ಮೆಂತೆ ಅಥವಾ ಮೆಂತ್ಯ ಅಥವಾ ಮೆತ್ತೆ.. ಇದು ಕಹಿಯಾದರೂ ಪರಿಣಾಮಕಾರಿ.
- ಡಾ.ರವಿಶಂಕರ್ ಎ.ಜಿ.
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
- www.bantwalnews.com
- ಮೆತ್ತೆಯು ವಾತ ಮತ್ತು ಕಪ ಶಾಮಕವಾಗಿದ್ದು ,ಪಿತ್ತವನ್ನು ಅಧಿಕ ಮಾಡುತ್ತದೆ.
- ಮೆತ್ತೆಯು ಪಿತ್ತಜನಕಾಂಗ ಹಾಗು ಮೇದೋಜೀರಕ ಗ್ರಂಥಿಗೆ ಬಲದಾಯಕವಾಗಿದ್ದು, ಅಮೂಲಕ ಜೀರ್ಣಾಂಗ ವ್ಯೂಹದ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.
- ಮೆತ್ತೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ದೇಹದ ಸಂಧು ಮತ್ತು ಮಾಂಸಖಂಡಗಳ ನೋವು ನಿವಾರಣೆಯಾಗುತ್ತದೆ. ವಾತ ರೋಗದಲ್ಲಿ ಇದು ಬಹು ಪ್ರಯೋಜನಕಾರಿಯಾಗಿದೆ.
- ಶರೀರದ ನರಗಳಿಗೆ ಮೆತ್ತೆಯು ಬಲದಾಯಕವಾಗಿದ್ದು ಇದರ ಸೇವನೆಯಿಂದ ನರಗಳ ದುರ್ಬಲತೆ ಕಡಿಮೆಯಾಗುತ್ತದೆ.
- ಜೊಲ್ಲು ರಸದ ಕೊರತೆಯಿಂದ ಬಾಯಿ ಒಣಗಿದಾಗ ಮೆತ್ತೆಯನ್ನು ಬಾಯಲ್ಲಿ ಜಗಿಯಬೇಕು., ಇದರಿಂದ ಸರಿಯಾಗಿ ಜೊಲ್ಲುರಸ ಸ್ರವಿಸುತ್ತದೆ.
- ಹೊಟ್ಟೆ ಹಾಗು ಕರುಳಿನಲ್ಲಿ ವಾಯು ತುಂಬಿ ಉಬ್ಬರಿಸಿದಂತಾಗಿ ಉಸಿರಾಡಲು ಕಷ್ಟವಾಗುತ್ತಿದ್ದರೆ ಮೆತ್ತೆಯನ್ನು ಬೆಲ್ಲದೊಂದಿಗೆ ಸೇರಿಸಿ ಜಗಿಯಬೇಕು ಅಥವಾ ಕಷಾಯ ಮಾಡಿ ಕುಡಿಯಬೇಕು.
- ಬಾಣಂತಿಯರು ಮೆತ್ತೆಯನ್ನು ಉಪಯೋಗಿಸುವುದರಿಂದ ಆಯಾಸ ,ಜಡತ್ವ, ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.
- ಬಾಣಂತಿಯರಲ್ಲಿ ಎದೆಹಾಲು ಕಡಿಮೆ ಇದ್ದಲ್ಲಿ ಮೆತ್ತೆಯ ಹಾಲು ಕಷಾಯ ಮಾಡಿ ಕುಡಿಯಬೇಕು. ಬೆಲ್ಲದೊಂದಿಗೆ ಸೇರಿಸಿ ಜಗಿದರೂ ಆದೀತು.
- ಮಲಬದ್ದತೆ ಇದ್ದಾಗ ಮೆತ್ತೆ ಮತ್ತು ಬೆಲ್ಲದ ಮಿಶ್ರಣವನ್ನು ಸೇವಿಸಬೇಕು.
- ಮೆತ್ತೆಯ ಕಷಾಯ ಕುಡಿಯುವುದರಿಂದ ಸ್ತ್ರೀಯರ ಕೆಲವು ವಿಧದ ಬಿಳುಪು ರೋಗವು ವಾಸಿಯಾಗುತ್ತದೆ.
- ಮೆತ್ತೆಯನ್ನು ನೀರಿನಲ್ಲಿ ಅರೆದು ತಲೆಗೆ ಹಾಕುವುದರಿಂದ ತಲೆ ಕೂದಲು ಬೆಳ್ಳಗಾಗುವುದು ಮತ್ತು ಅಧಿಕವಾಗಿ ಉದುರುವುದು ಕಡಿಮೆಯಾಗುತ್ತದೆ.
- ಮೆತ್ತೆಯನ್ನು ಗೋಮೂತ್ರದಲ್ಲಿ ಅರೆದು ಹಚ್ಚುವುದರಿಂದ ಕುರ, ಗುಳ್ಳೆ, ಊತ, ಸಂಧು ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.
- ಮೆತ್ತೆಯನ್ನು ಹಾಲಿನ ಕೆನೆಯಲ್ಲಿ ಅರೆದು ಕಣ್ಣಿನ ಸುತ್ತಲು ಲೇಪಿಸುವುದರಿಂದ ಕಣ್ಣಿನ ಸುತ್ತಲು ಕಾಣಿಸಿಕೊಳ್ಳುವ ವೈವರ್ಣ್ಯತೆ ಮಾಯವಾಗುತ್ತದೆ ಮತ್ತು ಕಣ್ಣಿನ ಕಾಂತಿ ವ್ರದ್ಧಿಯಾಗುತ್ತದೆ.
- ಮೆತ್ತೆಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ಮಧುಮೇಹ ರೋಗವು ಹತೋಟಿಗೆ ಬರುತ್ತದೆ ಮತ್ತು ಶರೀರೆದ ಬಲ ವ್ರದ್ಧಿಯಾಗುತ್ತದೆ
- ಮೂತ್ರ ಸರಿಯಾಗಿ ವಿಸರ್ಜನೆಯಾಗದಿದ್ದಲ್ಲಿ ಮೆತ್ತೆಯ ಕಷಾಯ ಮಾಡಿ ಕುಡಿಯಬೇಕು. ಇದರಿಂದ ಮೂತ್ರ ಪ್ರವೃತ್ತಿ ಸರಾಗವಾಗಿ ಆಗುತ್ತದೆ.
- ಗಂಟಲು ನೋವು(Tonsillitis) ಇದ್ದಾಗ ಮೆತ್ತೆ ಕಷಾಯಕ್ಕೆ ಸ್ವಲ್ಪ ಉಪ್ಪು ಹಾಕಿ ದಿನಕ್ಕೆರಡು ಬಾರಿ ಬಾಯಿ ಹಾಗು ಗಂಟಲು ಮುಕ್ಕಳಿಸ ಬೇಕು.
- ಮೆತ್ತೆಯನ್ನು ನಿತ್ಯ ಸೇವಿಸುವುದರಿಂದ ಶರೀರದಲ್ಲಿರುವ ಅಧಿಕ ಕೊಬ್ಬಿನ ಅಂಶ (cholesterol ) ಕಡಿಮೆಯಾಗುತ್ತದೆ.
- ಕಪ ಪೂರಿತ ಕೆಮ್ಮಿನಲ್ಲಿ ಮೆತ್ತೆಯನ್ನು ಸೇವಿಸಿದರೆ ಕಪವು ಸರಾಗವಾಗಿ ಕೆಮ್ಮಿನ ಜೊತೆ ಹೊರಬರುತ್ತದೆ.
Be the first to comment on "ಬಹೂಪಯೋಗಿ ಮೆಂತೆ"