ಸುದ್ದಿಗಳು

ಪುಂಜಾಲಕಟ್ಟೆ ಕಬಡ್ಡಿ ಫಲಿತಾಂಶ ಪ್ರಕಟ

ಬಂಟ್ವಾಳ: ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 33ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಿದ ಪ್ರೊ ಕಬಡ್ಡಿ ಮಾದರಿಯ ಕೋಟಿ-ಚೆನ್ನಯ ಚಿನ್ನದ ಪದಕ ಪುರುಷರ ಕಬಡ್ಡಿ ಪಂದ್ಯಾಟದ…


ತೋಟಗಾರಿಕಾ ಇಲಾಖೆಗೆ ನಾಗರಾಜ ವಿಸಿಟ್!

ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ತೋಟಗಾರಿಕಾ ಇಲಾಖಾ ಕಚೇರಿಯೊಳಗೆ ಮಂಗಳವಾರ ವಿಶೇಷ ಅತಿಥಿ ಆಗಮನ. ನಾಗರಹಾವೊಂದು ಕಚೇರಿಯೊಳಗೆ ಸುತ್ತಾಡಿ, ಕಡತಗಳಲ್ಲಿ ಹೊರಳಾಡಿ, ಸಹಾಯಕ ನಿರ್ದೇಶಕ ದಿನೇಶ್ ಆಚಾರ್ಯ ಕುಳಿತುಕೊಳ್ಳುವ ಕುರ್ಚಿ ಅಡಿಯಲ್ಲೇ ಓಡಾಡಿದೆ. ನಾಗರಹಾವನ್ನು ಕಂಡು ಬೆಚ್ಚಿ ಬಿದ್ದ ಸಿಬ್ಬಂದಿಗಳು…


ಲಾರಿ ಕಾರಿಗೆ ಡಿಕ್ಕಿ: ಮೂವರು ಗಂಭೀರ

ಬಂಟ್ವಾಳ: ಈಚರ್ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಪೆರ್ನೆ ಸಮೀಪದ ದೋರ್ಮೆ ಮೈರಕಟ್ಟೆ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಲಾರಿ ಮತ್ತು…


ಸಿಡಿಲು, ಗುಡುಗು ಸಹಿತ ಭಾರಿ ಮಳೆ

ಬಿ.ಸಿ.ರೋಡ್: ಬಿ.ಸಿ.ರೋಡ್ ಪರಿಸರದಲ್ಲಿ ಸಂಜೆ 4.30ರ ಸುಮಾರಿಗೆ ಗುಡುಗು, ಮಿಂಚಿನ ಸಹಿತ ಗಾಳಿ ಮಳೆ ಸುರಿಯಿತು. ಕಚೇರಿ ಕೆಲಸಕ್ಕೆಂದು ಬಂದವರು ಪರದಾಡಬೇಕಾಯಿತು. ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದ ಜನರು ತೊಂದರೆಗೊಳಗಾದರು. ಶಾಲೆ, ಕಾಲೇಜುಗಳಿಂದ ಮನೆಗೆ ತೆರಳುವವರು ಸಂಕಷ್ಟಕೀಡಾಗಬೇಕಾಯಿತು….


ಪೊಳಲಿ ಕ್ರಾಸ್ ನಲ್ಲಿ ಬಸ್ ಬೇ ನಿರ್ಮಾಣ

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಲ್ಲಿ ಬಸ್ ಬೇ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸೂಚನೆಯಂತೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳ ತಂಡ ಕಾರ್ಯಾಚರಣೆ…


ಕಳ್ಳಿಗೆ ಗ್ರಾಮದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಸರಕಾರಿ ಜಮೀನಿನ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ನಡೆಯಿತು. ಗ್ರಾಮದ ಸರಕಾರಿ ಜಮೀನೊಂದನ್ನು ಗುರುತಿಸಲು ಮೋಜಣಿ ಶಾಖೆಗೆ ಸೂಚಿಸಲಾಗಿತ್ತು. ಮೋಜಣಿದಾರರು ಈ ಜಮೀನು ಸರಕಾರಿ ಜಮೀನು ಆಗಿದ್ದು, ನೀರಿನ ಟ್ಯಾಂಕಿಯನ್ನು ಇಟ್ಟು…


ದೇಶದ ಮಣ್ಣನ್ನು ತಾಯಿ ಎಂದು ಗೌರವಿಸುವ ಸಂಸ್ಕೃತಿ ಕಬಡ್ಡಿಯಲ್ಲಿ

ಬಂಟ್ವಾಳ: ದೇಶದ ಮಣ್ಣನ್ನು ತಾಯಿ ಎಂದು ಗೌರವಿಸುವ ಸಂಸ್ಕೃತಿ ಕಬಡ್ಡಿಯಲ್ಲಿದ್ದು ದೇಶಪ್ರೇಮಕ್ಕೆ ಪೂರಕವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 33ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್…


ಕನ್ಯಾನ ಸಹಜ ಸ್ಥಿತಿಯತ್ತ

ವಿಟ್ಲ: ಗಡಿ ಪ್ರದೇಶದ ಕನ್ಯಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿ ಉದ್ವಿಗ್ನತೆಯಾದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ ಮತ್ತೆ ಶಾಂತಿ ನೆಲೆಸುವಂತಾಗಿದೆ. ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದ ಬಳಿಕ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿ, ಕಲ್ಲು…


ಹೆಬ್ಬಾವಿನೊಡನೆ ಸೆಣಸಿದ ಬಾಲಕ ವೈಶಾಖ್ ಗೆ ಸನ್ಮಾನ

ಬಂಟ್ವಾಳ: ಇತ್ತೀಚೆಗೆ ಹೆಬ್ಬಾವಿನೊಂದಿಗೆ ಸೆಣಸಾಡಿ ಜೀವ ಉಳಿಸಿಕೊಂಡ ವೈಶಾಕ್ ಗೆ ಕಲಿಯುತ್ತಿರುವ ಸಜಿಪ ಆದರ್ಶ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ‌ ಪ್ರಯುಕ್ತ ಸನ್ಮಾನಿಸಲಾಯಿತು.


ಶ್ರೇಷ್ಠ ಸಾಧನೆಗೆ ಅಂಬೇಡ್ಕರ್ ಮಾದರಿ

ಬಂಟ್ವಾಳ: ಸಹಸ್ರಾರು ಸಂಖ್ಯೆಯ ಜಾತಿ ವ್ಯವಸ್ಥೆಗೆ ಒಗ್ಗಿಕೊಂಡಿರುವ ಭಾರತದಲ್ಲಿ ಶಿಕ್ಷಣದ ಜೊತೆಗೆ ಇಚ್ಛಾಶಕ್ತಿ ಮತ್ತು ಸಾಧನಾ ಮನೋಭಾವ ಹೊಂದಿರುವ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಕೂಡಾ ದೇಶದಲ್ಲಿ ಸಂವಿಧಾನಶಿಲ್ಪಿಯಾಗಿ ರೂಪುಗೊಂಡು ಜಗತ್ತಿನಲ್ಲಿ  ಎತ್ತರಕ್ಕೆ ಬೆಳೆದು ನಿಲ್ಲುವ ಮೂಲಕ…