ಬಿಸಿಮಾಡಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಹಾಗು ಹೇನು ನಿವಾರಣೆಯಾಗುತ್ತದೆ.
- ನಿದ್ರಾ ಹೀನತೆಯಲ್ಲೂ ಸಹ ಜಾಯಿಕಾಯಿ ಎಣ್ಣೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.
- ಸಣ್ಣತುಂಡು ಜಾಯಿಕಾಯಿಯನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ ಮತ್ತು ಗಂಟಲಿನ ಕಫ ಕರಗಿ ಸ್ವರ ಶುದ್ಧಿಯಾಗುತ್ತದೆ.
- ಮಕ್ಕಳು ಆಥವಾ ದೊಡ್ಡವರಲ್ಲಿ ಬೇಧಿಯ ಸಮಸ್ಯೆ ಇದ್ದಾಗ ಜಾಯಿಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪದ ಜೊತೆ ಸೇವಿಸಬೇಕು.
- ಜಾಯಿಕಾಯಿಯು ಬಾಯಾರಿಕೆ ಹಾಗು ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
- ರಕ್ತಭೇದಿಯ ಸಂದರ್ಭಗಳಲ್ಲಿ ಜಾಯಿಕಾಯಿಯನ್ನು ನೀರಿಗೆ ಹಾಕಿ ಕುದಿಸಿ ಆರಿಸಿದ ನೀರನ್ನು ರೋಗಿಗೆ ಕುಡಿಯಲು ಕೊಡಬೇಕು
- ಶೀತ,ಕೆಮ್ಮು,ದಮ್ಮು ಹಾಗು ಬಿಕ್ಕಳಿಕೆ ಇದ್ದಾಗ ಜಾಯಿಕಾಯಿಯನ್ನು ಜೇನುತುಪ್ಪದಲ್ಲಿ ಮಿಶ್ರಮಾಡಿ ಸೇವಿಸಬೇಕು.
- ಮುಟ್ಟಿನ ಸ್ರಾವ ಸರಿಯಾಗಿ ಆಗದಿದ್ದಲ್ಲಿ ಜಾಯಿಕಾಯಿಯನ್ನು ಅಲ್ಪಪ್ರಮಾಣದಲ್ಲಿ ಸೇವಿಸಬೇಕು.
- ಭೆದಿಯುಕ್ತ ಜ್ವರದಲ್ಲಿ ಜಾಯಿಕಾಯಿಉ ಉತ್ತಮ ಪರಿಣಾಮವನ್ನು ನೀಡುತ್ತದೆ.
Be the first to comment on "ನೋವು ನಿವಾರಕವಾಗಿಯೂ ಜಾಯಿಕಾಯಿ"