ಸೋಮವಾರ ವಿಟ್ಲ ಕಸಬಾ ಗ್ರಾಮದ ಅನಿಲಕಟ್ಟೆಯಲ್ಲಿರುವ ಗೇರು ತೋಟವೊಂದಕ್ಕೆ ಬೆಂಕಿ ತಗಲಿ ಹಲವು ಗೇರು ಗಿಡಗಳು ನಾಶಗೊಂಡಿವೆ.
ವಿಟ್ಲ ಕಸಬಾ ಗ್ರಾಮದ ಡಾ. ಸುರೇಶ್ ಕೂಡೂರು ಎಂಬವರಿಗೆ ಸೇರಿದ ಗೇರುಬೀಜ ತೋಟಕ್ಕೆ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ. ತೋಟದಲ್ಲಿ ಬೆಂಕಿ ಬರುವುದನ್ನು ಗಮನಿಸಿದ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಬಹುತೇಕ ಗಿಡಗಳು ಬೆಂಕಿಗಾಹುತಿಯಾಗಿದೆ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಹೆಚ್ಚಿನ ಅನಾಹುತ ಸಂಭವಿಸದಂತೆ ಕಾರ್ಯಾಚರಣೆ ನಡೆಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅನಿಲಕಟ್ಟೆಯಲ್ಲಿ ಗೇರುತೋಟಕ್ಕೆ ಬೆಂಕಿ"