ಕ್ರಿಸ್ಮಸ್ ಹಬ್ಬ ಆಚರಣೆಗೆ ಎಲ್ಲೆಡೆ ವ್ಯಾಪಕ ಸಿದ್ಧತೆ. ಕ್ರೈಸ್ತ ಬಾಂಧವರು ಈಗಾಗಲೇ ಹಬ್ಬದ ಸಿದ್ಧತೆ ನಡೆಸುತ್ತಿದ್ದಾರೆ.
ಸರ್ವಶಕ್ತ ದೇವರು ನಮ್ಮೀ ಲೋಕಕ್ಕೆ ತಮ್ಮ ಏಕಮಾತ್ರ ಪುತ್ರರನ್ನು ಕಾಣಿಕೆಯಾಗಿ ನೀಡಿದ ಹಬ್ಬವೇ ಕ್ರಿಸ್ಮಸ್.
ದೇವ ಕುಮಾರ ಯೇಸುಕ್ರಿಸ್ತರು ಈ ಧರೆಯಲ್ಲಿ ಹುಟ್ಟಿದಾಗ ಅವರ ದರ್ಶನ ಪಡೆಯಲು ದೂರ ರಾಷ್ಟ್ರಗಳಿಂದ ಬಂದು ಅವರನ್ನು ಹುಡುಕಿ, ಅವರ ಸನ್ನಿಧಿಯಲ್ಲಿ ತಮ್ಮ ಕಾಣಿಕೆ ಅರ್ಪಿಸಿದರು. ಮೂವರು ಜ್ಞಾನಿಗಳು. ಈ ಕಾರಣಗಳಿಂದ ಕ್ರಿಸ್ಮಸ್ ಹಬ್ಬ ಕಾಣಿಕೆಗಳ ಹಬ್ಬ ಎಂದೇ ಕರೆಯಲಾಗುತ್ತದೆ. ಕಾಣಿಕೆಯೆಂದರೆ ಕೇವಲ ಪಡೆದುಕೊಳ್ಳುವುದಲ್ಲ. ಅದಕ್ಕೂ ಮಿಗಿಲಾಗಿ ನೀಡುವುದು. ದೇವರ ಸೃಷ್ಟಿಯಲ್ಲಿ ಯಾರು ಹಸಿದವರಾಗಿ ಉಡಲು ವಸ್ತ್ರವಿಲ್ಲದವರಾಗಿ, ನಿರ್ಗತಿಕರಾಗಿ ಇರಬಾರದು. ಉಳ್ಳವರು ತಮ್ಮ ಸಂಪನ್ಮೂಲಗಳನ್ನು ಇಲ್ಲದವರೊಂದಿಗೆ ಹಂಚಿ ಅವರಿಗೆ ಕಾಣಿಕೆಯಾಗಬೇಕು ಎಂದು ಕ್ರಿಸ್ಮಸ್ ಕರೆ ನೀಡುತ್ತದೆ.
ಲೊರೆಟ್ಟೋ ಇಗರ್ಜಿ ಕಳೆದ ವರ್ಷ ಅಮೃತೋತ್ಸವವನ್ನು ದೊಡ್ಡ ಸಂಭ್ರಮದಿಂದ ಆಚರಿಸಲಾಗಿತ್ತು. ಚರ್ಚಿನ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಡಿಸೋಜ ಅವರು ಇಗರ್ಜಿಯ ಹಾಗೂ ಆಸುಪಾಸಿನ ಎಲ್ಲ ಮತೀಯ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ರಿಚರ್ಡ್ ಮಿನೇಜಸ್ ಹಾಗೂ ಕಾರ್ಯದರ್ಶಿಯಾಗಿ ಸಿಪ್ರಿಯನ್ ಡಿಸೋಜ ಸೇವೆ ಸಲ್ಲಿಸುತ್ತಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಲೊರೆಟ್ಟೋದಲ್ಲಿ ವಿಶೇಷ ಸಂಭ್ರಮವಿದೆ.
Be the first to comment on "ಕ್ರಿಸ್ ಮಸ್ ಸಂಭ್ರಮ, ಇಗರ್ಜಿಗಳಲ್ಲಿ ದೀಪಾಲಂಕಾರ"