ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಅಭಿವೃದ್ಧಿಪಡಿಸಿದ ಅಂಗಾಂಶ ಕೃಷಿ ಕುಬ್ಜ ಅಡಿಕೆ ಗಿಡಗಳ ಮೊದಲ ಕ್ಷೇತ್ರ ಪ್ರಯೋಗ ಆರಂಭಿಸಿದೆ.
ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ ಮತ್ತು ಎತ್ತರದ ಮರದ ಕೊಯ್ಲು ಸಮಸ್ಯೆಗೆ ಪರಿಹಾರವಾಗಿ ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಮಹತ್ವದ ಪ್ರಯೋಗ ಇದು.
ಸಿಪಿಸಿಆರ್ ಐ ನಿರ್ದೇಶಕ ಏನಂತಾರೆ?
ಸಂಸ್ಥೆ ಅಭಿವೃದ್ಧಿಪಡಿಸಿರುವ ಅಂಗಾಂಶ ಕೃಷಿ (Tissue-Cultured) ಕುಬ್ಜ ಅಡಿಕೆ ತಳಿಯ ಮೊದಲ ಕ್ಷೇತ್ರ ಪ್ರಯೋಗ ಅ.5 ರಂದು ವಿಟ್ಲದ ಸಿಪಿಸಿರ್ ಐ CPCRI ಪ್ರಾದೇಶಿಕ ಕೇಂದ್ರದಲ್ಲಿ ನಡೆದಿದೆ ಎಂದು ಸಿಪಿಸಿಆರ್ ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಹೇಳಿದರು.
ಒಂದು ವರ್ಷ ಪ್ರಾಯದ 100 ಗಿಡಗಳು ನಾಟಿಗೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ 20 ಗಿಡಗಳನ್ನು ನೆಡಲಾಗಿದೆ. ಉಳಿದ ಗಿಡಗಳನ್ನು ವರ್ಷಾಂತ್ಯದೊಳಗೆ ಹಂತ ಹಂತವಾಗಿ ನೆಡಲಾಗುತ್ತದೆ. ಈ ಪ್ರಯೋಗದ ಫಲಿತಾಂಶ ತಿಳಿಯಲು ಮೂರು ವರ್ಷ ಬೇಕು ಎಂದರು.
ಕಾರ್ಮಿಕರ ಕೊರತೆಗೆ ಪರಿಹಾರ
ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಕಾರ್ಮಿಕರ ಕೊರತೆ ಮತ್ತು ಎತ್ತರದ ಮರದ ಕೊಯ್ಲು ಸಮಸ್ಯೆಗೆ ಪರಿಹಾರವಾಗಿ ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಈ ಮಹತ್ವದ ಪ್ರಯೋಗ ಮಾಡಿದೆ
ಒಂದು ವರ್ಷ ಪ್ರಾಯದ 100 ಗಿಡಗಳು ನಾಟಿಗೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ 20 ಗಿಡಗಳನ್ನು ನೆಡಲಾಗಿದೆ. ಉಳಿದ ಗಿಡಗಳನ್ನು ವರ್ಷಾಂತ್ಯದೊಳಗೆ ಹಂತ ಹಂತವಾಗಿ ನೆಡಲಾಗುವುದು. ಈ ಪ್ರಯೋಗದ ಫಲಿತಾಂಶ ತಿಳಿಯಲು ಮೂರು ವರ್ಷ ಬೇಕು.
ಎರಡು ವರ್ಷಕ್ಕೆ ಫಸಲು
ಹೊಸ ಕುಬ್ಜ ತಳಿ ನೆಟ್ಟ ಎರಡು ವರ್ಷಕ್ಕೆ ಫಸಲು ನೀಡಲಿದೆ. ಪ್ರತಿ ಗಿಡದಿಂದ 2 ರಿಂದ 2.5 ಕೆ.ಜಿ. ಚಾಲಿ ಅಡಿಕೆ ನಿರೀಕ್ಷಿಸಲಾಗಿದೆ. ಎತ್ತರದ ತಳಿ 3.5 ಕೆ.ಜಿ. ವರೆಗೆ ನೀಡುತ್ತದಾದರೂ, ಕುಬ್ಜ ತಳಿಯನ್ನು ಕಡಿಮೆ ಅಂತರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ನೆಡಬಹುದಾಗಿದೆ.
2007 ರಲ್ಲಿ CPCRI ಬಿಡುಗಡೆ ಮಾಡಿದ್ದ VTLAH-1 ಮತ್ತು VTLAH-2 ಹೈಬ್ರಿಡ್ ಕುಬ್ಜ ತಳಿಗಳಲ್ಲಿ ಇಳುವರಿ ಏಕರೂಪವಾಗಿರಲಿಲ್ಲ. ಆದರೆ ಅಂಗಾಂಶ ಕೃಷಿ ತಳಿಯಲ್ಲಿ ಏಕರೂಪದ ಇಳುವರಿ ಬರಲಿದೆ
ಮರ ಏರುವವರಿಲ್ಲದೇ ಪರದಾಡುವ ರೈತರಿಗೆ ಇದು ವರದಾನ. ಕುಬ್ಜ ಗಿಡವಾದ ಕಾರಣ ಕೊಯ್ಲು, ಔಷಧ ಸಿಂಪಡಣೆ, ಹಳದಿ ರೋಗ ನಿಯಂತ್ರಣ ಎಲ್ಲವೂ ಸುಲಭವಾಗಲಿದೆ ಎಂದು ಸಿಪಿಸಿಆರ್ ಹೇಳಿದೆ.
ಮೊದಲ ನಾಟಿ ಮಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್ . ಸತೀಶ್ಚಂದ್ರ
(ಕಾಸರಗೋಡಿನ ಕೇಂದ್ರ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಅಭಿವೃದ್ಧಿಪಡಿಸಿದ ಅಂಗಾಂಶ ಕೃಷಿ ಕುಬ್ಜ ಅಡಿಕೆ ಗಿಡಗಳ ಮೊದಲ ಕ್ಷೇತ್ರ ಪ್ರಯೋಗ ವಿಟ್ಲ ಸಿಪಿಸಿಆರ್ ಐ ಪ್ರಾ ದೇಶಿಕ ಕೇಂದ್ರದಲ್ಲಿ ನಡೆಯಿತು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮೊದಲ ನಾಟಿ ಕಾರ್ಯ ಮಾಡಿದರು.ಆತ್ಮನಿರ್ಭರ ಕೋಕೋ ಕ್ಷೇತ್ರ 2047ಕ್ಕೆ ಮಾರ್ಗಸೂಚಿ ಕಾರ್ಯಕ್ರಮದಲ್ಲಿ ಹೊಸ ಕ್ರೈಲೋ ಕೋಕ್ಕೋ ಗಿಡಗಳ ಹಾಗೂ ವಿಟ್ಲ ಕುಬ್ಜ ತಳಿಯ ಅಂಗಾಂಶ ಕೃಷಿಯ ಗಿಡಗಳನ್ನು ಅವರು ಪ್ರಾಯೋಗಿಕ ನಾಟಿ ಮಾಡಿದರು ಗ್ಲೋಬಲ್ ವಾರ್ಮಿಂಗ್ ಮತ್ತು ಹಳದಿರೋಗದಿಂದ ಅಡಿಕೆ ಕೃಷಿಕರು ತತ್ತರಿಸಿದ್ದಾರೆ ಇಂಥ ಸಂದರ್ಭ ಪ್ರಯೋಗಗಳು ಅವಶ್ಯ ಎಂದವರು ಹೇಳಿದರು.
ಕೊಕೊ ಬೆಳೆಗೂ ಮಹತ್ವ ನೀಡಿ:
ಭಾರತದ ಈಶಾನ್ಯ ಭಾಗದಲ್ಲಿ ಕೊಕೋ ಬೆಳೆಗೆ ಮಹತ್ವ ನೀಡಿದಂತೆ ದೇಶದ ಎಲ್ಲೆಡೆ ಬೆಳೆಯಬೇಕು. ಭಾರತದಲ್ಲಿ ಚಾಕಲೇಟಿನಲ್ಲಿ ಸಕ್ಕರೆ ಜಾಸ್ತಿ, ಕೋಕೋ ಅಂಶ ಕಡಿಮೆ. ಕೋಕೋ ಹೆಚ್ಚು ಬಳಕೆಯಾಗಬೇಕು. ಈಗಿನ ಗುಣಮಟ್ಟ ಸಾಲದು. ಪ್ಯಾಕಿಂಗ್ ಕೂಡಾ ಕಳಪೆಯಾಗಿದೆ ಎಂದು ಐಸಿಎಆರ್ ನಿವೃತ್ತ ಡಿಡಿಜಿ ಡಾ.ಎನ್.ಕೆ.ಕೃಷ್ಣ ಕುಮಾರ್ ಹೇಳಿದರು.
ಸಿ.ಪಿ.ಸಿ.ಆರ್.ಐ.ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್, ಆಂಧ್ರಪ್ರದೇಶ ವೈ.ಎಸ್.ಆರ್.ಎಚ್.ಯು. ಸಂಶೋಧನೆ ನಿರ್ದೇಶಕಿ ಡಾ.ಎಸ್.ಸೂರ್ಯ ಕುಮಾರಿ, ಕಾಸರಗೋಡು ಸಿ.ಪಿ.ಸಿ.ಆರ್.ಐ. ನಿವೃತ್ತ ಮುಖ್ಯಸ್ಥ ಡಾ.ಪಿ.ಚೌಡಪ್ಪ, ಬೆಂಗಳೂರು ಐಸಿಎಆರ್ ನಿರ್ದೇಶಕ ಡಾ.ಎಂ.ಪ್ರಭಾಕರ್ ಮತ್ತು ವಿಜ್ಞಾನಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲ್ಪ ಸ್ಮಾರ್ಟ್ ಪೋಲ್, ಡಿಸೀಸ್ ಮೆನೇಜ್ ಮೆಂಟ್ ಕರಪತ್ರ ಬಿಡುಗಡೆಗೊಳಿಸಲಾಯಿತು. ಬಳಿಕ ವಿವಿಧ ಸಂಶೋಧನೆ ಮತ್ತು ವಿಧಾನಗಳ ಬಗ್ಗೆ ವಿಜ್ಞಾನಿಗಳಾದ ಡಾ.ಎನ್.ಕೆ.ಕೃಷ್ಣ ಕುಮಾರ್, ಡಾ.ಎಸ್.ಅಲೈನ್ ಅಪ್ಸರಾ, ಡಾ.ಮಿನಿಮೋಲ್ ಜಿ.ಎಸ್., ಡಾ.ರವಿ ಭಟ್, ವಿಜಯ ಕುಮಾರ್ ಸಿ. ಮತ್ತಿತರರು ಮಾಹಿತಿ ನೀಡಿದರು. ವಿಟ್ಲ ಸಿ.ಪಿ.ಸಿ.ಆರ್.ಐ. ಮುಖ್ಯಸ್ಥ ಡಾ. ಎಂ.ಕೆ.ರಾಜೇಶ್ ಸ್ವಾಗತಿಸಿದರು. ಕಾಸರಗೋಡು ಸಿ.ಪಿ.ಸಿ.ಆರ್.ಐ.ವಿಜ್ಞಾನಿ ಡಾ.ರವಿ ಭಟ್ ವಂದಿಸಿದರು
ಬಳಿಕ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ವಿಜ್ಞಾನಿಗಳಾದ ಡಾ. ಎನ್.ಕೆ. ಕೃಷ್ಣ ಕುಮಾರ್, ಡಾ. ಎಸ್. ಅಲೈನ್ ಅಪ್ಸರಾ, ಡಾ. ಮಿನಿಮೋಲ್ ಜಿ.ಎಸ್., ಡಾ. ರವಿ ಭಟ್ ಮತ್ತು ವಿಜಯ ಕುಮಾರ್ ಸಿ. ಕೃಷಿ ವಿಧಾನಗಳ ಕುರಿತು ಮಾಹಿತಿ ನೀಡಿದರು. ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ. ಎಂ.ಕೆ. ರಾಜೇಶ್ ಸ್ವಾಗತಿಸಿ, ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ. ರವಿ ಭಟ್ ಧನ್ಯವಾದ ಸಮರ್ಪಿಸಿದರು.
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)
| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)