ಬಿ.ಸಿ.ರೋಡ್ ಫ್ಲೈಓವರ್ ನಿಂದ ಕೆಳಗೆ ಬಿದ್ದ ಬೈಕ್ ಸವಾರ -ದಶಕದ ಹಿಂದೆ ಇದೇ ರೀತಿ ಅಪಘಾತವಾಗಿತ್ತು – Details

ಬಿ.ಸಿ.ರೋಡಿನ ಜನರನ್ನು ಕೇಳದೆಯೇ ಆದ ಕಾಮಗಾರಿಯಲ್ಲಿ ಪ್ರಮುಖವಾದದ್ದು ಫ್ಲೈಓವರ್ ಎಂಬುದು ಜನಜನಿತ.ಇಲ್ಲಿ ಎರಡನೇ ಬಾರಿ ದೊಡ್ಡ ದುರಂತ ನಡೆದಿದೆ.  ಬಿ.ಸಿ.ರೋಡ್ ನ ಫ್ಲೈಓವರ್ ನಿಂದ ಬೈಕ್ ನಲ್ಲಿ ಸಾಗುತ್ತಿದ್ದ ವ್ಯಕ್ತಿಯೋರ್ವ ಕೆಳಗೆ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ.

ಬಿ.ಸಿ.ರೋಡಿನ ಜನರನ್ನು ಕೇಳದೆಯೇ ಆದ ಕಾಮಗಾರಿಯಲ್ಲಿ ಪ್ರಮುಖವಾದದ್ದು ಫ್ಲೈಓವರ್ ಎಂಬುದು ಜನಜನಿತ.ಇಲ್ಲಿ ಎರಡನೇ ಬಾರಿ ದೊಡ್ಡ ದುರಂತ ನಡೆದಿದೆ.  ಬಿ.ಸಿ.ರೋಡ್ ನ ಫ್ಲೈಓವರ್ ನಿಂದ ಬೈಕ್ ನಲ್ಲಿ ಸಾಗುತ್ತಿದ್ದ ವ್ಯಕ್ತಿಯೋರ್ವ ಕೆಳಗೆ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ.

ಯಾವ ಕಾರಣದಿಂದ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಜಾಹೀರಾತು

ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ, ಅದೃಷ್ಟವಶಾತ್ ಆ ಸಂದರ್ಭ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಸವಾರ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಯಾವುದೇ ಗಾಯವಾಗಿಲ್ಲ  ಗಾಯಾಳುವನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸವಾರರು ಅತ್ತಾವರದ ನಿವಾಸಿಗಳೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

2016ರಲ್ಲಿ ಅಪಘಾತ ನಡೆದಿತ್ತು:

2016ರ ಡಿಸೆಂಬರ್ ನಲ್ಲಿ ಇದೇ ಫ್ಲೈಓವರ್ ನಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಫ್ಲೈಓವರ್ ನಿಂದಲೇ ಉರುಳಿ ಬಿದ್ದು ಸಾವನ್ನಪ್ಪಿದ್ದರು. ಪಾಣೆಮಂಗಳೂರು ಸಮೀಪ ಬೋಳಂಗಡಿ ನಿವಾಸಿ ವರದೇಶ್ ನಿಯಂತ್ರಣ ತಪ್ಪಿ ಕೆಳಕ್ಕುರುಳಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಜನರು ಒಟ್ಟಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಆದರೆ ಬೆಳಗಿನ ಜಾವ ವರದೇಶ್ ಅಸು ನೀಗಿದ್ದರು  ವರದೇಶ್ ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದರು.

ಈ ಫ್ಲೈಓವರ್ ಗೆ ವಕ್ರದಾರಿ

ಈ ಫ್ಲೈಓವರ್ ಕಟ್ಟುವಾಗ ಆರಂಭದಲ್ಲೇ ವಿಘ್ನ ಬಂದೊದಗಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಕೆಲ ರಚನೆಗಳು ಕುಸಿದಿತ್ತು. ಹಾಗೂ ಹೀಗೂ ಫ್ಲೈಓವರ್ ಕಟ್ಟಿಯಾಯಿತು. ಜೋರಾಗಿ ಮಳೆ ಬಂದರೆ ಫ್ಲೈಓವರ್ ನಲ್ಲಿದ್ದ ನೀರು ಕೆಳಗೆ ಪ್ರೋಕ್ಷಣೆ ಆಗುತ್ತದೆ. ಹೆಬ್ಬಾವಿನಂತೆ ಬಳಸಿಕೊಂಡು ಕಟ್ಟಲಾದ ಫ್ಲೈಓವರ್ ನೇರವೇ ಇಲ್ಲ.

ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿಯಿಂದ ಮಂಗಳೂರಿಗೆ ಸಾಗುವಾಗ ಫ್ಲೈಓವರ್ ಹತ್ತುವ ಜಾಗ ಮೊದಲ ಅಪಘಾತ ವಲಯ. ಇನ್ನೊಂದು ಅದು ಇಳಿಯುವ ಜಾಗ.  ನಡೆದಾಡುವ ಜನಸಾಮಾನ್ಯರು, ಸಾರ್ವಜನಿಕರು ಇದನ್ನು ಹೇಳುತ್ತಲೇ ಇದ್ದರೂ ಫ್ಲೈಓವರ್ ನಿರ್ಮಾಣದ ಬಳಿಕ ಅದರ ಮೇಲೆ ಹಲವು ಪ್ರಯೋಗಗಳೂ ನಡೆದವು. ಒಂದು ಹಂತದಲ್ಲ ಟ್ರಾಫಿಕ್ ಸುಗಮವಾಗಲು ಇಲ್ಲಿ ದ್ವಿಮುಖ ಸಂಚಾರ ಏರ್ಪಡಿಸಿದರೆ ಹೇಗೆ ಎಂಬ ಆಲೋಚನೆಯೂ ಅಧಿಕಾರಿಗಳಿಗೆ ಮೂಡಿತ್ತು. ಸುದೈವವಶಾತ್ ಅದು ಜಾರಿಯಾಗಲಿಲ್ಲ. ಫ್ಲೈಓವರ್ ನಲ್ಲಿ ಸಾಗುವ ವಾಹನಗಳ ವೇಗಕ್ಕೆ ಹೇಗೂ ಮಿತಿ ಇಲ್ಲ. ಫ್ಲೈಓವರೂ ಸರಿ ಇಲ್ಲ. ಇಂಥ ವಕ್ರ ಫ್ಲೈ ಓವರ್ ನಲ್ಲೇ ರಾತ್ರಿ ಓಡಾಡುವ ದ್ವಿಚಕ್ರವಾಹನ ಸವಾರರ ಹಿಂದೆ ಘನ ವಾಹನವೇನಾದರೂ ಬಂದರೆ ಬದಿಗೆ ಸರಿಯಲೂ ಕಾಣಿಸುವುದಿಲ್ಲ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಿ.ಸಿ.ರೋಡ್ ಫ್ಲೈಓವರ್ ನಿಂದ ಕೆಳಗೆ ಬಿದ್ದ ಬೈಕ್ ಸವಾರ -ದಶಕದ ಹಿಂದೆ ಇದೇ ರೀತಿ ಅಪಘಾತವಾಗಿತ್ತು – Details"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*