ಹಿಂದು ಯುವ ಸಮಾವೇಶದಲ್ಲಿ ಮಾಣಿಲ ಸ್ವಾಮೀಜಿ ಕರೆ
ಹೊರ ರಾಜ್ಯಗಳಲ್ಲಿ ನಡೆಯುತ್ತಿದ್ದ ದುಷ್ಕೃತ್ಯಗಳು ಇಂದು ನಮ್ಮ ನೆರೆಹೊರೆಯಲ್ಲಿಯೇ ನಡೆಯುತ್ತಿದೆ, ಆದರೂ ನಾವೂ ನಿದ್ರಾ ಸ್ಥಿತಿಯಲ್ಲಿದ್ದೇವೆ. ಭಯೋತ್ಪಾದನೆ, ಡ್ರಗ್ಸ್ ಮಾಫಿಯಾ, ಗೋ ಕಳ್ಳತನ ಮೊದಲಾದ ಆಕ್ರಮಣಗಳಿಂದ ರಕ್ಷಿಸಿ ಕೊಳ್ಳಲು ಜಾಗೃತಗೊಳ್ಳಬೇಕಾದ ಕಾಲ ಘಟ್ಟದಲ್ಲಿದೆ ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಶ್ರೀ ರಾಮ ಘಟಕ ಬೆಂಜನಪದವು ಇದರ ವತಿಯಿಂದ ಬೆಂಜನಪದವು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಹಿಂದೂ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ರಕ್ಷಣೆ ನಾವು ಮಾಡಿಕೊಳ್ಳಬೆಕಾದರೆ ಮೊದಲು ಒಗ್ಗಟ್ಟಾಗಬೇಕು. ಈ ದೇಶದ ಅಂತಃ ಸತ್ವವನ್ನು ಕಾಯುವ ಅಧಿಕಾರಿಗಳು ಬೇಕು ಎಂದ ಅವರು ಇಂತಹ ಕಾರ್ಯಕ್ರಮಗಳು ಪ್ರತಿ ಮನೆಮನೆಯಲ್ಲೂ ನಡೆಯ ಬೇಕು ಎಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕೆ.ಟಿ. ಉಲ್ಲಾಸ್ ದಿಕ್ಸೂಚಿ ಭಾಷಣ ಮಾಡಿ ಭಯೋತ್ಪಾದನೆ ಜಗತ್ತಿನ ಬೆಳವಣಿಗೆಗೆ ಕಂಟಕವಾಗಿದ್ದು, ಭಯದ ವಾತಾವರಣ ನಿರ್ಮಾಣಗೊಂಡಿದೆ. ಹಿಂದು ನಾಯಕರ ಹತ್ಯೆ ಮಾಡಲಾಗುತ್ತಿದೆ ಎಂದರು.
ಹಿಂದೂ ಸಂಘಟನೆಗಳ ಪ್ರಮುಖರಾದ ಅರುಣ್ ಕುಮಾರ್ ಶೆಟ್ಟಿ ನುಳಿಯಾಲುಗುತ್ತು, ಕಿಶೋರ್ ಕುಮಾರ್, ಕೊಡ್ಮಾನ್ ಕಾಂತಪ್ಪ ಶೆಟ್ಟಿ, ರವಿರಾಜ್ ಬಿ.ಸಿ.ರೋಡು, ರತ್ನಾಕರ ಶೆಟ್ಟಿ ಕಲ್ಲಡ್ಕ, ಚಂದ್ರ ಕಲಾಯಿ, ಉಮೇಶ್ ಆಲ್ಯಾನ್, ಪ್ರಶಾಂತ್ ಕೆಂಪುಗುಡ್ಡೆ, ಜಯಪ್ರಕಾಶ್, ಪ್ರವೀಣ್ ಹಾಜರಿದ್ದರು.
ಶರತ್ ಬೆಂಜನಪದವು ಸ್ವಾಗತಿಸಿ, ರಾಧಕೃಷ್ಣ ಅಡ್ಯಂತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಭಯೋತ್ಪಾದನೆ, ಡ್ರಗ್ ಮಾಫಿಯಾ ವಿರುದ್ಧ ಜಾಗೃತರಾಗಿ"