www.bantwalnews.com
ಚೊಕ್ಕಾಡಿ ಶ್ರೀ ರಾಮ ದೇವಾಲಯದ ಆವರಣದಲ್ಲಿ ಉಚಿತವಾಗಿ ಅಸ್ಥಿಮಜ್ಜೆ ದಾನಿಗಳ ದಾಖಲಾತಿ 19ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ವರೆಗೆ ನಡೆಯುತ್ತದೆ.
ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ, ಹವ್ಯಕ ಸಭಾ ಚೊಕ್ಕಾಡಿ, ಪಂಜ ವಲಯ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ ಎಂದು ಈ ಶಿಬಿರದ ಸಯೋಜಕ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ತಿಳಿಸಿರುತ್ತಾರೆ. ಬೆಂಗಳೂರು ಮೆಡಿಕಲ್ ಕಾಲೇಜ್ ಅಭಿವೃದ್ಧಿ ಟ್ರಸ್ಟ್ ಇನ್‌ಪೋಸಿಸ್ ಸಹಕಾರದೊಂದಿಗೆ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಬೆಂಗಳೂರಿನಿಂದ ಸುಮಾರು 10 ಮಂದಿ ತಜ್ಞ ವೈದ್ಯರು ಮತ್ತು ತಂತ್ರಜ್ಞರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಮತ್ತು ’ಅಸ್ಥಿಮಜ್ಜೆ ದಾನ’ದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅಸ್ಥಿಮಜ್ಜೆ ದಾನಿಗಳಾಗಿ ನೊಂದಾವಣೆ ಮಾಡಿದ ದಾನಿಗಳಿಂದ 5 ಎಂಎಲ್ ರಕ್ತದ ಸ್ಯಾಂಪಲನ್ನು ಸಂಗ್ರಹಮಾಡಲಿದ್ದಾರೆ.
125 ಕೋಟಿಯಷ್ಟು ಜನಸಂಖ್ಯೆ ಇರುವ ಭಾರತ ದೇಶದಲ್ಲಿ ದಾಖಲಾದ ಅಸ್ಥಿಮಜ್ಜೆ ದಾನಿಗಳು ಕೇವಲ ಕೆಲವೇ ಸಾವಿರದಷ್ಟಿರುವುದು ಬಹಳ ಖೇದನೀಯ ವಿಚಾರ. ಪ್ರತಿ ವರ್ಷ ಭಾರತ ದೇಶವೊಂದರಲ್ಲಿ 1,00,000 ಅಸ್ಥಿಮಜ್ಜೆ ಕಸಿಯ ಅಗತ್ಯವಿದ್ದು ಕೇವಲ 1000 ಮಂದಿ ಮಾತ್ರ ಅಸ್ಥಿಮಜ್ಜೆಯ ಹೊಂದಾಣಿಕೆ ಇರುವ ಅಸ್ಥಿಮಜ್ಜೆ ಸಿಗುತ್ತಿದ್ದು, ಅನಗತ್ಯವಾಗಿ ಪ್ರಾಣ ಹಾನಿಯಾಗುತ್ತಿರುವುದು ಬಹಳ ನೋವಿನ ಸಂಗತಿ ಎಂದು ಸಂಯೋಜಕ ಡಾ. ಚೂಂತಾರು ತಿಳಿಸಿರುತ್ತಾರೆ. ರಕ್ತದ ಕ್ಯಾನ್ಸರ್, ಲಿಂಪೋಮಾ, ಥಾಲೆಸೀಮಿಯಾ, ಏಪ್ಲಾಸ್ಟಿಕ್ ಅನಿಮೀಯ ಮುಂತಾದ ರೋಗಗಳಲ್ಲಿ ಅಸ್ಥಿಮಜ್ಜೆಯ ಕಸಿ ರೋಗಿಯ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವಿದೆ. ಒಬ್ಬ ವ್ಯಕ್ತಿ ಅಸ್ಥಿಮಜ್ಜೆಯ ದಾನ ಪಡೆಯುವ ಮೊದಲು, ಅಸ್ಥಿಮಜ್ಜೆ ಹೊಂದಾಣಿಕೆ ಮಾಡುವ ಪ್ರಕ್ರಿಯೆಗೆ 5 ರಿಂದ 8 ಸಾವಿರದಷ್ಟು ಖರ್ಚು ತಗಲುತ್ತಿದ್ದು ಈ ಶಿಬಿರದಲ್ಲಿ ಎಲ್ಲರಿಗೂ ಉಚಿತವಾಗಿ ಮಾಡಲಾಗುತ್ತದೆ. ಕನಿಷ್ಟ 500 ಮಂದಿ ದಾನಿಗಳನ್ನು ನೋಂದಾವಣೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಮತ್ತು ಹೆಚ್ಚಿನ ಜನರು ದಾನಿಗಳಾಗಿ ನೋಂದಾಯಿಸಿಕೊಳ್ಳಬೇಕಾಗಿ ಈ ಪ್ರಕಟಣೆಯಲ್ಲಿ ಕೋರಲಾಗಿದೆ. ವಿವರಗಳಿಗೆ www.bonemarrowregistry.co.in
bmcbmr@gmail.com ಅಥವಾ ದೂರವಾಣಿ ಸಂಖ್ಯೆ 9845135787.
Be the first to comment on "ಅಸ್ಥಿಮಜ್ಜೆ ದಾನಿಗಳ ದಾಖಲಾತಿ ಶಿಬಿರ"