ಕರಿಂಕದಲ್ಲಿ ಬೀಗ ಮುರಿದು ಕಳವು

ಮನೆಯ ಬೀಗ ಮುರಿದು ಒಂದೂವರೆ ಪವನ್ ಚಿನ್ನಾಭರಣ ಹಾಗೂ 5 ಸಾವಿರ ಹಣ ದೋಚಿದ ಘಟನೆ ಶುಕ್ರವಾರ ತಡರಾತ್ರಿ ಕರಿಂಕದಲ್ಲಿ ನಡೆದಿದೆ.

ಕರಿಂಕ ನಿವಾಸಿ ಕೆ ಟಿ ರುಕ್ಮ ಗೌಡ ಶುಕ್ರವಾರ ರಾತ್ರಿ ಕುಟುಂಬ ಸಹಿತ ದೇವಾಲಯದಲ್ಲಿ ನಡೆಯುವ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ತೆರಳಿದ್ದು, ಹಿಂತಿರುಗಿ ಬಂದಾಗ ಜಗಲಿಯಲ್ಲಿ ಬಾಗಿಲಿಗೆ ಹಾಕಿದ್ದ ಬೀಗ ಬಿದ್ದಿತ್ತು ಹಾಗೂ ಎರಡು ರಾಡ್ ಕೂಡಾ ಪತ್ತೆಯಾಗಿತ್ತು. ಒಳಗೆ ಹೋಗಿ ನೋಡಿದಾಗ, ಕಳವು ಪ್ರಕರಣ ಗಮನಕ್ಕೆ ಬಂತು. ವಿಟ್ಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ