ಹಿಂದು ಜಾಗರಣಾ ವೇದಿಕೆಯ ವಿಟ್ಲ ತಾಲೂಕು ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆಗಸ್ಟ್ 9ರಂದು ಸಂಜೆ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರ್ ರಾಮದೇವ್ ಸಭಾಭವನ, ವೀರಕಂಭ ಶಾರದಾ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ಹೊರಡುವುದು. ಬಳಿಕ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ಕಲ್ಲಡ್ಕ ಗೇರುಕಟ್ಟೆಯ ಶ್ರೀ ಉಮಾಶಿವ ದೇವಸ್ಥಾನದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ವಹಿಸುವರು. ಎಬಿವಿಪಿ ವಿಬಾಗ ಪ್ರಮುಖ್ ಕೇಶವ ಬಂಗೇರ ದಿಕ್ಸೂಚಿ ಭಾಷಣ ಮಾಡುವರು. ನಿವೃತ್ತ ಯೋಧ ಶಿವರಾಮ ಭಟ್ ಉಪಸ್ಥಿತರಿರುವರು ಎಂದು ಹಿಂಜಾವೇ ವಿಟ್ಲ ತಾಲೂಕು ಪ್ರಕಟಣೆ ತಿಳಿಸಿದೆ.
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)