- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
www.banwalnews.com
ಲವಂಗ ಎಲ್ಲರಿಗೂ ತಿಳಿದಿರುವ ಸುಗಂಧಯುಕ್ತ ಮಸಾಲೆ ದ್ರವ್ಯ. ಅದು ಪದಾರ್ಥದ ರುಚಿ ಹಾಗು ಪರಿಮಳವನ್ನು ಹೆಚ್ಚಿಸುತ್ತದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಸಹ ತನ್ನ ಗುಣ ಹಾಗು ಪ್ರಭಾವದಿಂದಾಗಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.
- ಶೀತ ಹಾಗು ಕಪದ ಪರಿಣಾಮವಾಗಿ ತಲೆಭಾರ ಅಥವಾ ನೋವು ಕಾಣಿಸಿಕೊಂಡಾಗ ಲವಂಗವನ್ನು ಬಿಸಿನೀರಿನಲ್ಲಿ ಅರೆದು ಹಣೆಗೆ ಲೇಪಿಸಬೇಕು.
- ಲವಂಗದ ಚೂರ್ಣವನ್ನು ಮೂಗಿಗೆ ಹಾಕಿದರೆ ತಲೆನೋವು, ಮೂಗು ಕಟ್ಟುವುದು ಹಾಗು ಶೀತದ ಸಮಸ್ಯೆ ಕಡಿಮೆಯಾಗುತ್ತದೆ.
- ಚರ್ಮದ ಮೇಲೆ ಕುರ ಮೂಡಿದಾಗ ಆರಂಭದಲ್ಲೇ ಲವಂಗದ ಲೇಪ ಹಾಕಿದರೆ ಕುರ ಆರಿ ಹೋಗುತ್ತದೆ ಮತ್ತು ಕುರ ಮೂಡಿ ಸ್ವಲ್ಪ ದಿನಗಳಾದರೆ ಬೇಗನೆ ಹಣ್ಣಾಗಿ ಸೋರಲು ಸಹಕರಿಸುತ್ತದೆ.
- ಚರ್ಮದಲ್ಲಿ ತುರಿಕೆ ಕಂಡಾಗ ಲವಂಗದ ಹುಡಿಯನ್ನು ಆ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
- ಮುಖದಲ್ಲಿ ಮೊಡವೆಗಳಿದ್ದಾಗ ಲವಂಗದ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಮೊಡವೆಗಳ ಮೇಲೆ ಹಚ್ಚಬೇಕು.
- ಹುಳ ತಿಂದು ಹಲ್ಲುನೋವು ಕಾಣಿಸಿಕೊಂಡಾಗ ಲವಂಗ ಮತ್ತು ಉಪ್ಪಿನ ಮಿಶ್ರಣವನ್ನು ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟು ಕಚ್ಚಿ ಹಿಡಿಯಬೇಕು.
- ವಾತದ ಕಾರಣದಿಂದಾಗಿ ಸಂಧುಗಳಲ್ಲಿ ಊತ ಮತ್ತು ನೋವು ಇದ್ದಾಗ ಲವಂಗವನ್ನು ಗೋಮೂತ್ರದಲ್ಲಿ ಅರೆದು ಲೇಪ ಹಾಕಬೇಕು ಅಥವಾ ಲವಂಗದ ಎಣ್ಣೆ ಕಾಯಿಸಿ ಹಚ್ಚಿದರೂ ಆದೀತು.
- ಬಾಯಿಗೆ ರುಚಿ ಇಲ್ಲದಾಗ ಮತ್ತು ಅಜೀರ್ಣದ ಸಮಸ್ಯೆಯಿದ್ದಾಗ ಲವಂಗವನ್ನು ಬಾಯಲ್ಲಿ ಜಗಿಯಬೇಕು.
- ಲವಂಗವನ್ನು ಬಾಯಲ್ಲಿ ಹಾಕಿ ಜಗಿಯುವುದರಿಂದ ವಾಕರಿಕೆ, ಬಾಯಿಯ ದುರ್ಗಂಧ, ಕಡಿಮೆ ಜೋಲ್ಲುರಸದ ಸ್ರಾವ ಇತ್ಯಾದಿಗಳು ನಿವಾರಣೆಯಾಗುತ್ತದೆ.
- ಲವಂಗವನ್ನು ಮಿತವಾಗಿ ಬಳಸುವುದರಿಂದ ಪಿತ್ತಕೋಶದ ಶಕ್ತಿಯು ಅಧಿಕವಾಗುತ್ತದೆ ಮತ್ತು ಜೀರ್ಣಶಕ್ತಿಯು ವೃದ್ಧಿಯಾಗುತ್ತದೆ.
- ಲವಂಗ ಮತ್ತು ಹಿಂಗನ್ನು ನೀರಿನಲ್ಲಿ ಕುದಿಸಿ ಆ ನೀರನಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ದವಡೆಯ ತೊಂದರೆಗಳು ನಿವಾರಣೆಯಾಗುತ್ತದೆ.
- ಲವಂಗದ ಕಷಾಯವನ್ನು ಕುಡಿಯುವುದರಿಂದ ಅನಿಯಮಿತ ಮಲಪ್ರವೃತ್ತಿಯು ನಿವಾರಣೆಯಾಗುತ್ತದೆ ಮತ್ತು ಹೊಟ್ಟೆಯಲ್ಲಿನ ಅಧಿಕ ವಾಯು ಕಡಿಮೆಯಾಗುತ್ತದೆ.
- ಲವಂಗದ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಕಪಪೂರಿತ ಕೆಮ್ಮು, ದಮ್ಮು ಹಾಗು ಸ್ವರಭೇದವು ಶಮನವಾಗುತ್ತದೆ. ಇದರಿಂದ ಬಿಕ್ಕಳಿಕೆಯು ಸಹ ಕಡಿಮೆಯಾಗುತ್ತದೆ.
- ಲವಂಗದ ಹುಡಿಯನ್ನು ದನದ ತುಪ್ಪದ ಜೊತೆ ಸೇವಿಸುವುದರಿಂದ ಮೊಲೆಹಾಲು ಅಧಿಕವಾಗುತ್ತದೆ ಮತ್ತು ಹಾಲು ಶುದ್ಧಿಯಾಗುತ್ತದೆ.
- ಲವಂಗದ ಕಷಾಯವು ಮೂತ್ರ ಪ್ರವೃತ್ತಿ ಸರಿಯಾಗಿ ಆಗಲು ಸಹಕರಿಸುತ್ತದೆ.
- ಮಾನಸಿಕ ಒತ್ತಡ ಹಾಗು ಖಿನ್ನತೆಯಲ್ಲಿ ಬೆಲ್ಲಹಾಕಿ ಮಾಡಿದ ಲವಂಗದ ಕಷಾಯವು ಉತ್ತಮ ಪ್ರಯೋಜನವನ್ನು ನೀಡುತ್ತದೆ.
Be the first to comment on "ಖಿನ್ನತೆ ತೊರೆಯಲೂ ಸಹಕಾರಿ ಲವಂಗ"