ನರಿಕೊಂಬು ಗ್ರಾಮದ ನಿನಿಪಡ್ಪು ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ನವೀಕರಣಗೊಂಡಿದ್ದು ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ, ನಾಗಪ್ರತಿಷ್ಠೆ ಹಾಗೂ ದೈವಗಳಿಗೆ ನೇಮೋತ್ಸವವು ಮೇ. 8ರಿಂದ 10ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಕಾರಂತ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ನರಿಕೊಂಬು ಗ್ರಾಮದ ಕೆದ್ದೇಲು ಎಂಬ ಸ್ಥಳದಲ್ಲಿ ಮೊಗೇರ ಬಂಧುಗಳು ಗ್ರಾಮದೈವ ನಾಲ್ಕೈತ್ತಾಯ ಪಂಜುರ್ಲಿ, ಕಲ್ಲುಡ ಕಲ್ಲುರ್ಟಿ, ಸಮಾಜದ ಕುಲದೈವಗಳಾದ ಆದಿಮೊಗೇರ್ಕಳ ದೈವಗಳು, ತನ್ನಿಮಾನಿಗ, ಧರ್ಮದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದರು. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಮೊಗೇರ ಬಂಧುಗಳು ಕೆದ್ದೇಲು ಜಮೀನು ಬಿಟ್ಟು ನಿನ್ನಿಪಡ್ಪು ಸ್ಥಳಕ್ಕೆ ಬಂದು ನೆಲೆಸಿದ್ದರು. 1995-96 ಸಾಲಿನಲ್ಲಿ ಮೊಗೆರ್ಕಳ ದೈವಸ್ಥಾನದಲ್ಲಿ 30 ಸೆಂಟ್ಸ್ ಸ್ಥಳವು ಮಂಜುರಾಗಿತ್ತು. ದೈವಸ್ಥಾನ ನಿರ್ಮಾಣ, ಧಾರ್ಮಿಕ ವಿಧಿಗಳು ನಡೆದಿದ್ದರೂ ವಾಸ್ತು ವ್ಯವಸ್ಥೆ ಸರಿಯಾಗದೆ ಪುನಃ ಗುಡಿಯನ್ನು ಬದಲಿಸಿ ಹೊಸದಾಗಿ ಬ್ರಹ್ಮಕಲಶೋತ್ಸವ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವೇ.ಮೂ. ನರಿಕೊಂಬು ರಾಜಗೋಪಾಲಚಾರ್ಯ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶ ವೈದಿಕ ವಿಧಿಗಳು ನಡೆಯಲಿದೆ. ಮೇ.೮ರಂದು ಸಂಜೆ 3.30 ಕ್ಕೆ ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ವಠಾರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ.೯ರಂದು ಧಾರ್ಮಿಕ ವಿಧಿವಿಧಾನಗಳು ಹಾಗೂ ಧಾರ್ಮಿಕ ಸಭೆ ನಡೆಯಲಿದ್ದು ಮೇ.೧೦ರಂದು ಬೆಳಿಗ್ಗೆ ಶ್ರೀ ನಾಗ ಆದಿಮೊಗೆರ್ಕಳ ಪರಿವಾಋ ದೈವದ ಪ್ರತಿಷ್ಠೆ ಹಾಘೂ ನವಕಲಶ, ಸಾನಿಧ್ಯ ಕಲಶಾಭಿಷೇಕ ನಡೆಯಲಿದ್ದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮಿಜಿ ಆಶೀರ್ವಚನ ನೀಡಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಅನೇಕ ಗಣ್ಯರು ಭಾಗವಹಿಸುವುದಾಗಿ ಅವರು ತಿಳಿಸಿದರು. ರಾತ್ರಿ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಅವರು ವಿವರ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಜೀಣೋದ್ದಾರ ಸಮಿತಿ ಗೌರವಾಧ್ಯಕ್ಷ ಬಾಬು ಮಾಸ್ತರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ನಾಟಿ, ಉಪಾಧ್ಯಕ್ಷರುಗಳಾದ ಉಮೇಶ್ ಬೋಳಂತೂರು, ದೇವರಾಜ ಪೂಜಾರಿ, ಕೇಶವ ಪಲ್ಲತ್ತಿಲ, ಪುರುಷೋತ್ತಮ ಸಾಲ್ಯಾನ್, ಮಾಧವ ಕರ್ಬೇಟ್ಟು, ಪ್ರೇಮನಾಥ ಶಟ್ಟಿ ಅಂತರ, ಪ್ರಮುಖರಾದ ಮೋನಪ್ಪ ಎನ್. ಜಿನರಾಜ ಕೋಟ್ಯಾನ್, ಎಂ.ಕೃಷ್ಣಪ್ಪ ನಾಯ್ಕ, ಚಂದ್ರಹಾಸ ಶಂಕರಕೋಡಿ, ಸೇಸಪ್ಪ ಮಾಸ್ತರ್ ಹಾಜರಿದ್ದರು.

Be the first to comment on "8ರಿಂದ 10ರವರೆಗೆ ಬ್ರಹ್ಮಕಲಶೋತ್ಸವ, ನಾಗಪ್ರತಿಷ್ಠೆ, ನೇಮೋತ್ಸವ"