ಪ್ರಮುಖ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗೆ ವೇಗ

| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಕೆಲಗಳಿಗೆ ವೇಗ ದೊರಕಿದ್ದು, ಮುಂದಿನ 15 ವರ್ಷಗಳನ್ನು ದೃಷ್ಟಿಯಾಗಿರಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. video link follows

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ ಸಹಕಾರದೊಂದಿಗೆ 22.59 ಕೋಟಿ ರೂ ವೆಚ್ಚದಲ್ಲಿ, ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಗಾಣದಪಡ್ಪುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬುಧವಾರ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸ ಕಾರ್ಯ ನೆರವೇರಿಸಿದರು.

ಜಾಹೀರಾತು
VNR GOLD

ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನಾರಾಯಣಗುರು ಮಂದಿರವರೆಗೆ ಹಲವಾರು ವರ್ಷಗಳಿಂದ ಬಾಕಿಯಾಗಿದ್ದ ಚತುಷ್ಪಥ ರಸ್ತೆಯ ಕನಸು ನನಸಾಗುತ್ತಿದೆ. 22.59 ಕೋಟಿ ರೂ ವೆಚ್ಚದಲ್ಲಿ ಇದು ಚತುಷ್ಪಥ ರಸ್ತೆ ಆಗಲಿಕ್ಕಿದೆ. ಇದಕ್ಕಾಗಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. 34.53 ಕೋಟಿ ರೂಗಳನ್ನು ಪುಂಜಾಲಕಟ್ಟೆ ಹೆದ್ದಾರಿಯ ನಿರ್ವಹಣೆಗೆ ಮಂಜೂರಾಗಿದ್ದು, ಈ ಕಾಮಗಾರಿಗಳಿಗೂ ಶಿಲಾನ್ಯಾಸ ಮಾಡಲಾಗಿದೆ ಎಂದು ಕ್ಯಾ. ಚೌಟ ಹೇಳಿದರು. ಇಂದು ಭಾರತಕ್ಕೆ ವಿಶೇಷ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳನ್ನು ಗುಜರಾತ್ ಸಿಎಂ ಮತ್ತು ಭಾರತದ ಪ್ರಧಾನಿಯಾಗಿ ಪೂರೈಸಿದ್ದು, ಅವರ ನೇತೃತ್ವದಲ್ಲಿ ಎಲ್ಲ ಕಡೆ ಅಭಿವೃದ್ಧಿ ಆಗುತ್ತಿದೆ ಎಂದರು.

ಬ್ರಹ್ಮರಕೂಟ್ಲು ಟೋಲ್ ಬಂದ್:

ಬಿ.ಸಿ.ರೋಡ್ ನಿಂದ ಬೆಂಗಳೂರು ಮತ್ತು ಪುಂಜಾಲಕಟ್ಟೆ ರಸ್ತೆ ಒಂದು ಹಂತಕ್ಕೆ ಬಂದ ನಂತರ ಬ್ರಹ್ಮರಕೂಟ್ಲು ಟೋಲ್ ಅನ್ನು ಬಂದ್ ಮಾಡುತ್ತೇವೆ. ಆ ವಿಚಾರದಲ್ಲಿ ಯಾರೂ ನಾಟಕ ಮಾಡುವ ಅಗತ್ಯವಿಲ್ಲ. ಈ ವರ್ಷಾರಂಭದಲ್ಲೇ ನಾನು ಹೆದ್ದಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಅಧಿಕಾರಿಗಳು ಎಲ್ಲ ವಿವರಗಳನ್ನು ತಿಳಿದುಕೊಂಡಿದ್ದಾರೆ. ಈ ಟೋಲ್ ಅನ್ನು ತೆಗೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಾಣಿ ಸಂಪಾಜೆ ಚತುಷ್ಪಥ:

ಮಾಣಿಯಿಂದ ಸಂಪಾಜೆ ವರೆಗಿನ ಚತುಷ್ಪಥ ರಸ್ತೆಯ ಡಿಪಿಆರ್ ಆಗುತ್ತಿದೆ. ಜತೆಜತೆಗೆ ಕಾಮಗಾರಿ ಆಗುವ ವೇಳೆ 50 ಕೋಟಿ ರೂ ನಿರ್ವಹಣಾ ವೆಚ್ಚವನ್ನೂ ಇರಿಸಲಾಗಿದೆ. ಮುಂದಿನ ಮೂರರಿಂದ ನಾಲ್ಕು ರಸ್ತೆವರೆಗೆ ಸುಸಜ್ಜಿತವಾಗಿ ಮಾಣಿಯಿಂದ ಸಂಪ್ಯದವರೆಗೆ ಸರ್ವೀಸ್ ರೋಡ್ ಹಾಗೂ ಮಾಣಿ ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.

ತಲಪಾಡಿಯಿಂದ ಕುಂದಾಪುರ ಸರ್ವೀಸ್ ರಸ್ತೆ:

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಹೆದ್ದಾರಿಗಳ ಕೆಲಸಗಳೂ ಆಗುತ್ತಿದೆ. ರಾ.ಹೆ.66 ತಲಪಾಡಿಯಿಂದ ಕುಂದಾಪುರವರೆಗೆ ಪೂರ್ತಿ ರಸ್ತೆಗೆ ಸರ್ವೀಸ್ ರಸ್ತೆ ಆಗಲಿದೆ ಎಂದವರು ಹೇಳಿದರು..

ಮಂಗಳೂರು ನಗರಕ್ಕೆ ಬೈಪಾಸ್:

ಎನ್.ಎಂ.ಪಿ.ಟಿ. ಪೋರ್ಟ್ ಟ್ರಾಫಿಕ್ ನಿಯಂತ್ರಣಕ್ಕೆ ಎಲಿವೇಟೆಡ್ ಫ್ಲೈಓವರ್ ನಿರ್ಮಾಣವಾಗಲಿದೆ. ಕುಳೂರು ಸೇತುವೆಯಿಂದ ಬೈಕಂಪಾಡಿವರೆಗೆ ಫ್ಲೈಓವರ್ ಆಗಲಿದೆ. ನಂತೂರು ಕೆಪಿಟಿ ಮತ್ತು ಪದ್ವಾ ಹೈಸ್ಕೂಲ್ ಮಧ್ಯೆ ಇರುವ ಸಮಸ್ಯೆಗೆ ಸಂಬಂಧಿಸಿ ಫ್ಲೈಓವರ್ ಮಾಡಲು ಅವಕಾಶ ಇಲ್ಲದ ಕಾರಣ ಕೆಳಗಿನಿಂದಲೇ ಹೋಗುವ ರಸ್ತೆ (ಅಂಡರ್ ಪಾಸ್) ಕಾಮಗಾರಿ ನಡೆಯಲಿದೆ.ಮಂಗಳೂರು ನಗರಕ್ಕೆ ಬೈಪಾಸ್ ರಸ್ತೆ ಆಗುವ ಬೇಡಿಕೆ ಇದೆ. ಸುರತ್ಕಲ್ ನಿಂದ ಬಿ.ಸಿ.ರೋಡ್  ಬೈಪಾಸ್ ರಸ್ತೆ ನಿರ್ಮಾಣಕ್ಕೆ ಯೋಚನೆಗಳು ಇವೆ ಎಂದು ಸಂಸದ ಕ್ಯಾ.ಚೌಟ ಹೇಳಿದರು.

ಸಿಂಗಲ್ ಫ್ಲೈಓವರ್ ಸಮಸ್ಯೆ:

ನಗರದ ಒಳಗಿರುವ ಹೆದ್ದಾರಿಗೆ ಕಾಯಕಲ್ಪ ನೀಡಲಾಗುವುದು. ಹೆದ್ದಾರಿ ಸಮಗ್ರ ಅಭಿವೃದ್ಧಿಗೆ ಶಾಸಕರೊಂದಿಗೆ ಮಾತುಕತೆ ಮಾಡಿ, ನಗರ ವ್ಯಾಪ್ತಿ ಒಳಗೆ ಮತ್ತು ಹೊರಗಿನ ಕಡೆಗಳಿಗೆ ಮುಂದಿನ 15 ವರ್ಷಗಳ ಯೋಜನೆ ರೂಪಿಸಲಾಗುವುದು ಕಾಂಗ್ರೆಸ್ ನವರು ಇಡೀ ದೇಶದಲ್ಲಿ ಎಲ್ಲೂ ಇಲ್ಲದಂಥ ಹೆದ್ದಾರಿ ರಚಿಸಿದ್ದಾರೆ. ಎಲ್ಲೂ ಸಿಂಗಲ್ ಫ್ಲೈಓವರ್ ಇಲ್ಲ. ಏಕಮುಖ ಫ್ಲೈಓವರ್ ಮಾಡಿದ್ದಾರೆ. ರಸ್ತೆಯನ್ನು ಎಲ್ಲೆಲ್ಲೂ ತಿರುಗಿಸಿಕೊಂಡು ಹೋಗಿದ್ದಾರೆ. ಒಳಒಪ್ಪಂದ ಮಾಡಿ ಪ್ರತಿಭಟನೆ ಮಾಡಿದರೆ ಏನೂ ಪ್ರಯೋಜನವಿಲ್ಲ, ಜನರು ದಡ್ಡರಲ್ಲ ಎಂದು ಸಂಸದರು ತಿಳಿಸಿದರು.

ಮೂಲಸೌಕರ್ಯ ಅಭಿವೃದ್ದಿ: ಶಾಸಕ ನಾಯ್ಕ್

ಬಂಟ್ವಾಳದ ಈ ಮುಖ್ಯಭಾಗಕ್ಕೆ ಸೂಕ್ತ ದಿವಸವನ್ನು ಆಯ್ಕೆ ಮಾಡಿ ಶಿಲಾನ್ಯಾಸ ಮಾಡಿದ್ದೇವೆ. ಬಹುಬೇಡಿಕೆಯ ಯೋಜನೆ ಈಡೇರಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್,  ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರದಾಸ್ ಶೆಟ್ಟಿ, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ವಿಕಾಸ್ ಪುತ್ತೂರು, ಸುಲೋಚನಾ ಜಿ.ಕೆ. ಭಟ್, ದಿನೇಶ್ ಅಮ್ಟೂರು, ಮಾಧವ ಮಾವೆ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಆರ್. ಸಿ.ನಾರಾಯಣ ರೆಂಜ ಸಹಿತ ಹಲವರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಕುಡಿಯುವ ನೀರು, ತ್ಯಾಜ್ಯ ಸಮಸ್ಯೆ ಇತ್ಯರ್ಥಕ್ಕೆ 15 ದಿನಗಳ ಗಡುವು

| ಬಂಟ್ವಾಳ ಪುರಸಭೆಯಲ್ಲಿ ಎಂಎಲ್ಎ ರಾಜೇಶ್ ನಾಯ್ಕ್, ಎಂಎಲ್ ಸಿ ಮಂಜುನಾಥ ಭಂಡಾರಿ ಮೀಟಿಂಗ್ (more…)

1 day ago