ಅಂತರ್ಯದಲ್ಲಿ ಉನ್ನತ ಚಿಂತನೆಗಳನ್ನು ಮೂಡಿಸಿದಾಗ ವ್ಯಕ್ತಿ ಸದೃಢನಾಗುತ್ತಾನೆ ಎಂದು ಮಂಗಳೂರು ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದಜೀ ಸ್ವಾಮೀಜಿ ಹೇಳಿದರು.
ಗುರುವಾರ ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಆದಿಧನ್ವಂತರಿ ಕ್ಷೇತ್ರದ ಶ್ರೀ ಧನ್ವಂತರಿ ದೇವರ ನಿಧಿಕಲಶದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡೀದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಗಿಡ ಮೂಲಿಕೆಗಳನ್ನು ನೆಟ್ಟು ಉತ್ತಮ ವನ ನಿರ್ಮಾಣದ ಕಾರ್ಯಕ್ಕೆ ಎಲ್ಲರ ಸಹಕಾರ ಸಿಗಲಿ ಎಂದು ಹೇಳಿದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಯೋಗ ಮತ್ತು ಆಯುರ್ವೇದ ಎಂಬ ಶ್ರೇಷ್ಠ ಸಾಂಸ್ಕೃತಿಕ ಕೊಡುಗೆಯನ್ನು ಭಾರತ ಜಗತ್ತಿಗೆ ನೀಡಿದೆ. ದೇಶದ ಪ್ರಧಾನಿಯವರಿಂದ ವಿದೇಶಗಳಲ್ಲಿ ಭಾರತ ಸಂಸ್ಕೃತಿ ಪಸರಿಸುತ್ತಿದೆ ಎಂದು ಹೇಳಿದರು.
ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ ಒ ರಾಜ್ಯದ ಸರ್ಕಾರದಿಂದ ಬೇಕಾದ ನೆರವನ್ನು ನೀಡಲಾಗುವುದು. ಕ್ಷೇತ್ರಕ್ಕೆ ಬರುವ ರಸ್ತೆಗೆ ಪ್ರತ್ಯೇಕ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕಾರ್ಯಕ್ರಮ (more…)