ಬಂಟ್ವಾಳ ತಾಲೂಕಿನ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ 252 ಕೋಟಿ ರೂ ವ್ಯವಹಾರ ನಡೆಸಿ,ಒಟ್ಟು 50.30 ಲಕ್ಷ ರೂ.ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಪಿ. ಎಸ್ ಅವರು ತಿಳಿಸಿದ್ದಾರೆ.

ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸದಸ್ಯರಿಗೆ ಶೇ. 14 ಡಿವಿಡೆಂಡ್ ಪ್ರಕಟಿಸಿದರು. ಸಂಘವು ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿ ಹಾಗೂ 8 ಶಾಖೆಗಳನ್ನು ಹೊಂದಿದ್ದು, ಪಾಂಡವರಕಲ್ಲು ಶಾಖೆಯು ಸ್ವಂತಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. 6300 ಸದಸ್ಯರನ್ನೊಳಗೊಂಡಿರುವ ಸಂಘದಲ್ಲಿ 1.60 ಕೋಟಿ ವಿವಿಧ ನಿಧಿಗಳು, 2.05 ಕೋಟಿ ಪಾಲು ಬಂಡವಾಳ, 68.84 ಕೋಟಿ ಠೇವಣಿ, 62.26 ಕೋಟಿ ಹೊರಬಾಕಿ ಸಾಲ ಹೊಂದಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ.ಯಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರ 53 ಮಕ್ಕಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ವಿಶೇಷ ಪ್ರತಿಭೆ ಸನ್ನಿಧಿ ಕಶೆಕೋಡಿ ಅವರನ್ನು ಅಭಿನಂದಿಸಲಾಯಿತು
ಉಪಾಧ್ಯಕ್ಷರಾದ ಕಾಂಚಲಾಕ್ಷಿ, ನಿರ್ದೇಶಕರುಗಳಾದ ವಸಂತ ಮಿತ್ತೊಟ್ಟು, ಈಶ್ವರ ಭಟ್ ಬೋಳಂತೂರು, ಜಯಶ್ರೀ, ಅರವಿಂದ ಭಟ್, ರಾಜೇಂದ್ರ ಹಾರ್ದೊಟ್ಟು, ಜೋನ್ ಸೇರಾ ಉಪಸ್ಥಿತರಿದ್ದರು. ಸಂಘದ ಕಾನೂನು ಸಲಹೆಗಾರರಾದ ಸುರೇಶ್ ಶೆಟ್ಟಿ, ಸತೀಶ್ ಕುಮಾರ್ ಶಿವಗಿರಿ, ಸಂಘದ ಸ್ಥಾಪಕಾಧ್ಯಕ್ಷರಾದ ಕೆ ಎ ಸತೀಶ್ಚಂದ್ರ ಹಾಜರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಣಶೇಖರ ಕೆ. ಅವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸಭೆಗೆ ಮಂಡಿಸಿದರು. ಸಂಘದ ಸಿಬ್ಬಂದಿಗಳಾದ ಶಾಲಿನಿ, ಅಕ್ಷತಾ, ಚೈತ್ರ ಪ್ರಾರ್ಥಿಸಿದರು.ನಿರ್ದೇಶಕರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ ವಂದಿಸಿದರು.ಓಲ್ವಿನ್ ಮೋನಿಸ್ ನಿರೂಪಿಸಿದರು, ಸಂಘದ ಎಲ್ಲಾ ಶಾಖಾ ವ್ಯವಸ್ಥಾಪಕರುಗಳು, ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.



Be the first to comment on "ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ 50.30 ಲಕ್ಷ ರೂ.ಲಾಭ: ಅಧ್ಯಕ್ಷ ಮೋಹನ್ ಪಿ. ಎಸ್"