ಬಂಟ್ವಾಳ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ 26ರಂದು ಮಧ್ಯಾಹ್ನ 2.30ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀಕೃಷ್ಣ ರಾಯಭಾರ ಪ್ರಸಂಗ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ 86 ಕ್ಲಬ್ ಗಳಿರುವ ಲಯನ್ಸ್ ಜಿಲ್ಲೆಯ ಯಕ್ಷಗಾನ ಅಕಾಡಮಿ ಜಿಲ್ಲಾ ಅಧ್ಯಕ್ಷ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ, ಉಪರಾಜ್ಯಪಾಲ ಕೆ.ದೇವದಾಸ ಭಂಡಾರಿ, ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಅರವಿಂದ ಶೆಣೈ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ರೊನಾಲ್ಡ್ ಗೋಮ್ಸ್, ಇಂದಿರಾ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಭಾಗವಹಿಸಿದ್ದರು. ಈ ಸಂದರ್ಭ ಯಕ್ಷಗಾನ ಕಲಾವಿದ ಸುದರ್ಶನ ಶೆಟ್ಟಿ ಪೊಳಲಿ ಅವರನ್ನು ಸನ್ಮಾನಿಸಲಾಯಿತು. ಬೊಂಡಾಲ ಶಾಲೆ ಗ್ರಂಥಾಲಯಕ್ಕೆ ಪುಸ್ತಕ ಸಮರ್ಪಣೆಯೂ ನಡೆಯಿತು.
ಲಯನ್ಸ್ ನ ಜಗದೀಶ ಯಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಚೆಂಡೆ, ಮದ್ದಳೆಯಲ್ಲಿ ಗಣೇಶ್ ಭಟ್ ನೆಕ್ಕರೆಕೋಡಿ, ಅಕ್ಷಯ ರಾವ್ ವಿಟ್ಲ, ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಸಂಜೀವ ಶೆಟ್ಟಿ ಭಾಗವಹಿಸಿದರು.
Be the first to comment on "ಯಕ್ಷಗಾನ ತಾಳಮದ್ದಳೆ, ಕಲಾವಿದರಿಗೆ ಸನ್ಮಾನ"