ಬಂಟ್ವಾಳ: ಚಿಕ್ಕಯ್ಯ ಮಠ ನಾಗರಿಕ ಸೇವಾ ಸಂಘದ ಅಧ್ಯಕ್ಷರಾಗಿ ಭರತ್ ರಾಜ್ ಯಾದವ್ ಚಿಕ್ಕಯ್ಯ ಮಠ ಆಯ್ಕೆಗೊಂಡಿದ್ದಾರೆ.
ಬಿ.ಸಿ.ರೋಡು,ಬಿ.ಮೂಡ ಗ್ರಾಮದ ಚಿಕ್ಕಯ್ಯಮಠ ಬಳಕ ನಾಗರಿಕ ಸೇವಾ ಸಂಘದ ಸಭೆಯು ಭಾನುವಾರ ಚಿಕ್ಕಯ್ಯಮಠ ಹಿರಿಯ ಮಾರ್ಗದರ್ಶಿ ಸುಧಾಕರ ಮಡಿವಾಳ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾಗಿ ಭರತ್ ರಾಜ್ ಚಿಕ್ಕಯ್ಯಮಠ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರವಿರಾಜ್, ಕಾರ್ಯದರ್ಶಿ ಸುಪ್ರೀತ್ ಸಾಲ್ಯಾನ್, ಸಹಕಾರ್ಯದರ್ಶಿ ಭರತ್ ಗಟ್ಟಿ, ಕೋಶಾಧಿಕಾರಿಯಾಗಿ ಸುರೇಶ್ ಸಾಲಿಯಾನ್ ಮೇಮ್ ಸಾಬ್ ಟೈಲರ್ , ಸಾಮಾಜಿಕ ಜಾಲತಾಣ ನಿಶಾಂತ್ ಕುಲಾಲ್ ಇವರನ್ನು ನೇಮಕ ಮಾಡಲಾಯಿತು