ಬಂಟ್ವಾಳ

BANTWAL: ಬಂಟ್ವಾಳದಲ್ಲಿ ಸಿಪಿಐ CPI ಪಾದಯಾತ್ರೆ

ಕೇಂದ್ರ ಸರಕಾರದ ಒಂದು ದಶಕದ ಆಡಳಿತವು ದೇಶವನ್ನು ಕ್ರಮೇಣ ಆತಂಕ, ನಿರಾಶೆ ಮತ್ತು ಹೆಚ್ಚುತ್ತಿರುವ ಸಂಕಷ್ಟದತ್ತ ಕೊಂಡೊಯ್ದಿದೆ. ಇಂದು ದೇಶವನ್ನು ಸಾಮ್ರಾಜ್ಯಶಾಹಿಗಳಿಗೆ ಮಾರುವ ದೇಶೀಯ ಬ್ರಿಟೀಷರಿಂದ ದೇಶವನ್ನು ರಕ್ಷಿಸುವ ಅಗತ್ಯತೆ ಇದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ್‍ಯದರ್ಶಿ ಸಾತಿ ಸಂದರೇಶ್ ಅಭಿಪ್ರಾಯಪಟ್ಟರು.

VNR GOLD

ಬಂಟ್ವಾಳದಲ್ಲಿ ಸಿಪಿಐ ರಾಷ್ಟ್ರವ್ಯಾಪಿ ರಾಜಕೀಯ  ಅಭಿಯಾನದ ಭಾಗವಾಗಿ ಜರುಗಿದ ಪಾದಯಾತ್ರೆ ಕಾಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

OPTIC WORLD

ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್, ಜಿಲ್ಲಾ ಸಹ ಕಾರ್‍ಯದರ್ಶಿ ವಿ.ಎಸ್.ಬೇರಿಂಜ ಮಾತನಾಡಿದರು. ಅಧ್ಯಕ್ಷತೆಯನ್ನು ಪಕ್ಷದ ಮಾಜಿ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್ ವಹಿಸಿದ್ದರು. ಪಕ್ಷದ ಜಿಲ್ಲಾ ಕಾರ್‍ಯಕಾರಿ ಸಮಿತಿ ಸದಸ್ಯ ಎಚ್.ವಿ ರಾವ್, ಪಕ್ಷದ ಮಂಗಳೂರು ತಾಲೂಕು ಕಾರ್‍ಯದರ್ಶೀ ಎಂ.ಕರುಣಾಕರ,  ಜಿಲ್ಲಾ ಮಂಡಳಿ ಸದಸ್ಯರಾದ ಭಾರತಿ ಪ್ರಶಾಂತ್, ಗೀತಾ ಬಜಾಲ್ ಉಪಸ್ಥಿತರಿದ್ದರು. ನೇತೃತ್ವವನ್ನು ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಎಐವೈಎಫ್ ಮುಖಂಡ ಪುಷ್ಪರಾಜ್ ಬೋಳೂರು, ಸುಧಾಕರ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ಎನ್ ಎಫ್ ಐ ಡಬ್ಲ್ಯೂ ನಾಯಕಿ ಶಮಿತ, ಮಮತ, ಮೋಹಿನಿ, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಚಂದ್ರಾವತಿ ಕೆ. ಜಯಂತ, ಸರೋಜಿನಿ ಕುರಿಯಾಳ, ಎಐವೈಎಫ್ ಮುಖಂಡ ಶ್ರೀನಿವಾಸ ಭಂಡಾರಿ, ಪಕ್ಷದ ವಿಟ್ಲದ ಮುಖಂಡ ಒ ಕೃಷ್ಣ,  ಮೋಹನ ಅರಳ ವಹಿಸಿದ್ದರು. ಬಂಟ್ವಾಳ ತಾಲೂಕ ಕಾರ್‍ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣ, ಮೂರು ದಿನಗಳೊಳಗೇ ಆರೋಪಿಗಳ ಬಂಧಿಸಿದ ಪೊಲೀಸರು

ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)

1 hour ago