- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಬೆಳ್ಳುಳ್ಳಿ ಉಪಕಾರಿ ಎಂಬುದು ಎಲ್ಲರಿಗೂ ಗೊತ್ತು. ಹೇಗೆ ಉಪಕಾರಿ ಎಂಬುದರ ಗುಟ್ಟು ಇಲ್ಲಿದೆ ನೋಡಿ.
ಬಾಹ್ಯ ಉಪಯೋಗಗಳು :
- ಸೊಂಟ ನೋವು ಅಥವಾ ಸೊಂಟ ಹಿಡಿದುಕೊಂಡಾಗ (ಕೊಳ್ಪು ) ಬೆಳ್ಳುಳ್ಳಿಯನ್ನು ನೀರಿನಲ್ಲಿ ಅಥವಾ ಗೋಮೂತ್ರದಲ್ಲಿ ಅರೆದು ನೋವು ಇದ್ದ ಸ್ಥಳಕ್ಕೆ ಲೇಪಿಸಬೇಕು.
- ಸಂಧು ವಾತಗಳಲ್ಲಿ ಊತ ಮತ್ತು ನೋವು ಇದಾಗ ಬೆಳ್ಳುಳ್ಳಿಯನ್ನು ಅರೆದು ಲೇಪಿಸಬೇಕು ಅಥವಾ ಬೆಳ್ಳುಳ್ಳಿಯನ್ನು ಜಜ್ಜಿ ರಸ ತೆಗೆದು ಹಚ್ಚಬೇಕು.
- ಪಕ್ಕೆಗಳಲ್ಲಿ ನೋವು ಕಾಣಿಸಿಕೊಂಡಾಗ ಬೆಳ್ಳುಳ್ಳಿ ರಸವನ್ನು ಆ ಜಾಗಕ್ಕೆ ಹಚ್ಚಿ ಚೆನ್ನಾಗಿ ತಿಕ್ಕಬೇಕು. ಬೆಳ್ಳುಳ್ಳಿಯನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಕಾಯಿಸಿ ಉಜ್ಜಿದರೂ ಆದೀತು.
- ತುರಿಕೆಯುಕ್ತ ಚರ್ಮರೋಗಗಳಲ್ಲಿ(fungal infection/ring worm) ಬೆಳ್ಳುಳ್ಳಿಯನ್ನು ಜಜ್ಜಿ ತುರಿಕೆ ಇರುವ ಸ್ಥಳಕ್ಕೆ ಹಾಕಿ ಉಜ್ಜುವುದರಿಂದ ತುರಿಕೆ ಹಾಗು ಚರ್ಮದಲ್ಲಿನ ತೊಂದರೆ ಕಡಿಮೆಯಾಗುತ್ತದೆ.
- ವಿಷಯುಕ್ತ ಪ್ರಾಣಿಗಳು ಕಚ್ಚಿದಾಗ ಕಚ್ಚಿದ ಸ್ಥಳಕ್ಕೆ ಬೆಳ್ಳುಳ್ಳಿಯನ್ನು ಅರೆದು ಲೇಪಿಸಬೇಕು. ಇದರಿಂದ ಗಾಯ ಶುದ್ಧಿಯಾಗುತ್ತದೆ ಮತ್ತು ಬೇಗನೆ ವಾಸಿಯಾಗುತ್ತದೆ.
- ಮೂಗಿನಲ್ಲಿ ಶೀತದ ಬಾಧೆ ಇದ್ದಾಗ ಬೆಳ್ಳುಳ್ಳಿ ಸಿಪ್ಪೆಯ ಧೂಪವನ್ನು ಮೂಗಿನಲ್ಲಿ ಎಳೆದುಕೊಳ್ಳಬೇಕು. ಇದರಿಂದ ಮೂಗು ಕಟ್ಟುವುದು ಮತ್ತು ಶೀತವು ಕಡಿಮೆಯಾಗುತ್ತದೆ.
- ಕಾಲಿನ ಅಡಿಭಾಗದಲ್ಲಿ ತುರಿಕೆ ಇದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ ನೀರಿಗೆ ಹಾಕಿ ಬಿಸಿಮಾದಬೇಕು. ನಂತರ ಆ ನೀರಿನಲ್ಲಿ ಕಾಲನ್ನು ಮುಳುಗಿಸಿ ಇಡಬೇಕು.
- ಕಿವಿ ನೋವು ಮತ್ತು ಸೋರುವುದು ಇದ್ದಾಗ ಬೆಳ್ಳುಳ್ಳಿಯನ್ನು ಎಳ್ಳೆಣ್ಣೆಯಲ್ಲಿ ಕಾಯಿಸಿ ಕಿವಿಗೆ ಬಿಡಬೇಕು.
- ತಲೆಯಲ್ಲಿ ಹೊಟ್ಟು ಇದ್ದಾಗ ಬೆಳ್ಳುಳ್ಳಿ ಎಣ್ಣೆಯನ್ನು ತಲೆಗೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಇಡಬೇಕು. ಜಾಸ್ತಿ ಹೊತ್ತು ಇಟ್ಟಲ್ಲಿ ತಲೆ ಬೆಂಕಿ ಬರುತ್ತದೆ.
- ಉಗುರಿನ ಬುಡದಲ್ಲಿ ನಂಜು ಮತ್ತು ನೋವು ಇದ್ದಾಗ ಬೆಳ್ಳುಳ್ಳಿಯನ್ನು ಜಜ್ಜಿ ಬೆರಳಿನ ಸುತ್ತ ಲೇಪಿಸಿ ಬಟ್ಟೆಯಿಂದ ಕಟ್ಟಬೇಕು.
- ಈಗಷ್ಟೇ ಮೂಡುತ್ತಿರುವ ಕುರದ ಮೇಲೆ ಬೆಳ್ಳುಳ್ಳಿಯನ್ನು ಲೇಪಿಸಿದರೆ ಕುರ ಅಲ್ಲಿಗೇ ಮಾಯವಾಗುತ್ತದೆ. ಎರಡರಿಂದ ಮೂರು ದಿನ ಹಿಂದಿನ ಕುರದ ಮೇಲೆ ಹಚ್ಚಿದರೆ ಬೇಗನೆ ಪಕ್ವವಾಗಿ ಕೀವು ಹೊರ ಬರುತ್ತದೆ.
- ತುರಿಕೆಯಿಂದ ಕೂಡಿದ ಮೊಡವೆಗಳ ಮೇಲೆ ಬೆಳ್ಳುಳ್ಳಿಯನ್ನು ಲೇಪಿಸಿದರೆ ಮೊಡವೆ ವಾಸಿಯಾಗುತ್ತದೆ. ಕೆಂಪಗಿರುವ ಪಿತ್ತ ಪ್ರಧಾನವಾದ ಮೊಡವೆಗಳ ಮೇಲೆ ಇದನ್ನು ಹಚ್ಚಬಾರದು.
ಆಭ್ಯಂತರ ಉಪಯೋಗಗಳು ಮುಂದಿನವಾರ……….
Be the first to comment on "ಸಾರ್ವಕಾಲಿಕ ನೆರವು ನೀಡುವ ಬೆಳ್ಳುಳ್ಳಿ"