- ಡಾ. ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಈರುಳ್ಳಿಯು ಕಣ್ಣಲ್ಲಿ ಉರಿ ಹಾಗು ನೀರು ಬರಿಸುವುದಿದ್ದರೂ ಬಹುತೇಕ ಎಲ್ಲಾ ಪದಾರ್ಥಗಳಿಗೆ ಇದನ್ನು ಬಳಸದೆ ಇರುವುದಿಲ್ಲ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಸಹ ಇದರ ಪ್ರಾಮುಖ್ಯತೆಯನ್ನು ಪರಿಗಣಿಸದೆ ಇರಲು ಸಾಧ್ಯವಿಲ್ಲ.
ಬಾಹ್ಯ ಉಪಯೋಗಗಳು-
- ಊತ ಹಾಗು ನೋವು ಇರುವ ಸ್ಥಳಗಳಲ್ಲಿ ಈರುಳ್ಳಿಯನ್ನು ಜಜ್ಜಿ ಬಿಸಿ ಮಾಡಿ ಕಟ್ಟಬೇಕು. ಇದರಿಂದ ಊತ ಹಾಗು ನೋವು ಶಮನವಾಗುತ್ತದೆ.
- ಈರುಳ್ಳಿ ರಸವನ್ನು ಸುಟ್ಟ ಗಾಯಗಳ ಮೇಲೆ ಹಾಕಿದರೆ ಗಾಯ ಶುದ್ಧಿಯಾಗುತ್ತದೆ ಮತ್ತು ಬೇಗನೆ ವಾಸಿಯಾಗುತ್ತದೆ.
- ಜೇನುನೊಣ ಕಚ್ಚಿದಾಗ ಈರುಳ್ಳಿ ರಸವನ್ನು ಕಚ್ಚಿದ ಜಾಗಕ್ಕೆ ಹಚ್ಚಿದರೆ ಉರಿ, ನೋವು ಹಾಗು ಊತ ಕಡಿಮೆಯಾಗುತ್ತದೆ.
- ಕಣ್ಣಿನ ದೃಷ್ಟಿ ಸಮಸ್ಯೆಯಿದ್ದಾಗ ಈರಳ್ಳಿಯುಯನ್ನು ಸುಟ್ಟು ಕರಿಮಾಡಿ, ಕೊಬ್ಬರಿ ಎಣ್ಣೆಯಲ್ಲಿ ನುಣ್ಣಗೆ ಅರೆದು ಕಾಡಿಗೆ ಯಂತೆ ಕಣ್ಣಿನ ರೆಪ್ಪೆಯ ಬುಡಭಾಗಕ್ಕೆ ಹಚಬೇಕು.
- ದೃಷ್ಟಿ ಮಾಂಧ್ಯದಲ್ಲಿ(ಕಣ್ಣಿನ ಪೋರೆಯಿಂದಾಗಿ ) ಈರುಳ್ಳಿ ರಸವನ್ನು ಜೇನುತುಪ್ಪದಲ್ಲಿ ಕಲಸಿ ತೆಳ್ಳಗಿನ ಬಟ್ಟೆಯಮೇಲೆ ಲೇಪಿಸಿ ಕಣ್ಣಿನ ಮೇಲೆ ಪ್ರತಿದಿನ ಇಟ್ಟುಕೊಳ್ಳಬೇಕು ಅಥವಾ ಬಿಂದುರೂಪದಲ್ಲಿ ಕಣ್ಣಿಗೆ ಬಿಡಬೇಕು.
- ಕಿವಿನೋವು ಹಾಗು ತುರಿಕೆ ಇದ್ದಾಗ ಈರುಳ್ಳಿ ರಸವನ್ನು ಬಿಸಿಮಾಡಿ ಕಿವಿಗೆ ಬಿಡಬೇಕು.
- ಈರುಳ್ಳಿ ರಸವನ್ನು ಹಣೆಯ ಮೇಲೆ ಹಚ್ಚುವುದರಿಂದ ಉಷ್ಣ ನಿಮಿತ್ತವಾದ ತಲೆನೋವು ಕಡಿಮೆಯಾಗುತ್ತದೆ
- ಬಾಣಂತಿಯರ ಹೊಟ್ಟೆಯಲ್ಲಿ ಕಾಣಿಸುವ ಚರ್ಮದ ಕಲೆಗಳ (stretch mark ) ಮೇಲೆ ಈರುಳ್ಳಿ ರಸವನ್ನು ಹಚ್ಚಬೇಕು ಅಥವಾ ಈರುಳ್ಳಿ ಸಿಪ್ಪೆಯನ್ನು ಉಜ್ಜಬೇಕು.
- ಮೂರ್ಛೆ ರೋಗ,ಅಪಸ್ಮಾರ ಇತ್ಯಾದಿಗಳಲ್ಲಿ ಈರುಳ್ಳಿ ರಸವನ್ನು ಮೂಗಿಗೆ ಬಿಟ್ಟರೆ ರೋಗಿಯು ಬೇಗನೆ ಎಚ್ಚರಗೊಳ್ಳು ತ್ತಾರೆ.
- ಈರುಳ್ಳಿ ರಸವನ್ನು ಮೂಗಿಗೆ ಬಿಡುವುದರಿಂದ ಮೂಗಿನ ರಕ್ತಸ್ರಾವ ಹಾಗು ಶೀತ ಬಾಧೆಯು ಕಡಿಮೆಯಾಗುತ್ತದೆ.
- ಕಾಲಿನ ಹಿಮ್ಮಡಿ ಒಡೆದು ಗಾಯವಾದಾಗ ಈರುಳ್ಳಿಯನ್ನು ತುಂಡುಮಾಡಿ ಹಿಮ್ಮಡಿಗೆ ಉಜ್ಜಬೇಕು ಅಥವಾ ಹಿಮ್ಮಡಿ ಯಲ್ಲಿ ಇಟ್ಟು ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಬೇಕು.
- ಮುಖದಲ್ಲಿ ಬಂಗು (ವ್ಯಂಗ ) ಕಾಣಿಸಿಕೊಂಡಾಗ ಈರುಳ್ಳಿ ರಸವನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು
- ಈರುಳ್ಳಿ ರಸವನ್ನು ತಲೆಗ ಹಚ್ಚುವುದರಿಂದ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ಉತ್ತಮವಾಗಿ ಬೆಳೆಯುತ್ತದೆ.
ಆಭ್ಯಂತರ ಉಪಯೋಗಗಳು ಮುಂದಿನವಾರ ………..
Be the first to comment on "ಕೇವಲ ಕಣ್ಣೀರಿಗಷ್ಟೇ ಅಲ್ಲ ಈರುಳ್ಳಿ"