ನಿತ್ಯಪ್ರಕಾಶ್ ಬಂಟ್ವಾಳ್  ಗೆ ಚಿನ್ನದ ಪದಕ

 

ಹವ್ಯಾಸಿ ಛಾಯಾಗ್ರಾಹಕರಾಗಿರುವ ಬಂಟ್ವಾಳದ ನಿತ್ಯಪ್ರಕಾಶ್ ಬಂಟ್ವಾಳ್ ಅವರ ಛಾಯಾಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ. “ರಾಷ್ಟ್ರಪ್ರೇಮ’’ ಕುರಿತು ಅವರು ತೆಗೆದ ಚಿತ್ರಕ್ಕೆ ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ಈ ಬಹುಮಾನ ದೊರಕಿದೆ. ಚಂಡೀಗಢದ ಟ್ರೈಸಿಟಿ ಫೊಟೋ ಆರ್ಟ್ ಸೊಸೈಟಿ ಸ್ಪರ್ಧೆಯನ್ನು ಆಯೋಜಿಸಿತ್ತು.

31 ದೇಶಗಳಿಂದ 410 ಮಂದಿ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.