ಕರ್ತವ್ಯಕ್ಕೆ ಅಡ್ಡಿ: ಇಬ್ಬರ ಬಂಧನ

ಗ್ರಾಮ ಕರಣಿಕರ ಹಾಗೂ ಗ್ರಾಮ ಸಹಾಯಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಸ್ಥಳೀಯ ನಿವಾಸಿಗಳಾದ ಅಬ್ದುಲ್ ರಹಿಮಾನ್ ಮತ್ತು ಅಬ್ದುಲ್ ಹಮೀದ್ ಬಂಧಿತರು. ಸಜಿಪ ಮುನ್ನೂರು ಗ್ರಾಮದ
ಸರಕಾರಿ ಶಾಲೆಗೆ ಸಂಬಂಧಿಸಿ ಮೀಸಲಿರಿಸಿರುವ ಜಮೀನಿನ ಗಡಿಗುರುತು ಮಾಡಿಕೊಡುವಂತೆ ಶಾಲೆ ವತಿಯಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆರೋಪಿಗಳು ಒತ್ತುವರಿ ಆಗಿದೆ ಎನ್ನಲಾದ ಜಮೀನು ಸಮತಟ್ಟುಗೊಳಿಸುತ್ತಿದ್ದಾರೆ ಎಂಬ ದೂರಿನನ್ವಯ ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ಪುರಂದರ ಹೆಗ್ಡೆ ಸೂಚನೆಯನ್ವಯ ಗ್ರಾಮ ಕರಣಿಕ ನವೀನ್ ಟಿ ಮತ್ತು ಗ್ರಾಮಸಹಾಯಕ ನವೀನ್ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೈಕು ಅಡ್ಡಗಟ್ಟಿ, ಬೈಕಿನ ಕೀಲಿಕೈಯನ್ನು ತೆಗೆದು ನಿಂದಿಸಿದ್ದಾಋಎ ಎಂದು ಆರೋಪಿಗಳ ವಿರುದ್ಧ ದೂರಲಾಗಿದೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ