ಗ್ರಾಮ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಭದ್ರತೆ ಇಲ್ಲದ ಜನಪ್ರತಿನಿಗಳೆಂದರೆ ಅದು ಗ್ರಾಮ ಪಂಚಾಯತ್ ಸದಸ್ಯರು.
ಬಿ.ಸಿ.ರೋಡಿನ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ನಡೆದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆಗೆ ಸಂತಾಪ ಸೂಚಕ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಗೊಂಡಿತು.
ಜಲೀಲ್ ಹತ್ಯೆಯನ್ನು ಖಂಡಿಸಿ ಹಾಗೂ ಅವರಿಗೆ ಸಂತಾಪ ಸೂಚಿಸಿ ಗ್ರಾಮ ಪಂಚಾಯತ್ ಪ್ರತಿನಿಗಳ ಒಕ್ಕೂಟದ ವತಿಯಿಂದ ಬಿ.ಸಿ.ರೋಡಿನ ಎಸ್.ಜೆ.ಎಸ್.ವೈ ಸಭಾಂಗಣದಲ್ಲಿ ಸಭೆ ಗುರುವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಪ್ರತಿನಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೊಳ್ನಾಡು ಸುಭಾಶ್ಚಂದ್ರ ಶೆಟ್ಟಿ, ಜಲೀಲ್ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕಾರ್ಯ ನಡೆಯಬೇಕು ಎಂದರು. ಗ್ರಾಮ ಪಂಚಾಯತ್ ಸದಸ್ಯರಾಗಿ ಅದರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭ, ಆತಂಕ, ಅಡ್ಡಿ ಬರುವುದು ಸಹಜ. ಆದರೆ ಹತ್ಯೆಯಂಥ ಘಟನೆಗಳು ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥದ್ದಾಗಿದೆ. ಈ ಕುರಿತು ಜಿಲ್ಲಾ ಮಟ್ಟದಲ್ಲಿ ಸಭೆಯೊಂದನ್ನು ಕರೆದು ಜಲೀಲ್ ಹೆಸರು ಶಾಶ್ವತವಾಗಿ ಉಳಿಸುವಂಥ ಕಾರ್ಯವನ್ನು ನಡೆಸಲಾಗುವುದು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಣಕ:
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಜಲೀಲ್ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಣಕ ಎಂದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಉತ್ತಮ ಕಾರ್ಯ ನಡೆಸಿದ್ದ ಜಲೀಲ್ ಜನಾನುರಾಗಿಯಾಗಿದ್ದರು. ಆದರೆ ಹಾಡಹಗಲೇ ಅವರನ್ನು ಹತ್ಯೆ ಮಾಡಿದ ಘಟನೆ ಆಘಾತ ತಂದಿದೆ ಎಂದರು.
ಗ್ರಾಪಂ ಪ್ರತಿನಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜೇಶ್ ಬಾಳೇಕಲ್ಲು ಮಾತನಾಡಿ, ಜಲೀಲ್ ಹತ್ಯೆಯನ್ನು ನಂಬಲಾಗುತ್ತಿಲ್ಲ. ಗ್ರಾಪಂನ ಎಲ್ಲ ಪ್ರತಿನಿಗಳೊಂದಿಗೆ ಉತ್ತಮ ಒಡನಾಟವನ್ನು ಅವರು ಇಟ್ಟುಕೊಂಡಿದ್ದರು ಎಂದರು.
ರಾಜ್ಯ ಪ್ರತಿನಿ ಪುರುಷ ಎನ್. ಸಾಲಿಯಾನ್ ಮಾತನಾಡಿ, ಇವತ್ತು ಭದ್ರತೆ ಇಲ್ಲದ ಜನಪ್ರತಿನಿಗಳು ಎಂದರೆ ಅದು ಗ್ರಾಮಮಟ್ಟದ ಜನಪ್ರತಿನಿಗಳು ಆಗಿದ್ದಾರೆ. ರಾಜಕೀಯರಹಿತವಾಗಿ ಯೋಚನೆ ಮಾಡಬೇಕಾದ ಕಾಲ ಇಂದು ಬಂದಿದೆ. ಸ್ನೇಹಮಯಿಯಾಗಿದ್ದ ಜಲೀಲ್ ಹತ್ಯೆಯಿಂದ ಇಂದು ಎಲ್ಲ ಗ್ರಾಮಮಟ್ಟದ ಜನಪ್ರತಿನಿಗಳು ಭೀತಿಗೊಳಗಾಗಿದ್ದು, ಕರ್ತವ್ಯ ನಿರ್ವಹಿಸಲು ಆತಂಕಪಡುವಂತಾಗಿದೆ ಎಂದರು.
ಜಿಲ್ಲಾ ಒಕ್ಕೂಟ ಕಾರ್ಯದರ್ಶಿ ಸದಾನಂದ ಪೂಜಾರಿ ಜಲೀಲ್ ಅವರು ಜಿಲ್ಲಾ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು ಎಂದು ಸ್ಮರಿಸಿದರು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಮೌನಪ್ರಾರ್ಥನೆ ಮಾಡಲಾಯಿತು.
Be the first to comment on "ಬಿ.ಸಿ.ರೋಡಿನಲ್ಲಿ ಜಲೀಲ್ ಕರೋಪಾಡಿ ಸಂತಾಪ ಸಭೆ"