ಮಂಗಳೂರು ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಫೆ. 21, 23, ಹಾಗೂ 28 ರಂದು ಜಿಲ್ಲೆಯ ವಿವಿದೆಡೆ ತೆರಳಿ, ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲು/ದೂರುಗಳನ್ನು ಸ್ವೀಕರಿಸುವರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಲಾಗುವುದು. ಭರ್ತಿ ಮಾಡಿ, ನೋಟರಿಯಿಂದ ಅಫಿದಾವಿತ್ ಮಾಡಿಸಿದ ಸದ್ರಿ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗು ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗಧಿತ ಪ್ರಪತ್ರದಲ್ಲಿ ನೀಡಬಹುದಾಗಿದೆ ಹಾಗೂ ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ದೂರುಗಳನ್ನು ಅಲ್ಲಿಯೇ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.
ಫೆ. 21 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಛೇರಿ, ಮಧ್ಯಾಹ್ನ 3 ರಿಂದ ಸಂಜೆ 4-30 ಗಂಟೆಯವರೆಗೆ ಸರ್ಕಾರಿ ಅತಿಥಿ ಗೃಹ(ಐ.ಬಿ.), ಬಂಟ್ವಾಳ. ಫೆ. 23 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೂಡಬಿದ್ರೆ ವಿಶೇಷ ತಹಶೀಲ್ದಾರರ ಕಛೇರಿ, ಮೂಡಬಿದ್ರೆ, ಫೆ. 28 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕು ಕಛೇರಿ, ಸುಳ್ಯ. ಮಧ್ಯಾಹ್ನ 3 ರಿಂದ ಸಂಜೆ 4-30 ಗಂಟೆಯ ವರೆಗೆ ಪುತ್ತೂರು ತಾಲೂಕು ಕಛೇರಿ,
ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
ಅನಾಮಧೇಯ ಅರ್ಜಿಗಳು ಬಂದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅರ್ಜಿದಾರರು ನಮೂನೆ I & IIರಲ್ಲಿ ಭರ್ತಿ ಮಾಡಿ ನೋಟರಿಯಿಂದ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಛೇರಿಗೆ ಅಥವಾ ನೇರವಾಗಿ ಮಾನ್ಯ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ/ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ರವರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲೋಕಾಯುಕ್ತ ಅಧಿಕಾರಿಗಳ ಪ್ರವಾಸ"