ಬಂಟ್ವಾಳ

ಹೆಬ್ಬಾವಿನೊಡನೆ ಸೆಣಸಿದ ಬಾಲಕ ವೈಶಾಖ್ ಗೆ ಸನ್ಮಾನ

ಬಂಟ್ವಾಳ: ಇತ್ತೀಚೆಗೆ ಹೆಬ್ಬಾವಿನೊಂದಿಗೆ ಸೆಣಸಾಡಿ ಜೀವ ಉಳಿಸಿಕೊಂಡ ವೈಶಾಕ್ ಗೆ ಕಲಿಯುತ್ತಿರುವ ಸಜಿಪ ಆದರ್ಶ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ‌ ಪ್ರಯುಕ್ತ ಸನ್ಮಾನಿಸಲಾಯಿತು.


ಪ್ರಾಮಾಣಿಕತೆ ಮೆರೆದ ನೀರಪಾದೆ ಹಮೀದ್

ಬಂಟ್ವಾಳ: ಬಾಳ್ತಿಲ ಗ್ರಾಮ, ನೀರಪಾದೆಯ ಹಮೀದ್ ಈಗ ಬಂಟ್ವಾಳದಾದ್ಯಂತ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ. ನವೆಂಬರ್ 13ರಂದು ಬೆಳಗ್ಗೆ ಹಮೀದ್ ನಡೆದುಕೊಂಡು ಹೋಗುತ್ತಿದ್ದಾಗ, ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಿದ ವಸ್ತುವೊಂದು ದೊರಕಿತು. ಅದನ್ನು ಬಿಡಿಸಿ ನೋಡಿದಾಗ,…


ಕೈಕುಂಜೆ ರಸ್ತೆ ಅಗಲಗೊಳಿಸಲು ಅಳತೆ

 ಬಿ ಸಿ ರೋಡು : ಬಿ ಸಿ ರೋಡಿನಲ್ಲಿ  ವಾಹನ ದಟ್ಟಣೆಯನ್ನು ಸರಿಪಡಿಸಲು ಮತ್ತು ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೈಕುಂಜೆ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಚಿಂತನೆ ನಡೆಸಿದ್ದು  ಜಿಲ್ಲಾಧಿಕಾರಿಯವರು ಖುದ್ದು ಸ್ಥಳ…


ಎಪಿಎಂಸಿ ಫೈಟ್: 29 ನಾಮಪತ್ರ ಸಲ್ಲಿಕೆ

ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12ಸ್ಥಾನಗಳಿಗೆ  29  ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ ನಾಮತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಮಾಣಿ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಕೆಯಾಗಿದ್ದರೆ, ಪಾಣೆಮಂಗಳೂರು, ತುಂಬೆ, ಚನ್ನ್ಯೆತ್ತೋಡಿ ಕ್ಷೇತ್ರಕ್ಕೆ ತಲಾ 3 ರಂತೆ ನಾಮಪತ್ರ…


ಶಂಭೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಬಂಟ್ವಾಳ: ರಾಜ್ಯ ಪ್ರಶಸ್ತಿ ಪುರಸ್ಖೃತ  ಶಂಭೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್‍ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಅಂಗನವಾಡಿ ಪುಟಾಣಿ ಧನ್ವಿತ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಂಭೂರು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ ಭವ್ಯ ಭಾರತವನ್ನು ಸುದೃಡವಾಗಿ…


18ಕ್ಕೆ ಬಂಟ್ವಾಳ ತಾಪಂ ಜಮಾಬಂದಿ

ಬಂಟ್ವಾಳ: ತಾಲೂಕು ಪಂಚಾಯಿತಿಯ ಜಮಾಬಂದಿ ಕಾರ್ಯಕ್ರಮ ನವೆಂಬರ್ 18ರಂದು ನಡೆಯಲಿದೆ. ಬೆಳಗ್ಗೆ 10ಕ್ಕೆ ತಾಪಂನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಜಮಾಬಂದಿ ನಿರ್ವಹಣಾಧಿಕಾರಿಯಾಗಿ ದ.ಕ.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಡೆಸಿಕೊಡಲಿದ್ದಾರೆ. ಸಭೆಯಲ್ಲಿ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿ ತಮ್ಮ ಸೂಕ್ತ…


ಮನುಷ್ಯಪ್ರೀತಿಯ ಸಂಘಟನೆ ಯುವ ಕಾಂಗ್ರೆಸ್: ರಿಜ್ವಾನ್ ಹರ್ಷದ್

ಬಂಟ್ವಾಳ: ಜಾತಿ, ಧರ್ಮ, ಪಂಥಗಳ ಭೇದ ಮರೆತು ಮನುಷ್ಯರು ಮನುಷ್ಯರನ್ನು ಪರಸ್ಪರ ಪ್ರೀತಿಸುವ ಸಂಘಟನೆಯಿದ್ದರೆ ಅದು ಯುವ  ಕಾಂಗ್ರೆಸ್ ಮಾತ್ರ ಎಂದು ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರಿಜ್ವಾನ್ ಹರ್ಷದ್ ಅಭಿಪ್ರಾಯಪಟ್ಟಿದ್ದಾರೆ. ಯು.ಟಿ. ಫೌಂಡೇಶನ್ ಮಂಗಳೂರು, ವಲಯ ಕಾಂಗ್ರೆಸ್…


ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಇರಾ: ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಇಂದು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಇರಾ ತಾಳಿತ್ತಬೆಟ್ಟು ಶಾಲಾಭಿವೃಧ್ದಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮುರಳೀಧರ ಭಂಡಾರಿ ,…


ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಶಾಖಾ ಕಾರ್ಯದರ್ಶಿಯಾಗಿ ಇರ್ಶಾದ್ ಗುಡ್ಡೆಅಂಗಡಿ ಆಯ್ಕೆ

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖಾ ನೂತನ ಕಾರ್ಯದರ್ಶಿಯಾಗಿ ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಇಸ್ಹಾಕ್ ಫ್ಯಾಶನ್‌ವೇರ್ ಮತ್ತು ಅಬ್ದುಲ್ ಮುತ್ತಲಿಬ್ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಫ್ಯಾಶನ್ ಗೋಲ್ಡ್ ಅವರ ಅಧ್ಯಕ್ಷತೆಯಲ್ಲಿ…


ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಬುಧವಾರದವರೆಗೆ ಮುಂದುವರಿಯಲಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲ ವಿದ್ಯಮಾನಗಳಿಗೆ ಸಂಬಂಧಿಸಿ ಅಹಿತಕರ ಘಟನೆ ನಡೆಯದಂತೆ ಮುನ್ಸೂಚನಾ ಕ್ರಮವಾಗಿ ಸೆ.144ರನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಈ ಆದೇಶ ಹೊರಡಿಸಿದ್ದಾರೆ ಎಂದು ಬಂಟ್ವಾಳ…