www.bantwalnews.com report
ಉಳ್ಳಾಲ ಸಮೀಪ ಕೋಟೆಕಾರು ಎಂಬಲ್ಲಿ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಉಪ್ಪಳದ ಕಾಲಿಯಾ ರಫೀಕ್ (35) ಎಂಬಾತನನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿದೆ.
ಕೋಟೆಕಾರು ಬಳಿ ಈತ ಸಂಚರಿಸುತ್ತಿದ್ದ ರಿಟ್ಜ್ ಕಾರಿಗೆ ಪೆಟ್ರೋಲ್ ಬಂಕ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆಸಿ, ಆತನ ಮೇಲೆ ಗುಂಡು ಹಾರಿಸಿದರು. ಬಳಿಕ ತಲವಾರಿನಿಂದ ಕಡಿದು ಕೊಲೆಗೈದರು ಎಂದು ಪೊಲೀಸರು ತಿಳಿಸಿದ್ದಾರೆ. ರಫೀಕ್ ಜೊತೆ ಇದ್ದ ಜಾಹಿದ್ ಎಂಬಾತನಿಗೂ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದರೋಡೆ, ಕೊಲೆ, ಹಲ್ಲೆ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿ ರಫೀಕ್ ವಿರುದ್ಧ ಕೇರಳ ಮತ್ತು ಕರ್ನಾಟಕದ ವಿವಿಧ ಠಾಣೆಗಳಲ್ಲಿ ಮೊಕದ್ದಮೆಗಳಿವೆ. ವಿರೋಧಿ ಗುಂಪು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಸಂಶಯಪಟ್ಟಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕೋಟೆಕಾರು ಬಳಿ ಶೂಟೌಟ್ , ಕಾಲಿಯಾ ರಫೀಕ್ ಹತ್ಯೆ"