ಚಹಾ ಕುರಿತು ಚರ್ಚೆ ಯಾಕೆ ಗೊತ್ತಾ?

 • ಡಾ.ಎ.ಜಿ.ರವಿಶಂಕರ್

www.bantwalnews.com

 

ತಾಜಾತನ ಹೊಂದಲು ಈ ಚಹವನ್ನು ಸೇವಿಸಿ. ಇಂಥ ಜಾಹೀರಾತುಗಳು ಪ್ರತಿನಿತ್ಯ ಕಾಣಲು ಸಿಗುತ್ತವೆ. ಅಡುಗೆಮನೆಯಲ್ಲಿರುವ ಚಹಾಪುಡಿ ಮತ್ತು ಅದರ ವೈದ್ಯಕೀಯ ಉಪಯೋಗ ಕುರಿತು ಇಲ್ಲಿದೆ ಮಾಹಿತಿ.

ಜಾಹೀರಾತು
 1. ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ತಣ್ಣೀರಿನಲ್ಲಿ ಕಲಸಿದ ಚಹಾ ಹುಡಿಯನ್ನು ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಗಾಯದ ಮೇಲೆ ಕಟ್ಟಬೇಕು. ನೇರವಾಗಿ ಚಹಾ ಹುಡಿಯನ್ನು ಗಾಯದ ಮೇಲೆ ಹಾಕಬಾರದು.
 2. ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ತಣ್ಣಗಿರುವ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಬಾಯಿ ಮುಕ್ಕಳಿಸಬೇಕು.
 3. ಚಹಾ ಹುಡಿಯನ್ನು ಬಾಯಿಹುಣ್ಣಿನ ಮೇಲೆ ಸಿಂಪಡಿಸಿದರೆ ಹುಣ್ಣು ಬೇಗನೆ ವಾಸಿಯಾಗುತ್ತದೆ. ಚಹಾದಲ್ಲಿ ಬಾಯಿ ಮುಕ್ಕಳಿಸಿದರೂ ಆದೀತು.
 4. ಚರ್ಮದ ಮೇಲೆ ಕಾಣಿಸಿಕೊಳ್ಳುವ ಸಣ್ಣದಾದ ನೋವುಭರಿತ ಬೋಕ್ಕೆಗಳ ಮೇಲೆ ಚಹಾ ಹುಡಿಯನ್ನು ಲೇಪಿಸಿದರೆ ಇದು ಬೇಗನೆ ಸೋರಿ ಕೀವು ಹೊರಬಂದು ಆರಾಮ ಲಭಿಸುತ್ತದೆ.
 5. ಭೇದಿಯ ಸಮಸ್ಯೆ ಕಂಡಾಗ ಚಹಾಕೆ ಸ್ವಲ್ಪ ನಿಂಬೆರಸ ಸೇರಿಸಿ ಸಾಧಾರಣ ಅರ್ಧಲೋತದಷ್ಟು ಕುಡಿಯಬೇಕು.
 6. ಚಹಾ ಸೇವಿಸುವುದರಿಂದ ಒತ್ತಡದ ಪರಿಣಾಮವಾದ ತಲೆನೋವು ನಿವಾರಣೆಯಾಗುತ್ತದೆ.
 7. ಕಣ್ಣುಗಳು ಆಯಾಸಗೊಂಡಾಗ ತಣ್ಣೀರಿನಲ್ಲಿ  ಚಹಾ ಹುಡಿಯನ್ನು ಕಲಸಿ ತೆಳ್ಳಗಿನ ಬಟ್ಟೆಯಲ್ಲಿ ಇಟ್ಟು ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು.
 8. ತಣ್ಣೀರಿನಲ್ಲಿ ಚಹಾ ಹುಡಿಯನ್ನು ಕಲಸಿ ತೆಳ್ಳಗಿನ ಬಟ್ಟೆಯಲ್ಲಿ ಸುತ್ತಿ  ಸುಟ್ಟ  ಗಾಯದಮೇಲೆ ಇಟ್ಟರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
 9. ನಿಯಮಿತವಾಗಿ ಚಹಾ ಕುಡಿಯುವುದರಿಂದ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
 10. ಇದು ನರಮಂಡಲಗಳಿಗೆ ಬಲದಾಯಕವಾಗಿದ್ದು ವಯಸ್ಕರಲ್ಲಿ ಕಾಣಿಸುವ ಅಂಗಾಂಗಗಳ ಕಂಪನವನ್ನು (parkinsons disease ) ಹತೋಟಿಯಲ್ಲಿಡಲು ಸಹಕರಿಸುತ್ತದೆ.
 11. ಚಹಾ ಪಕ್ಷವಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
 12. ಮೂತ್ರದ ಕಲ್ಲಿನ ನಿವಾರಣೆಯಲ್ಲಿ ಚಹಾ ಮಹತ್ತರ ಪಾತ್ರವಹಿಸುತ್ತದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಚಹಾ ಕುರಿತು ಚರ್ಚೆ ಯಾಕೆ ಗೊತ್ತಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*