ವಿಟ್ಲ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಪಪಂ, ಗ್ರಾಪಂ ವ್ಯಾಪ್ತಿಯಲ್ಲಿ 3 ಅಂಗನವಾಡಿ ಕಾರ್ಯಕರ್ತೆ ಮತ್ತು 11 ಅಂಗನವಾಡಿ ಸಹಾಯಕಿಯರ ಹುದ್ದೆ ಭರ್ತಿಗೆ ಆಫ್ ಲೈನ್ ಮೂಲಕ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯು ತಾತ್ಕಾಲಿಕ ಮತ್ತು ಗೌರವಧನ ಆಧರಿತವಾಗಿದ್ದು, ಆಯ್ಕೆಯಾದವರು ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಿವಾಜಿನಗರ, ನೆಟ್ಲಮುಡ್ನೂರಿನ ಕಲ್ಪಾಡಿಗದ್ದೆ, ಕೊಳ್ನಾಡು ಗ್ರಾಮದ ತಾಳಿತ್ತನೂಜಿಯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಬೇಕಾಗಿದ್ದಾರೆ. ಪುಣಚ ಗ್ರಾಮದ ಕೊಲ್ಲಪದವು, ಮಾಣಿಲ ಗ್ರಾಮದ ಸೊರಂಪಳ್ಳ, ಬಿಳಿಯೂರು ಗ್ರಾಮದ ಕರ್ವೇಲು, ಕೊಳ್ನಾಡು ಗ್ರಾಮದ ಸಾಲೆತ್ತೂರುಕಟ್ಟೆ, ಸುರಿಬೈಲು ಶಾಲೆ, ಪಾಣಾಜೆಕೋಡಿ, ಸಾಲೆತ್ತೂರು ಗ್ರಾಮದ ಮೆದು, ಮಂಚಿ ಗ್ರಾಮದ ಮಂಚಿಸೈಟ್, ಸೂರಿಕುಮೇರು, ಬೋಳಂತೂರು ಗ್ರಾಮದ ಶೇಡಿಗುಳಿ, ವಿಟ್ಲ ಕಸಬಾದ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ಸಾಮಾನ್ಯ ವರ್ಗದ ಮೀಸಲಾತಿ ನಿಗದಿಪಡಿಸಲಾಗಿದ್ದು, ಅಂಗನವಾಡಿ ಸಹಾಯಕಿಯರು ಬೇಕಾಗಿದ್ದಾರೆ.
ಹುದ್ದೆಗಳಿಗೆ ಅರ್ಜಿಗಳನ್ನು ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕುಲಾಲ ರಜತ ಭವನ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರದ ಬಳಿ ವಿಟ್ಲ ಅಂಚೆ 574243 ಇಲ್ಲಿಗೆ ಕಳುಹಿಸಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.