Articles by Harish Mambady

ಲೋಕಕಲ್ಯಾಣಾರ್ಥವಾಗಿ ಅಖಂಡ ಭಜನಾ ಸಪ್ತಾಹ

ಬಂಟ್ವಾಳ: ಮಂಚಿ ಇರಾ ಗ್ರಾಮದ ಕುಕ್ಕಾಜೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಂಘಟನೆ, ಸಂಸ್ಕಾರ, ಲೋಕಕಲ್ಯಾಣಾರ್ಥವಾಗಿ ಮಹಾಗಣಪತಿ ಹೋಮ ನಂತರ ಸೂರ್ಯೋದಯಕ್ಕೆ ಸರಿಯಾಗಿ ಅಖಂಡ ಭಜನಾ ಸಪ್ತಾಹ ಆರಂಭಗೊಂಡಿತು. ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಪೂಜಾರಿ ನರ್ಕಳ ದೀಪ ಪ್ರಜ್ವಲನಗೈದರು….


ನಿಮ್ಮಲ್ಲಿ ನೂರು ರೂಪಾಯಿ ನೋಟಿದೆಯಾ?

 ಬಂಟ್ವಾಳ: ಬೆಳಗ್ಗೆ 11 ಗಂಟೆ ಆಗುತ್ತಿದ್ದಂತೆ ಯಾವ ಬ್ಯಾಂಕುಗಳಲ್ಲೂ ಚೇಂಜ್ ಕೊಡಲು ನೋಟಿಲ್ಲ. ನೂರು ರೂಪಾಯಿ ನೋಟಿದೆಯೇ ಎಂದು ಜನರಿಂದ ಎಲ್ಲೆಡೆ ಹುಡುಕಾಟ. ಇದು ಬಿ.ಸಿ.ರೋಡ್ ಸಹಿತ ತಾಲೂಕಿನ ವಿವಿಧ ಬ್ಯಾಂಕುಗಳಲ್ಲಿ ಶನಿವಾರ ಬೆಳಗ್ಗೆ ಕಂಡು ಬಂದ…


ಫೊಟೋಗ್ರಾಫರ್ಸ್ ಅಸೋಸಿಯೇಶನ್ ನಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬಂಟ್ವಾಳ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯ ವತಿಯಿಂದ ಕೊಯಿಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನ.14ರಂದು ನಡೆಯಲಿದೆ. ಬೆಳಗ್ಗೆ 10ಕ್ಕೆ ಗ್ರಾಪಂ ಅಧ್ಯಕ್ಷ ಜಯಂತ ಸಫಲ್ಯ ಉದ್ಘಾಟಿಸುವರು. ಎಸ್ ಕೆಪಿಎ ಬಂಟ್ವಾಳ…


ಲೊರೆಟ್ಟೋ ಬಳಿ ಅಪರಿಚಿತ ಶವ ಪತ್ತೆ

ಬಂಟ್ವಾಳ: ಅಮ್ಟಾಡಿ ಗ್ರಾಪಂ ವ್ಯಾಪ್ತಿಯ ಲೊರೆಟ್ಟೋ ಬ್ಯಾಂಕ್ ಎದುರು ಶನಿವಾರ ಬೆಳಗ್ಗೆ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈ ಕುರಿತು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.


ಅಕ್ಷರ ಪತ್ರಿಕೆ ಸಂಪಾದಕ ಮಂಡಳಿ ರಚನೆ

ಮಂಗಳೂರು: ಸಾಮಾಜಿಕ ತಾಣದಲ್ಲಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಅಕ್ಷರ ಇ-ಮ್ಯಾಗಝಿನ್ ನೂತನ ಸಂಪಾದಕ ಮಂಡಳಿ ರಚನೆ ಹಾಗೂ ಸಮಾಲೋಚನಾ ಸಭೆ ಪತ್ರಿಕೆಯ ಕಚೇರಿಯಲ್ಲಿ ನಡೆಯಿತು. ಪತ್ರಿಕೆಯ ಸಂಪಾದಕ ಬಿ.ಎಸ್. ಮುಹಮ್ಮದ್‌ ಇಸ್ಮಾಈಲ್‌ ಅಧ್ಯಕ್ಷತೆ ವಹಿಸಿ ವಿಷಯ ಮಂಡಿಸಿದರು. ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ಸಭೆ…


ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಶಶಾಂಕ್ ಭಟ್ ಕಾರ್ಯಕ್ರಮ

ಬಿ.ಸಿ.ರೋಡಿನ ಶಶಾಂಕ್ ಭಟ್ ಅವರ ಕೀಬೋರ್ಡ್ ವಾದನ ಇಂದು ಅಪರಾಹ್ನ 2.30ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿರುವ ಧ್ಯಾನಮಂದಿರದಲ್ಲಿ ಪ್ರಸ್ತುತಗೊಳ್ಲಲಿದೆ. ಭಾರತೀಯ ವಿದ್ಯಾಭವನ, ಮಣಿಕೃಷ್ಣಸ್ವಾಮಿ ಅಕಾಡಮಿ ಆಯೊಜಿಸುತ್ತಿರುವ ರಾಷ್ಟ್ರೀಯ ಸಂಗೀತೋತ್ಸವ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಶಾಂಕ್ ಪ್ರದರ್ಶನ…


ಆರೋಗ್ಯ ಕೇಂದ್ರ ಕಟ್ಟಡಗಳಿಗೆ 21 ಕೋಟಿ ರೂ ಅನುದಾನ: ರಮಾನಾಥ ರೈ

ಬಂಟ್ವಾಳ: ನಬಾರ್ಡ್ ಯೋಜನೆಯಡಿ 3 ಸಮುದಾಯ ಆರೋಗ್ಯ ಕೇಂದ್ರ, 4 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 5 ಆರೋಗ್ಯ ಉಪ ಕೇಂದ್ರಗಳ ಕಟ್ಟಡಗಳ ಪುನರ್ ನಿರ್ಮಾಣಕ್ಕೆ 21 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ…


ಮುಚ್ಚಿಟ್ಟ ಕೃತಿ ಹೊರತರುವುದು ಭೂಮಿಯಿಂದ ರತ್ನ ತಂದಂತೆ

ವಿಟ್ಲ: ಯಾರಿಗೂ ತಿಳಿಯದೆ ಮುಚ್ಚಿಟ್ಟ ಕೃತಿಗಳನ್ನು ಹೊರ ತರುವುದು ಭೂಮಿಯಲ್ಲಿನ ರತ್ನವನ್ನು ಹೊರತೆಗೆದಂತೆ ಎಂದು ಸಂಗೀತ ನಿರ್ದೇಶಕ ವಿ ಮನೋಹರ್ ಹೇಳಿದರು. ಶುಕ್ರವಾರ ವಿಟ್ಲ ಜಯದುರ್ಗಾ ನಿವಾಸದಲ್ಲಿ ಮಹಾನ್ ವ್ಯಾಕರಣ ಪಂಡಿತ ವಿದ್ವಾನ್ ಡಿ.ವಿ.ಹೊಳ್ಳ ಅವರ ಸಂಜ್ಞಾರ್ಥ…


ಕ್ರೀಡಾ ಸಾಧಕರಿಂದ ಶಾಲೆಗೆ ಹೆಸರು ಬರಲು ಸಾಧ್ಯ

ವಿಟ್ಲ: ಕ್ರೀಡಾ ಸಾಧಕನಿಂದ ಶಾಲೆಗೆ ಹೆಸರು ತರುವ ಕಾರ್ಯ ಸಾಧ್ಯ ಎಂದು ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಸರಸ್ವತಿ ಬಿ.ಹೇಳಿದರು. ಶುಕ್ರವಾರ ಅಳಿಕೆ ಶ್ರೀ ಸತ್ಯಸಾಯಿ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರ, ದ ಕ ಜಿಲ್ಲೆ ಪದವಿ ಪೂರ್ವ…


ಪರನೀರು ಎಂಬಲ್ಲಿ ಮರಳು ಅಡ್ಡೆಗೆ ದಾಳಿ

ಬಂಟ್ವಾಳ: ತುಂಬೆ ಗ್ರಾಮದ ಪರನೀರು ಎಂಬಲ್ಲಿ ದಾಸ್ತಾನಿರಿಸಿದ್ದ ಮರಳು ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಸುಮಾರು 40 ಲೋಡಿನಷ್ಟು ಅಕ್ರಮ ಮರಳನ್ನು ಮುಟ್ಟುಗೋಲು ಹಾಕಿದೆ. ಜಿಲ್ಲಾಧಿಕಾರಿ ಡಾ. ಜಗದೀಶ್ ನಿರ್ದೇಶನದ ಮೇರೆಗೆ ತಹಶೀಲ್ದಾರ್…