ಮಂಜನಗುಡ್ಡೆಯಲ್ಲಿ ದೈವಸ್ಥಾನ ವಾರ್ಷಿಕ ನೇಮೋತ್ಸವ

ಮಂಜನಗುಡ್ಡೆ ಕುರ್ಮಾನ್ ಎಂಬಲ್ಲಿರುವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಇದಕ್ಕೂ ಮೊದಲು ನಡೆದ ಸತ್ಯನಾರಾಯಣ ಪೂಜೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ನಾಯಕ್ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಿದ್ದರು.

ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಜಿಪಂ ಮಾಜಿ ಸದಸ್ಯ ಆರ್. ಚೆನ್ನಪ್ಪ ಕೋಟ್ಯಾನ್, ಅಣ್ಣಪ್ಪ ಪಂಜುರ್ಲಿಯು ಕುರ್ಮಾನ್ ಮೂಲಸ್ಥಾನದಲ್ಲಿ ಬಂದು ನೆಲಸಿದ ಇತಿಹಾಸ ಹಾಗೂ ಆ ಸಂದರ್ಭ ದೈವದ ಆರಾಧನೆ ಮಾಡಿದ ಹಿರಿಯರು, ಸ್ಥಳದಾನಿಗಳನ್ನು ಸ್ಮರಿಸಿದರು. ಕೋಟಿಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲು ಜೀರ್ಣೊದ್ದಾರ ಸಮಿತಿಯ ಪ್ರದಾನ ಕಾರ್ಯದರ್ಶಿ ರವಿ ಪೂಜಾರಿ ಮಾತನಾಡಿದರು.

ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ ಶರತ್ ಆಳ್ವ ಅಮ್ಟೂರು, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಕುರ್ಮಾನ್ ಭಂಡಾರದಮನೆ ಉಪಸ್ಥಿತರಿದ್ದರು. ಬಿ.ಕೆ.ಅಣ್ಣು ಪೂಜಾರಿ ವಂದಿಸಿದರು. ಬಿಜೆಪಿ ನಾಯಕ ದಿನೇಶ್ ಅಮ್ಟೂರ್ ಕಾರ್ಯಕ್ರಮ ನಿರೂಪಿಸಿದರು.